ಈತ ಭಯಂಕರ ಕಳ್ಳ. ಜೈಲುಗೋಡೆಯ ರಂದ್ರದಲ್ಲಿ ಎಸ್ಕೇಪ್ಗೆ ಯತ್ನಿಸಿದ. ಪ್ರಾಣ ಉಳಿಸಿ ಎಂದು ಗೋಗರೆದ‌

Source: SO News | By Laxmi Tanaya | Published on 12th October 2020, 7:08 PM | National News | Don't Miss |

ಬ್ರಿಜಿಲ್ :  ಕಳ್ಳತನ ಮಾಡಿ  ಜೈಲು ಸೇರಿದ ಕಳ್ಳನೋರ್ವ  ಜೈಲಿನಿಂದ ಪರಾರಿಯಾಗಲು ಯತ್ನಿಸಿ ಜೈಲಿನ ಗೋಡೆಯಲ್ಲಿ  ಸಿಲುಕಿ ಒದ್ದಾಡಿದ ಘಟನೆ ನಡೆದಿದೆ. 

ಬ್ರೆಜಿಲ್ ನ ಮಲೇರಿಯಾ ನಗರದಲ್ಲಿ ಈ ಘಟ‌ನೆ ನಡೆದಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಗೋಡೆಯ ಕಿಂಡಿಯಲ್ಲಿ ಸಿಲುಕಿಕೊಂಡ ವ್ಯಕ್ತಿ  ಕೊನೆಗೆ ತನ್ನ ಪ್ರಾಣ ಉಳಿಸಿ ಎಂದು ಗೋಗರೆದಿದ್ದಾನೆ.

ಹದಿನೆಂಟು ವರ್ಷದ ಯುವಕನೋರ್ವ  ಕಳ್ಳತನ ಮಾಡಿದ್ದ ಆರೋಪದ ಮೇರೆಗೆ ಜೈಲಿಗೆ ಕಳಿಸಲಾಗಿತ್ತು.  ಜೈಲಿಗೆ ಕಳಿಸುತ್ತಿದ್ದಂತೆ ಈತ ಜೈಲಿನಿಂದ ತಪ್ಪಿಸಿಕೊಳ್ಳುವ ದುಸ್ಸಾಹಸಕ್ಕೆ ಇಳಿದುಬಿಟ್ಟ. ಜೈಲಿನ ಗೋಡೆಯಲ್ಲಿ‌ ಚಿಕ್ಕ ರಂಧ್ರದ ಮೂಲಕ ಜೈಲಿನಿಂದ ಪಾರಾಗುವ ಪ್ಲ್ಯಾನ್ ಮಾಡಿದ. ರಂದ್ರದ ಒಳಹೊಕ್ಕಿ ಪರಾರಿಯಾಗುವ ಕಳ್ಳ ಸಿಕ್ಕಿಬಿದ್ದು ಒದ್ದಾಡಿದ .‌ ಅತ್ತ ಹೊರಕ್ಕೂ ಹೋಗಲಾರದೆ, ಇತ್ತ ವಾಪಸ್ ಬರಲಾಗದೇ ಚಡಪಡಿಸಿದ. ತನ್ನ ಜೀವನೆ ಹೋಗುತ್ತೆ ಅಂದುಕೊಂಡ ತಕ್ಷಣ ಕಾಪಾಡಿ ಎಂದು ಕೂಗಿಕೊಂಡ. 

ಈತನ ಖತರ್ನಾಕ್ ಐಡಿಯಾಕ್ಕೆ ಬೆಸ್ತು ಬಿದ್ದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಆರೋಪಿಯ ಜೀವ ರಕ್ಷಿಸಿದ್ದಾರೆ. ಈತ ಭಯಂಕರ ಆಸಾಮಿ ಎಂದರಿತ ಪೊಲೀಸರು ಇನ್ನಷ್ಟು ಭದ್ರತೆ ನೀಡಿ ಮತ್ತೊಂದು ಜೈಲಿಗೆ ರವಾನಿಸಿದ್ದಾರೆ.

Read These Next

ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಭೀಮಾ ನದಿಗೆ 123000 ಕ್ಯುಸೆಕ್ ನೀರು ಬಿಡುಗಡೆ

ಕಲಬುರಗಿ : ಭೀಮಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 108000 ಕ್ಯುಸೆಕ್ ...

ಟಿಆರ್‌ಪಿ ತಿರುಚಿದ ಪ್ರಕರಣ; ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ ಗೆ ಸಮನ್ಸ್

ಹೊಸದಿಲ್ಲಿ: ಈಗ ನಡೆಯುತ್ತಿರುವ ಟಿಆರ್‌ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶುಕ್ರವಾರ ರಿಪಬ್ಲಿಕ್ ಟಿವಿಯ ಮುಖ್ಯ ...

ಬಿಕಾಂ ಫೈನಲ್ ಪರೀಕ್ಷೆಯಲ್ಲಿ ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜು ಸಾಧನೆ.

ಭಟ್ಕಳ : ಅಂಜುಮನ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನ ಬಿ.ಕಾಂ ಅಂತಿಮ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ...