ಭಟ್ಕಳ: ಕರ್ನಾಟಕದಲ್ಲಿ ಮಾಧ್ಯಮಗಳಿಗೆ ಜನಿವಾರ ತೊಡಿಸಲಾಗಿದೆ: ಶಶಿಧರ ಭಟ್

Source: S O News | By MV Bhatkal | Published on 1st August 2021, 7:25 PM | Coastal News |

ಭಟ್ಕಳ: ವರ್ತಮಾನದಲ್ಲಿ ಮಾಧ್ಯಮ ಕ್ಷೇತ್ರ ಆತಂಕವನ್ನು ಎದುರಿಸುತ್ತಿದ್ದು, ರಾಜ್ಯದ ಹೆಚ್ಚಿನ ಮಾಧ್ಯಮಗಳಿಗೆ ಜನಿವಾರ ತೊಡಿಸಲಾಗಿದೆ ಎಂದು ಹಿರಿಯ ಪತ್ರಕರ್ತ, ಬಾಲಾಜಿ ಮಿಡಿಯಾ ಗ್ರೂಪ್‍ನ ಮುಖ್ಯಸ್ಥ ಶಶಿಧರ ಭಟ್ ಆಕ್ರೋಶವನ್ನು ಹೊರಹಾಕಿದ್ದಾರೆ.

ಅವರು ಶನಿವಾರ ಸಂಜೆ ಇಲ್ಲಿನ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಪಕ್ಕದ ಕಮಲಾವತಿ ರಾಮನಾಥ ಸಭಾಗೃಹದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರಕನ್ನಡ ಜಿಲ್ಲಾ ಘಟಕದ ವತಿಯಿಂದ ನೀಡಲಾದ ಹರ್ಮನ್ ಮೊಗ್ಲಿಂಗ್ ರಾಜ್ಯಮಟ್ಟದ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಇಂದಿನ  ಮಾಧ್ಯಮ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ನೋಡಿದರೆ ಆತಂಕ ಉಂಟಾಗುತ್ತಿದೆ.  ಮಾಧ್ಯಮದವರೇ ಕೋಮುವಾದಿಗಳಾಗುತ್ತಿದಾರೆ.  ನನ್ನ ಮಾಧ್ಯಮ ಕ್ಷೇತ್ರದ ಅವಧಿಯಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಜನರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದೇನೆ. ಕಾರಣ ಈ ವರ್ಗದ ಜನರಿಗೂ ಅವಕಾಶ ಸಿಗಬೇಕು ಎಂಬ ಉದ್ದೇಶ ನನ್ನದಾಗಿದೆ ಎಂದರು.

ದೇವರಾಜು ಅರಸು ಅವಧಿಯಲ್ಲಿ ಕೆಲಸ ಆರಂಭಿಸಿದ ನಾನು ರಾಜ್ಯ, ರಾಷ್ಟ್ರೀಯ ಪತ್ರಿಕಾ ರಂಗದಲ್ಲಿ ಕೆಲಸ ಮಾಡಿದ್ದು ನಾನು ಕೆಲಸ ಮಾಡಿದ ಸಂಸ್ಥೆ ಅನುಭವ ಮಂಟಪದಂತೆ ಬೆಳೆಸಿದ್ದೇನೆ. ಬಹುತೇಕ ಮಾಧ್ಯಮಕ್ಕೆ ಜನಿವಾರ ಹಾಕಲಾಗಿದೆ. ಮಾಧ್ಯಮದ ಹೊಣೆಗಾರಿಕೆ ಮರೆತಿದ್ದೇವೆ. ಭಾರತ ಎಂದರೆ ಬಹುತ್ವದ ದೇಶವಾಗಿದೆ. ನಮ್ಮಲ್ಲಿ ಮೊದಲು ಸಾಮಾಜಿಕ ಬದ್ಧತೆ ಬೇಕಿದೆ. ಜಾತಿ ಕೋಮಿನ ಅನುಗುಣವಾಗಿ ಸಮಾಜ ಒಡೆಯುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ  ಶಾಸಕ ಸುನೀಲ್ ನಾಯ್ಕ ಮಾತನಾಡಿ  ಮಾಧ್ಯಮಗಳು ಜನಪರವಾದ ಕೆಲಸ ಮಾಡಬೇಕೇ ಹೊರತು ಜನರಿಗೆ ತೊಂದರೆಯಾಗುವ ರೀತಿಯಲ್ಲಿ ತಮ್ಮ ಸುದ್ದಿಯನ್ನು  ಪ್ರಕಟಿಸಬಾರದು, ಪತ್ರಿಕೆಗಳು  ಜನರಿಗೆ ಸಮಾಜದ ಆಗುಹೋಗುಗಳ ಸುದ್ದಿ ಸಮಾಚಾರವನ್ನು ಮೌಲ್ಯಯುತವಾಗಿ ತಲುಪಿಸುವ ಕೆಲಸ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಪತ್ರಕರ್ತರ ಸೇವೆ ಸಮಾಜಕ್ಕೆ ಆಗಬೇಕಿದೆ ಎಂದರು. ಕೋವಿಡ ಸಮಯದಲ್ಲಿ ಪತ್ರಕರ್ತರ ಸೇವೆ ಅತ್ಯಂತ ಉತ್ತಮ ಹಾಗೂ ಕಷ್ಟದಲ್ಲಿ ಕೆಲಸ ನಿರ್ವಹಿಸಿದ್ದಾರೆ. ನಿಜವಾಗಿಯೂ ಸಂಕಷ್ಟದಲ್ಲಿದ್ದವರು ಮಾಧ್ಯಮ ಮಿತ್ರರು ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಹಾಯಕ ಆಯುಕ್ತೆ ಮಮತಾದೇವಿ ಜಿ. ಎಸ್. ಮಾತನಾಡಿ ' ಪತ್ರಿಕೆ, ಮಾಧ್ಯಮದಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿ ಈ ಸ್ಥಾನಕ್ಕೆ ಬಂದಿದ್ದೇವೆ. ಮಾಹಿತಿ ತಂತ್ರಜ್ಞಾನದ ಕಾಲ ಇದಾಗಿದೆ. ಲೋಷದೋಷ ಸುಧಾರಣೆ ಮಾಡಿಕೊಂಡು ಆಡಳಿತದಲ್ಲಿ ಕೆಲಸ ಮಾಡಲು ಸಹಕಾರಿಯಾಗಲು ಮಾಧ್ಯಮದ ಅವಶ್ಯಕತೆ ಇದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಪ್ರತಿನಿಧಿ ಶಿವಾನಿ ಶಾಂತಾರಾಮ ಮಾತನಾಡಿ ' ಪತ್ರಿಕೆ ಓದುವುದು ಹಿಂದಿನಿಂದ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯ, ಹವ್ಯಾಸದಂತಾಗಿದೆ. ಅದನ್ನೇ ಇಂದಿನ ಪೀಳಿಗೆ ಮುಂದುವರೆಸಿಕೊಂಡು ಬರಬೇಕಾದ ಜವಾಬ್ದಾರಿ ಸಹ ಇದರ. ಪತ್ರಿಕೆ ಎಂಬುದು ಸ್ಪೂಟವಾದ ನಿಖರ ಸುದ್ದಿ ನೀಡುವ ಕೆಲಸದೊಂದಿಗೆ ಬಡವರ, ಸಾಮಾನ್ಯರ ಸಮಸ್ಯೆಗೆ ಪರಿಹಾರ ಸಿಗುವಂತಹ ಪರವಾದ ಸುದ್ದಿಯಾಗಬೇಕು ಹೊರತು ಜನಪ್ರತಿನಿಧಿಗಳ, ಒಂದು ಪಕ್ಷದ ಪರವಾದ ಮಾಧ್ಯಮ, ಸುದ್ದಿ ಆಗಬಾರದು. 

ಭಟ್ಕಳ ಎಜ್ಯುಕೇಶನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ 'ಪತ್ರಿಕಾ ರಂಗದ ಕಟುಸತ್ಯದ ವಿವರಣೆ ಜ್ಞಾನದ ಅವಶ್ಯಕತೆಯಿದ್ದು ಅದರ ಅನುಕರಣೆ ಮಾಡಿದ್ದಲ್ಲಿ ಸಮಾಜದ ಸುಧಾರಣೆ ಸಾಧ್ಯ ಎಂದರು.

ವೇದಿಕೆಯಲ್ಲಿ ಶಾಸಕ ಸುನೀಲ್ ನಾಯ್ಕ ರವರಿಗೆ  ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರಕನ್ನಡ ಜಿಲ್ಲಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಜರ್ನಲಿಸ್ಟ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ಮಾತನಾಡಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ.ಸುಬ್ರಹ್ಮಣ್ಯ ಅವರು ಸ್ವಾಗತಿಸಿದರು. ಜಿಲ್ಲಾ ಸಂಘದ ಹಿರಿಯ ಉಪಾಧ್ಯಕ್ಷ ದೀಪಕಕುಮಾರ ಶೇಣ್ವಿ ಪ್ರಾಸ್ತಾವಿಕ ಮಾತನ್ನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯೂನಿಯನ್ ಜಿಲ್ಲಾ ಹಾಗೂ ತಾಲೂಕಾ ಸಂಘದ ಸದಸ್ಯರು ಇದ್ದರು.

Read These Next

ಲಸಿಕಾ ಮೇಳದಲ್ಲಿ ಗುರಿ ತಲುಪಿದ ಉತ್ತರಕನ್ನಡ ಆರೋಗ್ಯ ಇಲಾಖೆ. ಯಶಸ್ಸಿಗೆ ಕಾರಣರಾದವರಿಗೆ ಡಿಸಿ ಅಭಿನಂದನೆ.

ಕಾರವಾರ : ದೇಶಾದ್ಯಂತ ನಡೆದ ಬೃಹತ್ ಕೋವಿಡ್ ಲಸಿಕಾ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೀಡಲಾದ 85000 ಗುರಿಯನ್ನು ತಲುಪಿಸುವಲ್ಲಿ ...