ಕನ್ನಡ ಮಾಧ್ಯಮದಲ್ಲಿ ಓದಿದ ಗ್ರಾಮೀಣ ಪ್ರತಿಭೆ 'ಹೇಮಾ'ಗೆ ಯುಪಿಎಸ್‌ಸಿಯಲ್ಲಿ 225ನೇ ರ‍್ಯಾಂಕ್

Source: vijaykarnataka | Published on 5th August 2020, 8:14 PM | Coastal News | Don't Miss |

ಕಾರವಾರ: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ, ಅಪ್ಪಟ ಗ್ರಾಮೀಣ ಪ್ರತಿಭೆ ಹೇಮಾ ಶಾಂತಾರಾಮ ನಾಯಕ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 225 ನೇ ರ‍್ಯಾಂಕ್‌ ಪಡೆದು ಮಾದರಿಯಾಗಿದ್ದಾರೆ.
ವಾಸರಕುದ್ರಿಗೆ ಗ್ರಾಮದ ಸರಕಾರಿ ಪ್ರೌಢಶಾಲಾ ನಿವೃತ್ತ ಶಿಕ್ಷಕ ಶಾಂತಾರಾಮ ಬೀರಣ್ಣ ನಾಯಕ ಮತ್ತು ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಮೇಲಿನಗುಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜಮ್ಮ ಎಚ್‌. ನಾಯಕ ಅವರ ಪುತ್ರಿಯಾಗಿರುವ ಹೇಮಾ ಚಿಕ್ಕಂದಿನಿಂದಿಲೆ ಸೃಜಲಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಪ್ರತಿಭಾವಂತೆ.
ತಮ್ಮ ಸಾಧನೆಯ ಕುರಿತು ವಿಜಯಕರ್ನಾಟಕದೊಂದಿಗೆ ಅಭಿಪ್ರಾಯ ಹಂಚಿಕೊಂಡ ಹೇಮಾ ನಾಯಕ'' ಸಾಧನೆಗೆ ಕನ್ನಡ ಅಥವಾ ಇಂಗ್ಲಿಷ್‌ ಮಾಧ್ಯಮದ ತಳಹದಿ ಮುಖ್ಯವಲ್ಲ. ಸಾಧಿಸುವ ಛಲ, ಅಚಲವಾದ ಗುರಿ ಮುಖ್ಯ ಎಂದು ನನಗನಿಸಿದೆ. ನಾನು ಕಲಿತ ಶಾಲಾ-ಕಾಲೇಜುಗಳಲ್ಲಿ ಸಂಸ್ಕಾರಯುತ ಶಿಕ್ಷಣ ದೊರೆತಿದೆ.
ಯುಪಿಎಸ್‌ಸಿಯಲ್ಲಿ ಮುಳಬಾಗಲಿನ ಭರತ್‌ 545ನೇ ರ‍್ಯಾಂಕ್‌: ಕೋಚಿಂಗ್ ಇಲ್ಲದೆ ಸಾಧನೆ!
ಆದರೆ ನಮ್ಮ ಜಿಲ್ಲೆಯಲ್ಲಿಇನ್ನು ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಬೆಳೆದು ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣ ದೊರೆಯವಂತಾಗಬೇಕು. ಎಸ್‌.ಎಸ್‌.ಎಲ್‌.ಸಿ, ಪಿಯುಸಿಯಲ್ಲಿಇಲ್ಲಿಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುತ್ತಾರೆ. ಮುಂದಿನ ಶಿಕ್ಷಣಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾಯರ್ತತೆ ಎದುರಾಗುತ್ತಿದೆ.
ಯುಪಿಎಸ್‌ಸಿ ಫಲಿತಾಂಶ: ಕೃಷಿಕನ ಮಗ ದೇಶಕ್ಕೇ ಫಸ್ಟ್‌, ಟಾಪ್‌ 10ರಲ್ಲಿ 3 ಯುವತಿಯರು!
ಇಲ್ಲಿಯ ನೆಲದಲ್ಲಿಯೂ ಸಹ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಇಂತಹ ಸೌಲಭ್ಯ ಈ ಜಿಲ್ಲೆಯಲ್ಲಿದ್ದರೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ. ನಾನು ಬಿ.ಎಸ್ಸಿ ಓದುತ್ತಿರುವಾಗಲೇ ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್‌ನಲ್ಲಿ ತರಬೇತಿ ಪಡೆದೆ. ಆ ತರಬೇತಿಯೇ ನನಗೆ ಪರೀಕ್ಷೆ ಎದುರಿಸಲು ಪ್ರಥಮ ಮೆಟ್ಟಿಲಾಯಿತು. ನಂತರ ಬೆಂಗಳೂರಿನ ಇನ್‌ಸೈಟ್ಸ್‌ ಐ.ಎ.ಎಸ್‌ ಅಕಾಡೆಮಿಯಲ್ಲಿಸ್ವಲ್ಪದಿನ ತರಬೇತಿ ಪಡೆದಿದ್ದೆ. ವಿಶೇಷವಾಗಿ ಓದಿನಲ್ಲಿ ತೊಡಗಿಸಿಕೊಂಡೆ ಪರೀಕ್ಷೆ ಎದುರಿಸಿದ್ದೆ  ಎಂದಿದ್ದಾರೆ.

Read These Next

ಮಾಸ್ಕ್ ಬಳಕೆ ನಿಯಮ ಉಲ್ಲಂಘಿಸುವವರಿಗೆ ದಂಡ: ನಾಳೆ ಸೆ.25 ರಿಂದ ವಿಶೇಷ ಕಾರ್ಯಾಚರಣೆ: ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ

ಧಾರವಾಡ : ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ...

70 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಆರೋಪ;ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಎ.ಸಿ.ಬಿ. ಪ್ರಕರಣ ದಾಖಲು

ಹೈದರಾಬಾದ್ : ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ತೆಲಂಗಾಣ ರಾಜ್ಯದ ಭ್ರಷ್ಟಾಚಾರ ನಿಗ್ರಹ ...