ಹೊಸದಿಲ್ಲಿ: ಗುಜರಾತ್‌ನಲ್ಲಿ ತಕ್ಕೆ ಚಂಡಮಾರುತದ ಆರ್ಭಟ ಬಿರುಗಾಳಿ ಸಹಿತ ಭಾರೀ ಮಳೆ

Source: VB | Published on 18th May 2021, 5:05 PM | National News |

ಹೊಸದಿಲ್ಲಿ: ಅತ್ಯಂತ ತೀವ್ರ ಸ್ವರೂಪದ ತೌಕ್ತೆ ಚಂಡಮಾರುತ ಸೋಮವಾರ ರಾತ್ರಿ 8 ಗಂಟೆ ಬಳಿಕ ಗುಜರಾತ್ ಕರಾವಳಿಯಲ್ಲಿ ಆರ್ಭಟಿಸಿದೆ. ತಾಸಿಗೆ 185 ಕಿ.ಮೀ.ವೇಗದ ಬಲವಾದ ಬಿರುಗಾಳಿಯೊಂದಿಗೆ ಚಂಡಮಾರುತವು ಸೋಮವಾರ ರಾತ್ರಿ 9:30ರವೇಳೆಗೆ ಗುಜರಾತ್‌ನ ಸೌರಾಷ್ಟ್ರ ಕರಾವಳಿಯತ್ತ ಧಾವಿಸಿದ್ದು, ಭಾರೀ ಮಳೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಪೋರ್‌ ಬಂದರ್‌ ಹಾಗೂ ಭಾವನಗರ ಜಿಲ್ಲೆಯ ಮಹುವಾ ನಡುವೆ ತೌಕ್ತೆ ಚಂಡಮಾರುತ

ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ 6 ಸಾವು

ಮಹಾರಾಷ್ಟ್ರ: ಗುಜರಾತ್ ಕರಾವಳಿಯತ್ತ ಸಾಗುವ ಮುನ್ನ ತೌಕ್ತ ಚಂಡಮಾರುತ ಮುಂಬೈ ನಗರ ಹಾಗೂ ಅದರ ನೆರೆಯ ಪ್ರದೇಶಗಳಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆ ಉಂಟು ಮಾಡಿದೆ. ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಚಂಡಮಾರುತಕ್ಕೆ ಸಂಬಂಧಿಸಿದ ದುರಂತ ಘಟನೆಗಳಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಮೂವರು ರಾಯಗಢ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದರೆ, ಥಾಣೆಯಲ್ಲಿ ಇಬ್ಬರು ಹಾಗೂ ಸಿಂಧುದುರ್ಗದಲ್ಲಿ ಓರ್ವ ಮೃತಪಟ್ಟಿದ್ದಾರೆ. ಮುಂಬೈಯಲ್ಲಿ ನಿಯಂತ್ರಣ ಕಳೆದುಕೊಂಡ 2 ಬಾರ್ಜ್‌ಗಳಲ್ಲಿದ್ದ ಜನರನ್ನು ರಕ್ಷಿಸಲು ಭಾರತೀಯ ನೌಕಾ ಪಡೆಯ 3 ಸಮರ ನೌಕೆಗಳು ಕಾರ್ಯಾಚರಿಸುತ್ತಿವೆ. ದಕ್ಷಿಣ ಮುಂಬೈಯ ಕೊಲಾಬಾ ಪ್ರದೇಶದಲ್ಲಿರುವ ಅಫ್ಘಾನ್ ಚರ್ಚ್‌ನಲ್ಲಿರುವ ಹವಾಮಾನ ಕೇಂದ್ರದಲ್ಲಿ 2 ಗಂಟೆಗೆ ಚಂಡಮಾರುತ ಗಂಟೆಗೆ 144 ಕಿ.ಮೀ. ವೇಗದಲ್ಲಿ ಸಾಗಿರುವುದು ದಾಖಲಾಗಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಪತ್ರಿಕಾ ಹೇಳಿಕೆ ತಿಳಿಸಿದೆ.

ಹಾದುಹೋಗಿರುವುದಾಗಿ ವರದಿಗಳು ತಿಳಿಸಿವೆ. ತೌಕ್ತೆ ಚಂಡಮಾರುತ ಅನಾಹುತ ಉಂಟು ಮಾಡುವ ಹಿನ್ನೆಲೆಯಲ್ಲಿ ಗುಜರಾತ್‌ನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ರಾಜ್‌ಕೋಟ್ ವಿಮಾನ ನಿಲ್ದಾಣವನ್ನು ಮೇ 19ರ ವರೆಗೆ ಮುಚ್ಚಲಾಗಿದೆ. ಇತರ ಮೂರು ಪ್ರಮುಖ ವಿಮಾನ ನಿಲ್ದಾಣಗಳಾದ ಅಹಮದಾಬಾದ್, ಸೂರತ್ ಹಾಗೂ ವಡೋದರಾದಲ್ಲಿ ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಮಂಗಳವಾರದ ವರೆಗೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಭಾರತೀಯ ಸೇನೆ 180 ತಂಡ ಹಾಗೂ 9 ಇಂಜಿನಿಯರ್‌ಗಳನ್ನು ಒಳಗೊಂಡ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಿತ್ತು. ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ ಸುರಿಯುವ ಹಾಗೂ ಪ್ರಬಲ ಗಾಳಿ ಬೀಸುವ ಹಿನ್ನೆಲೆಯಲ್ಲಿ ಗುಜರಾತ್, ಕೇರಳ, ದಾಮನ್ ಹಾಗೂ ದಿಯುನಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿದ್ದ ಲಕ್ಷಾಂತರ ಜನರನ್ನು ಎನ್ ಡಿಆರ್‌ಎಫ್ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ .

ತೌಕ್ತೆ ಚಂಡಮಾರುತವು ಅತ್ಯಂತ ತೀವ್ರತೆಯ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು ಗುಜರಾತ್ ಕರಾವಳಿಗೆ ಧಾವಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ರಾತ್ರಿ 9:00 ಗಂಟೆಗೆ ಪ್ರಕಟಿಸಿದ ಬುಲೆಟಿನ್ ತಿಳಿಸಿದೆ.
 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...