ಭಟ್ಕಳ; ಬಿರುಸಿನ ಗಾಳಿ ಮಳೆ; 6 ವಿದ್ಯುತ್ ಕಂಬಗಳು ದರೆಗೆ 

Source: S.O. News Service | By Manju Naik | Published on 12th June 2019, 9:32 PM | Coastal News | Don't Miss |

ಭಟ್ಕಳ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಬಿರುಸಿನ ಗಾಳಿ ಮಳೆಯಿಂದಾಗಿ ಮಂಗಳವಾರ ರಾತ್ರಿ  ಇಲ್ಲಿನ ಜಾಲಿ ಪಟ್ಟಣ ಪಂಚಾಯತ  ವ್ಯಾಪ್ತಿಯ ಗುರು ಸುಧೀಂದ್ರ ಕಾಲೇಜ್, ಹೀಬದಿನ ಮರ ಬುಡ ಸಮೇತ ಬಿದ್ದು ಡಿ.ಪಿ.ಕಾಲೋನಿ ರಸ್ತೆ ಯಲ್ಲಿ ಇರುವ  6 ವಿದ್ಯುತ್ ಕಂಬಗಳು ರಸ್ತಗೆ ಉರುಳಿಬಿದ್ದೆ.ರಾತ್ರಿಯಿಂದಲೆ ಬಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕಂಬಗಳು ಬಿದ್ದ ಪರಿಣಾಮ  ವಿಷ್ಣು ನಾಯ್ಕ ಮತ್ತು ದಾಕ್ಷಾಣೀ ರೆಡ್ಡಿ ಇವರ ಮನೆಗಳು ಮೇಲೆ ಚಾವಣಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಹೆಸ್ಕಾಂ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಸ್ಥಳಕ್ಕೆ ಆಗಮಿಸಿ ಸುಮಾರು  1 ಲಕ್ಷ 25  ಸಾವಿರ  ರೂಪಾಯಿ" ಅಧಿಕ ಹಾನಿಯಾಗಿದೆ ಎಂದು ತಿಳಿಸಿದಾರೆ.

ಈ ಸಂದರ್ಭದಲ್ಲಿ ಜಾಲಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ವೇಣುಗೋಪಾಲ ಶಾಸ್ತ್ರಿ. ಜಾಲಿ  ಗ್ರಾಮ ಲೆಕ್ಕಾಧಿಕಾರಿ ಮನೋಜ್, ಉಪವಲಯ ಅರಣ್ಯಧಿಕಾರಿ ರವಿ ಎಸ್, ಗ್ರಾಮಸಾಯಕರಾದ ವಾಸು ಶೆಟ್ಟಿ, ಮಾಸ್ತಯ್ಯ ನಾಯ್ಕ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾರೆ.

Read These Next

ನಮ್ಮಲ್ಲಿನ ಅಸಮತೆಯ ನಡುವೆಯೂ ಸಮಾಜ ಕಟ್ಟುವ ಕಾರ್ಯದಲ್ಲಿ ಒಂದಾಗಬೇಕು- ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಕಾರವಾರ; ಎಲ್ಲ ಕಾಲದಲ್ಲೂ ಅಸಮಾನತೆ ಇದ್ದೇ ಇದೆ. ಐದು ಬೆರಳುಗಳು ಒಂದಕ್ಕೊಂದು ಸಮವಿಲ್ಲದಿದ್ದರೂ ಕೆಲಸ ಮಾಡುವಾಗ ಒಂದಾಗಿ ಕೆಲಸ ...