ದೇವಸ್ಥಾನ ಆವರಣಗೋಡೆ ಕುಸಿತ ವಿದ್ಯಾರ್ಥಿನಿ ಸಾವು

Source: sonews | By Staff Correspondent | Published on 29th June 2018, 6:30 PM | Coastal News | State News | Don't Miss |

ಉಡುಪಿ: ದೇವಸ್ಥಾನದ ಆವರಣ ಗೋಡೆ ಕುಸಿದ ಪರಿಣಾಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೇರೂರು ಗ್ರಾ.ಪಂ.ವ್ಯಾಪ್ತಿಯ ಉಳ್ಳೂರು ಗ್ರಾಮ ಕಾಕ್ತೋಟ ನಂದಿಕೇಶ್ವರ ದೇವಸ್ಥಾನ ಬಳಿ ಘಟನೆ ಎಂಬಲ್ಲಿ ಶುಕ್ರವಾರ ಜರಗಿದೆ.

ಗೋಡೆ ಕುಸಿತದಿಂದಾಗಿ ಮೃತಪಟ್ಟ ವಿದ್ಯಾರ್ಥಿನಿಯನ್ನು ಕಾಕ್ತೋಟ ಶ್ಯಾನಾಪುರ ಮನೆ ನಿವಾಸಿ ಧನ್ಯಾ ಶೆಟ್ಟಿ (22) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಧನ್ಯಾ ಮನೆಯಿಂದ 100 ಮೀಟರು ಅಂತರದಲ್ಲಿದ್ದ ಜಟ್ಟಿಗೇಶ್ವರ ದೈವಸ್ಥಾನಕ್ಕೆ ಹೋಗುತ್ತಿದ್ದಾಗ ಅದರ ಪೂರ್ವ ಪಾರ್ಶ್ವದ ಆವರಣ ಕುಸಿದು ಅವಳ ಮೇಲೆ ಬಿದ್ದಿದೆ. ಅದೇ ವೇಳೆಗೆ ಬಿರುಸಾದ ಮಳೆ ಬೀಳುತ್ತಿತ್ತು. ಆವರಣದ ಕಲ್ಲುಗಳ ಅಡಿ ಸಿಲುಕಿದ್ದ ಅವಳ ಮೇಲೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಳಾದಳೆಂದು ಶಂಕಿಸಲಾಗಿದೆ.

ಆ ದಾರಿಯಾಗಿ ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದ ೧೦ನೇ ತರಗತಿ ವಿದ್ಯಾರ್ಥಿ ಕೃತನ್ ಶೆಟ್ಟಿ ಕಲ್ಲುಗಳ ಅಡಿ ಕೊಡೆ, ತಲೆ ಕೂದಲು ನೋಡಿ ಆಕೆಯ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾನೆ. ನೆರೆಕೆರೆಯವರು ಬಂದು ಕಲ್ಲುಗಳನ್ನು ಸರಿಸಿ ಅವಳನ್ನು ಮೇಲೆತ್ತುವುದರೊಳಗೆ ಅವಳು ಇಹಲೋಕದ ಯಾತ್ರೆ ಮುಗಿಸಿದ್ದಳು.

ಹೈದರಾಬಾದಿನಲ್ಲಿ ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿರುವ ಚಂದ್ರಶೇಖರ ಶೆಟ್ಟರ ಮೂವರು ಪುತ್ರಿಯರಲ್ಲಿ ಧನ್ಯಾ ಕೊನೆಯವಳು. ಕಲಿಕೆಯಲ್ಲಿ ಪ್ರತಿಭಾವಂತಳಾಗಿರುವ ಅವಳು ಮಂಗಳಗಂಗೋತ್ರಿಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಮುಗಿಸಿದ್ದಾಳೆ. ಈಗ ರಜೆ ಇರುವುದರಿಂದ ಮನೆಗೆ ಬಂದಿದ್ದಳು. ದೈವಭಕ್ತೆಯಾಗಿದ್ದ ಅವಳು ಪ್ರತಿದಿನ ಬೆಳಿಗ್ಗೆ ಮನೆ ಸಮೀಪದ ನಾಗ ಮತ್ತು ಜಟ್ಟಿಗೇಶ್ವರ ದೈವಕ್ಕೆ ಕೈಮುಗಿಯುವ ರೂಢಿ ಬೆಳೆಸಿಕೊಂಡಿದ್ದಳು. ಇಂದು ಅದೇ ಉದ್ದೇಶಕ್ಕೆ ಬರುತ್ತಿದ್ದಾಗ ದುರಂತ ಸಂಭವಿಸಿದೆ. ಅವಳ ದೇಹ, ಉರುಳಿದ ಆವರಣದ ಕೊನೆಯ ಭಾಗದಲ್ಲಿ ಇತ್ತು. ಎರಡು ಹೆಜ್ಜೆ ಮುಂದೆ ಹೋಗಿದ್ದರೆ ಅಪಾಯ ಸಂಭವಿಸುತ್ತಿರಲಿಲ್ಲ. ಅವಳಿಗೆ ಅವಳಿಜವಳಿ ಅಕ್ಕಂದಿರಿದ್ದು, ಮೊದಲಿನವಳಿಗೆ ವಿವಾಹವಾಗಿದೆ. ಎರಡನೆಯವಳಿಗೆ ನಿಶ್ಚಿತಾರ್ತವಾಗಿದೆ.

ದೈವಸ್ಥಾನದ ಸ್ಥಳ ಅವಳು ನಡೆದು ಹೋಗಬೇಕಾಗಿದ್ದ ದಾರಿಗಿಂತ ೩ ಮೀಟರು ಎತ್ತರದಲ್ಲಿದೆ. ಕಳೆದ ವರ್ಷ ದಾರಿಯ ಬುಡದಿಂದ ದೈವಸ್ಥಾನದ ಅಂಗಳದ ಮಟ್ಟದ ವರೆಗೆ ಗೋಡೆ ಕಟ್ಟಿ, ಮರಳಿನ ಅಭಾವದ ಕಾರಣ ಅಲ್ಲಿಗೇ ನಿಲ್ಲಿಸಲಾಗಿತ್ತು. ಈ ವರ್ಷ ಅದರ ಮೇಲೆ ಒಂದೂವರೆ ಮೀಟರು ಎತ್ತರದ ಆವರಣ ಕಟ್ಟಲಾಗಿದೆ. ಇಂದು ಆವರಣದ ೧೨ ಮೀಟರ್ ಉದ್ದದ, ನಾಲ್ಕೂವರೆ ಮೀಟರು ಎತ್ತರದ ಇಡೀ ನಿರ್ಮಾಣ ಕುಸಿದು ಬಿದ್ದಿದೆ. ಇಷ್ಟೇ ಎತ್ತರದ ಉತ್ತರ ದಿಕ್ಕಿನ ಆವರಣದ ಸಮೀಪ ಧನ್ಯಾಳ ದೊಡ್ಡಮ್ಮನ ಮನೆ ಇದೆ. ಆ ಆವರಣವೂ ಅಪಾಯಕಾರಿ ಎಂದು ಭಾವಿಸಿದ ಜನರು ಅದನ್ನು ಕೂಡಾ ಇಂದು ಕೆಡಹಿದರು.

ಮಂಗಳೂರು ಕೊಣಾಜೆಯ ಮಂಗಳಗಂಗೋತ್ರಿ (ಮಂಗಳೂರು ಯುನಿವರ್ಸಿಟಿ) ಕಾಲೇಜಿನಲ್ಲಿ ಮೊದಲ ವರ್ಷದ ಎಂಎಸ್ಸಿ (ಸ್ಟಾಟ್) ವಿದ್ಯಾಭ್ಯಾಸ ಮಾಡುತ್ತಿದ್ದ ಧನ್ಯಾ ಈ ವರ್ಷದ ಪರೀಕ್ಷೆ ಬಳಿಕ ರಜೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ತನ್ನ ಮನೆಗೆ ಮರಳಿದ್ದರು. ಮನೆ ಸಮೀಪದಲ್ಲಿನ ಜಟ್ಟಿಗೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವ ಪರಿಪಾಠ ಹೊಂದಿದ್ದ ಧನ್ಯಾ ಊರಿಗೆ ವಾಪಾಸ್ಸಾದ ದಿನದಿಂದಲೂ ನಿತ್ಯ ಮನೆಯ ಕೂಗಳತೆಯ ದೂರದಲ್ಲಿನ ದೈವಸ್ಥಾನಕ್ಕೆ ಬೆಳಗ್ಗೆ ತೆರಳುತ್ತಿದ್ದು ಎಂದಿನಂತೆ ಶುಕ್ರವಾರದಂದೂ ಕೂಡ ದೈವಸ್ಥಾನಕ್ಕೆ ತೆರಳುತ್ತಿದ್ದು ಈ ವೇಳೆ ಜೋರು ಮಳೆಯಿಂದಾಗಿ ಮಣ್ಣು ಸಡಿಲಗೊಂಡು ದೈವಸ್ಥಾನದ ಕಾಂಪೊಂಡ್ ಗೋಡೆ ಧನ್ಯಾಮೇಲೆರಗಿದೆ. ಗೋಡೆಯ ಕಲ್ಲು ಮಣ್ಣುಗಳಾಡಿಗೆ ಸಿಲುಕಿ ಧನ್ಯಾ ಬಾರದ ಲೋಕಕ್ಕೆ ತೆರಳಿದ್ದಾರೆ.

ಪ್ರತಿಭಾನ್ವಿತವಿದ್ಯಾರ್ಥಿನಿ..
ಉಳ್ಳುರು ನಿವಾಸಿಗಳಾದ ಚಂದ್ರಶೇಖರ್ ಹಾಗೂ ಹೇಮಾ ದಂಪತಿಗಳಮೂವರು ಪುತ್ರಿಯರಲ್ಲಿ ಧನ್ಯಾ ಕಿರಿಯವಳು. ತಂದೆ ಹೈದರಬಾದಿನಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಧನ್ಯಾಳಿಗೆ ಓದುವ ಹಂಬಲವೂ ಜಾಸ್ಥಿಯಾಗಿದ್ದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿ ಬಳಿಕ ಉನ್ನತ ಶಿಕ್ಷಣಕ್ಕೆ ಮಂಗಳೂರು ಸೇರಿದ್ದರು. ಅಲ್ಲಿ ಪ್ರಥಮ ವರ್ಷದ ಶಿಕ್ಷಣ ಮುಗಿಸಿ ರಜೆಯಲ್ಲಿ ಇದೇ ತಿಂಗಳ ಮೊದಲ ವಾರ ಮನೆಗೆ ವಾಪಾಸ್ಸಾಗಿದ್ದು ಜುಲೈ ತಿಂಗಳ ಅಂತ್ಯದಲ್ಲಿ ಕಾಲೇಜು ಪುನರಾರಂಭವಾಗುವುದರಲ್ಲಿತ್ತು.

ಧನ್ಯಾ ಮನೆಯ ಸನಿಹದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನವು ಕಳೆದ ಜನವರಿ ತಿಂಗಳಿನಲ್ಲಿ ನವೀಕರಣಗೊಂಡಿದ್ದು ಇಲ್ಲಿಗೆ ಸುತ್ತಲೂ ಕಟ್ಟಿದ ಕಾಂಪೋಂಡ್ ಗೋಡೆ ಅಭದ್ರ ಸ್ಥಿತಿಯಲ್ಲಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಎಡಿಶನಲ್ ಎಸ್‌ಪಿ ಕುಮಾರಚಂದ್ರ, ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಮರ್ಗದರ್ಶನದಲ್ಲಿ ಬೈಂದೂರು ಎಸ್‌ಐ ತಿಮ್ಮೇಶ್ ಬಿ. ಎನ್. ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಆಗಮಿಸಿ ಮಹಜರು ಮಾಡಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರಿಗೆ ಒಯ್ಯಲಾಯಿತು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಶಂಕರ ಪೂಜಾರಿ, ತಾಪಂ ಸದಸ್ಯರಾದ ಮಹೇಂದ್ರಕುಮಾರ್, ಎಚ್. ವಿಜಯ ಶೆಟ್ಟಿ, ಸ್ಥಳೀಯರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಅಣ್ಣಪ್ಪ ಬಿ., ಪಿಡಿಒ ಗಿರಿಜಾ ವೀರಶೇಖರ್, ಗ್ರಾಮಲೆಕ್ಕಿಗ ಮಂಜು, ಇತರರು ಭೇಟಿ ನೀಡಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...