ಸಂಪತ್ತಿಗಿಂತ ಆರೋಗ್ಯ ಮುಖ್ಯ: ಬಸವರಾಜ್ ಚೇಂಗಟಿ

Source: so news | Published on 12th February 2020, 12:26 AM | State News | Don't Miss |

 


ಚಿಕ್ಕಮಗಳೂರು: ಮಾನವನ ಆರೋಗ್ಯ ಸಂಪತ್ತಿಗಿಂತಲೂ ಮುಖ್ಯವಾಗಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಳಿದರು.
ಅವರು ಇಂದು ನಗರದ ಸಂತ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ವಾತಾವರಣ ಮತ್ತು ಜೀವನ ಶೈಲಿಯಿಂದ ಮಾನವನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದು, ಜಾಗರೂಕತೆಯಿಂದ ಪೌಷ್ಟಿಕ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಜಂತು ಹುಳು ನಮ್ಮ ದೇಹದಲ್ಲಿದ್ದರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಕುಂಠಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಂತುಹುಳು ನಿವಾರಕ ಔಷಧಿಗಳನ್ನು ಉಚಿತವಾಗಿ ವಿತರಿಸುತ್ತಿದೆ. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ವಿದ್ಯಾರ್ಥಿಗಳಲ್ಲಿ ತಾಳ್ಮೆ ಮತ್ತು ಶ್ರದ್ಧೆ ಅಗತ್ಯವಾಗಿದ್ದು, ಓದಿನ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು. ಉತ್ತಮ ಆರೋಗ್ಯ ಹೊಂದಿದಾಗ ಮಾತ್ರ ಸದೃಢ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಜಂತು ಹುಳುವಿನ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದ್ದು, ಶಾಲಾ ಮಕ್ಕಳು ತಮ್ಮ ಮನೆ ಮತ್ತು ನೆರೆಹೊರೆಯವರಲ್ಲಿ ಜಂತು ಹುಳು ನಿವಾರಣಾ ಮಾತ್ರೆ ಸೇವನೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳು ಉತ್ತಮ ಆರೋಗ್ಯವನ್ನು ಹೊಂದಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇದರ ಪ್ರಯೋಜನವನ್ನು ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಆರ್.ಸಿ.ಹೆಚ್ ಅಧಿಕಾರಿ ಡಾ|| ಭರತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಆಶಾ ಮೇಲ್ವಿಚಾರಕಿ ಕಲಾಧರೆ ಮತ್ತು ಜಿಲ್ಲಾ ಆಶಾ ಮೇಲ್ವಿಚಾರಕಿ ಜ್ಯೋತಿ ಅವರು ವೈಯಕ್ತಿಕ ಸ್ವಚ್ಚತೆಯಲ್ಲಿ ಒಂದಾದ ಕೈತೊಳೆಯುವ ಕ್ರಮದ ಪ್ರಾತ್ಯಕ್ಷಿಕೆ ಮೂಲಕ ಸಭಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಸೀಮಾ, ಸಂತ ಬಾಲಕಿಯರ ಪ್ರೌಢಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಅರುಳಮ್ಮ, ಡಿ.ಹೆಚ್.ಒ. ಜಲಜಾಕ್ಷಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ|| ಜೆ.ಎನ್.ಬೇಬಿ, ಡಾ|| ದಿವ್ಯಶ್ರೀ, ಡಾ|| ಶ್ವೇತ, ಸರ್ವ ಶಿಕ್ಷಣ ಅಭಿಯಾನದ ಉಪಯೋಜನಾ ಸಮನ್ವಯಾಧಿಕಾರಿಗಳಾದ ವೆಂಕಟರಮಣ ಮತ್ತು ಸಿದ್ದರಾಮಪ್ಪ ಉಪಸ್ಥಿತರಿದ್ದರು.

Read These Next

ಕೋವಿಡ್-19 ಮಾಹಿತಿಗಾಗಿ ವೆಬ್‍ಸೈಟ್ ಹಾಗೂ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಶುಲ್ಕ-ರಹಿತ ದೂರವಾಣಿ ಲೋಕಾರ್ಪಣೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ವೈರಾಣು 19  (ಕೋವಿಡ್-19)  ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ...

ಕಾರವಾರ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ಮಾಡಲು ಜಿಲ್ಲಾಡಳಿತ ನಿರ್ಧಾರ

ಕೊರೊನಾ ವೈರಸ್ ಹರಡುವಿಕೆ ತಡೆ ನಿಟ್ಟಿನಲ್ಲಿ  ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ  ಮಾಡಲು ಜಿಲ್ಲಾಡಳಿತ ...

ಕೊರೋನಾ ಚಿಕಿತ್ಸೆಗಾಗಿ ತನ್ನ ಐದು ಆಸ್ಪತ್ರೆಗಳಲ್ಲಿ 1,000 ಹಾಸಿಗೆಗಳನ್ನು ಮೀಸಲಿಟ್ಟ ಜಮಾಅತೆ ಇಸ್ಲಾಮೀ ಹಿಂದ್ ;10 ಸಾವಿರ ಸ್ವಯಂ ಸೇವಕರು ಸಕ್ರಿಯ

ಕೇರಳ:  ಕೇರಳದಲ್ಲಿ ಕೊರೋನಾವನ್ನು ಎದುರಿಸಲು ಮುಖ್ಯಮಂತ್ರಿ ಪಿಣರಾಯಿ ಸರಕಾರ ಪ್ರಶಂಸಾರ್ಹ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ...

ಭಟ್ಕಳದಲ್ಲಿ ದೃಢಪಟ್ಟ ಮತ್ತೊಂದು ಕೊರೋನಾ ವೈರಸ್ ಪ್ರಕರಣ; ೭ಕ್ಕೇರಿದ ಪೀಡಿತರ ಸಂಖ್ಯೆ

ಭಟ್ಕಳ: ಶನಿವಾರ ಭಟ್ಕಳದಲ್ಲಿ ಮೂವರಿಗೆ ಕೊರೋನಾ ವೈರಸ್ ದೃಢಪಟ್ಟ ಬೆನ್ನಹಿಂದೆಯೆ ಸಂಜೆಯಾಗುತ್ತಲೆ ಮತ್ತೊಂದು ಕೊರೋನಾ ಸೋಂಕು ಪೀಡಿತ ...

ಕಾರವಾರ: ಕೊರೊನಾ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ ಮಾಡಲು ಜಿಲ್ಲಾಡಳಿತ ನಿರ್ಧಾರ

ಕೊರೊನಾ ವೈರಸ್ ಹರಡುವಿಕೆ ತಡೆ ನಿಟ್ಟಿನಲ್ಲಿ  ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ ಮನೆ ಮನೆ ಸಮೀಕ್ಷೆ  ಮಾಡಲು ಜಿಲ್ಲಾಡಳಿತ ...

ಭಟ್ಕಳದಲ್ಲಿ ಮೂರರಿಂದ ಆರಕ್ಕೇರಿದ ಕೊರೋನಾ ಸೋಂಕು; ಒಂದೇ ದಿನದಲ್ಲಿ ಮೂರು ಪ್ರಕರಣ ಪತ್ತೆ

ಭಟ್ಕಳ: ಶನಿವಾರದಂದು ಭಟ್ಕಳದಲ್ಲಿ  ಮೂರು ಹೊಸ ಕೊರೋನಾ ಸೋಂಕಿತರು ದೃಢಪಟ್ಟಿದ್ದಾಗಿ ವರದಿಯಾಗಿದ್ದು ಇದರಿಂದಾಗಿ ಕೊರೋನಾ ಸೋಂಕು ...

ಭಟ್ಕಳದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ  : ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್

ಕಾರವಾರ: ಕರೋನಾ (ಕೋವಿಡ-19) ವೈರಸ್ ವ್ಯಾಪಕ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ  ಭಟ್ಕಳ ತಾಲೂಕಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ...