ಆರೋಗ್ಯ ರಕ್ಷಣೆಯಲ್ಲಿ ಆರೋಗ್ಯ ಭಾರತಿ

Source: so news | By MV Bhatkal | Published on 17th June 2021, 6:21 PM | Coastal News | Don't Miss |

ಭಟ್ಕಳ:ಕರೋನಾ ಎರಡನೆಯ ಪ್ರಾರಂಭವಾದಾಗಿನಿಂದ ಭಟ್ಕಳದಲ್ಲಿ 'ಆರೋಗ್ಯ ಭಾರತಿ ಭಟ್ಕಳ, ಸಮಿತಿಯ ವೈದ್ಯರ ತಂಡ ಅಂತರ್ಜಾಲ ಸಂಪರ್ಕದ ಮೂಲಕ ಭಟ್ಕಳದ ನಾಗರಿಕರೊಂದಿಗೆ ಪರಿಣಾಮಕಾರಿಯಾಗಿ ಕರೋನ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ   ಸಂದೇಹಗಳನ್ನು ದೂರವಾಣಿ ಮೂಲಕ ಬಗೆಹರಿಸಿಕೊಂಡಿದ್ದಾರೆ. ಆರೋಗ್ಯ ಭಾರತಿ ಮತ್ತು   ಕರೋನ ನಿರ್ವಹಣ ಭಟ್ಕಳ್, ತಂಡದ ಸದಸ್ಯರು ಜಂಟಿಯಾಗಿ  ಎರಡನೆಯ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ತೊಂದರೆಗೆ ಒಳಗಾದವರಿಗೆ   ಅವಶ್ಯವಿದ್ದ ವರಿಗೆ ಔಷಧಿ ಆಹಾರ ಪೂರೈಸುವ ಕೆಲಸವು ನಿಭಾಯಿಸಿದ್ದು, ಕರೋನ ಆತಂಕಕ್ಕೆ ಒಳಗಾದವರಿಗೆ ಸಾಂತ್ವನ ನೀಡುವ, ಲಸಿಕೆ ಮತ್ತು ಕರೋನಾ ಚಿಕಿತ್ಸೆಗೆ ಪೂರಕವಾದ ಮಾಹಿತಿಗಳನ್ನು ಒದಗಿಸುವ ಕಾರ್ಯ ಕಳೆದ ಒಂದು ತಿಂಗಳಿಂದ ನಿರ್ವಹಿಸಿದೆ.
ಇದರೊಂದಿಗೆ  ಲಾಕ್ಡೌನ್ ಪರಿಣಾಮವಾಗಿ ಪರಿವಾರ ನಿರ್ವಹಣೆ ಮಾಡುವುದಕ್ಕೆ ಹೆಣಗಾಡುತ್ತಿರುವ ಶ್ರಮಿಕ ವರ್ಗದ ಕೆಲವು ಪರಿವಾರವನ್ನು ಗುರುತಿಸಿ ಡಾಕ್ಟರ್ I R ಬಟ್, ಡಾಕ್ಟರ್ ವಿಶ್ವನಾಥ್ ನಾಯಕ್, ಡಾಕ್ಟರ್ ಸುನಿಲ್ ಜತಿನ್, ಡಾಕ್ಟರ್ ವಾದಿರಾಜ್ ಭಟ್, ಹಾಗೂ ತಿಲಕ ರಾವ್, ಅವರು ತಾಲೂಕಿನ ಫಲಾನುಭವಿಗಳಿಗೆ ಆರೋಗ್ಯ ಭಾರತಿ ಹೆಸರಲ್ಲಿ ದಿನಸಿ ಕಿಟ್ಟ ವಿತರಿಸಿದರು. ದಿನಸಿ ಕಿಟ್ಟ ತಯಾರಿಸಿ ವಿತರಿಸಲು ಶಿರಾಲಿಯ ಶ್ರೀವಲ್ಲಿ ಸೂಪರ್ ಮಾರ್ಕೆಟ್ ನ ನಾಗರಾಜ್ ದೇವಾಡಿಗ ಅವರು ಸಹಕರಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...