ಎಸಿಬಿ ರದು; ಲೋಕಾಯುಕ್ತ ಬಲವರ್ಧನೆ; ಹೈಕೋರ್ಟ್ ಮಹತ್ತದ ಆದೇಶ

Source: Vb | By I.G. Bhatkali | Published on 12th August 2022, 11:41 AM | State News |

ಬೆಂಗಳೂರು: ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳದ ರಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಗುರುವಾರ ಎಸಿಬಿ ರಚನೆಯನ್ನೇ ರದ್ದು ಮಾಡಿ, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.

ಈ ಸಂಬಂಧ ಬೆಂಗಳೂರು ವಕೀಲರ ಸಂಘ, ಚಿದಾನಂದ ಅರಸ್, ಸಮಾಜ ಪರಿವರ್ತನಾ ಸಮುದಾಯ ಸೇರಿ ಒಟ್ಟು 15 ಅರ್ಜಿಗಳ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾ.ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯ ಪೀಠ ಈ ಆದೇಶ ನೀಡಿದೆ. ಲೋಕಾಯುಕ್ತ ಬಲವರ್ಧನೆಗೆ ಸೂಚಿಸಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ಯಾವುದೇ ಕಾರಣಕ್ಕೂ

ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು
*ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ.
*3 ವರ್ಷದ ಅವ ಧಿಗೆ ಮಾತ್ರ ಅಧಿಕಾರಿಗಳ ನೇಮಕವಾಗ ಬೇಕು. 
*ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ. 
*ಲೋಕಾಯುಕ್ತ ಪೊಲೀಸ್‌ ಠಾಣೆ ಸ್ಥಾನಮಾನ ಮರು ಸ್ಥಾಪನೆ. 
*ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ರದ್ದು. 
*ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗ ಬಾರದು.
*ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು.
*ಲೋಕಾಯುಕ್ತ, ಉಪ ಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು. 
*ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು.

ತಪ್ಪಿಸಿಕೊಳ್ಳಬಾರದು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು ಎಂದು ನ್ಯಾಯಪೀಠವು ಹೇಳಿದೆ. ಅಲ್ಲದೆ, ನ್ಯಾಯಪೀಠದ ಆದೇಶದಿಂದಾಗಿ ಎಸಿಬಿಯಲ್ಲಿ ಇರುವ ಪೊಲೀಸರು ಲೋಕಾಯುಕ್ತ ವ್ಯಾಪ್ತಿಗೆ ಬರಲಿದ್ದಾರೆ. ಕರ್ನಾಟಕ ಲೋಕಾಯುಕ್ತಕ್ಕೆ ಜಾತಿ ಆಧಾರದ ಮೇಲೆ ಲೋಕಾಯುಕ್ತ ಉಪಲೋಕಾಯುಕ್ತರನ್ನು ನೇಮಕ ಮಾಡಬಾರದು. ಅರ್ಹತೆ ಅನುಗುಣವಾಗಿಯೇ ನೇಮಕ ಮಾಡಬೇಕು. ಜತೆಗೆ ಲೋಕಾಯುಕ್ತಕ್ಕೆ 3 ವರ್ಷದ ಅವಧಿಗೆ ಮಾತ್ರ ಅಧಿಕಾರಿಗಳ ನೇಮಕವಾಗಬೇಕೆಂದು ನ್ಯಾಯಪೀಠವು ಹೇಳಿದೆ.

ಸಿದ್ದರಾಮಯ್ಯ ನೇತೃತ್ವದ ಸರಕಾರವು 2016ರ ಮಾ.14ರಂದು ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿ ಆದೇಶ ಹೊರಡಿಸಿತ್ತು. ಈ ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಪಿಐಎಲ್ ಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ಕುರಿತು ತೀರ್ಪು ಪ್ರಕಟಿಸಿದ ಹೈಕೋರ್ಟ್, ಎಸಿಬಿ ರಚನೆಯಲ್ಲೇ ರದ್ದುಮಾಡಿ ಆದೇಶ ಹೊರಡಿಸಿದೆ.

ಎಲ್ಲ ಭ್ರಷ್ಟಾಚಾರ ಪ್ರಕರಣಗಳೂ ಲೋಕಾಯುಕ್ತಕ್ಕೆ ವರ್ಗಾವಣೆ; ಪೊಲೀಸ್ ಠಾಣೆಯ ಸ್ಥಾನಮಾನ:
ಎಸಿಬಿಯಲ್ಲಿ ಬಾಕಿ ಇರುವ ಎಲ್ಲ ಪ್ರಕರಣಗಳೂ ಈ ಕೂಡಲೇ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು.

ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪೊಲೀಸ್‌ ಠಾಣೆಯ ಸ್ಥಾನಮಾನವನ್ನು ರದ್ದುಪಡಿಸಿದೆ. ಲೋಕಾಯುಕ್ತ ಪೊಲೀಸ್ ಠಾಣೆಯ ಸ್ಥಾನಮಾನವನ್ನು ಮರು ಸ್ಥಾಪಿಸಿದೆ. ಇಲ್ಲಿಯವರೆಗೂ ಎಸಿಬಿ ನಡೆಸಿರುವ ತನಿಖೆಯ ಕುರಿತ ದಾಖಲೆಗಳನ್ನೂ ಲೋಕಾಯುಕ್ತಕ್ಕೆ ವರ್ಗಾಯಿಸಬೇಕೆಂದು ಆದೇಶ ಮಾಡಿದೆ.

ಸಿದ್ದರಾಮಯ್ಯನವರ ಸರಕಾರ ಲೋಕಾ ಯುಕ್ತವನ್ನು ನಾಶ ಮಾಡಿದ ಆಸಂದರ್ಭದಲ್ಲಿ ಆಗ ನಾನಿದ್ದ ಪಕ್ಷದ ವತಿಯಿಂದ 8 ದಿನಗಳ ಉಪವಾಸ ಸತ್ಯಾಗ್ರಹ ಮಾಡಿ ಹೋರಾಟ ಮಾಡಿದ್ದೆ. ಅದು ಸಾಕಷ್ಟು ಜನರನ್ನು ಮುಟ್ಟಿತ್ತು. ಅದೇ ಕಾರಣಕ್ಕಾಗಿಯೇ ಭ್ರಷ್ಟ ಬಿಜೆಪಿಯವರೂ ತಾವು ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಎಸಿಬಿ ರದ್ದುಪಡಿಸಿ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಆದರೆ ಎಂದಿನಂತೆ ಆ ಭ್ರಷ್ಟರು ತಮ್ಮ ಮಾತು ಉಳಿಸಿಕೊಳ್ಳಲಿಲ್ಲ. ಎಸ್. ಆರ್.ಹಿರೇಮಠರ ಸುಮಾರು 6 ವರ್ಷಗಳ ಸುದೀರ್ಘ ನ್ಯಾಯಾಂಗ ಹೋರಾಟದ ಫಲವಾಗಿ ಇಂದು ರಾಜ್ಯ ಹೈಕೋರ್ಟ್ ಎಸಿಬಿಯನ್ನು ರದ್ದುಪಡಿಸಿ ತೀರ್ಪು ನೀಡಿದೆ. ಆ ಮೂಲಕ ಜನರಿಗೆ ಭ್ರಷ್ಟಾಚಾರದ ವಿರುದ್ಧ ಒಂದಷ್ಟು ವಿಶ್ವಾಸ ಮೂಡಿಸಿದೆ. ಎಸ್.ಆರ್.ಹಿರೇಮಠರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.
ರವಿ ಕೃಷ್ಣಾರೆಡ್ಡಿ, ಕೆಆರ್‌ಎಸ್ ಪಕ್ಷದ ಅಧ್ಯಕ್ಷ

ಎಸಿಬೀ ಬದಲು ಲೋಕಾಯುಕ್ತ ಸಂಸ್ಥೆಯೆ ಸೂಕ್ತವೆಂದು ಹೈಕೋರ್ಟ್ ನೀಡಿರುವ ಆದೇಶ ನನಗೆ ಸಂತಸ ತಂದಿದೆ. ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡಬೇಕು. ಅಲ್ಲಿಗೆ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕು. ಸರಕಾರ ತನಗೆ ಬೇಕಾದ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ನೇಮಕ ಮಾಡ ಬಾರದು. ಲೋಕಾಯುಕ್ತರೇ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಳ್ಳಲಿ. ಲೋಕಾಯುಕ್ತ ಸಂಸ್ಥೆಗೆ ಅಧಿಕಾರದ ಜೊತೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು.
# ನ್ಯಾ.ಎನ್.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ.

Read These Next

ಹುಬ್ಬಳ್ಖಿ ಧಾರವಾಡ ಮಹಾನಗರಪಾಲಿಕೆಯಿಂದ ಪೌರಸನ್ಮಾನ. ದೇಶದ ಸಮಸ್ತ ಮಹಿಳೆಯರಿಗೆ ಸಂದ ಗೌರವ ಎಂದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

ಹುಬ್ಬಳ್ಳಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ, ಓರಿಸ್ಸಾದ ...

ರೈತರ ಪ್ರತಿಭಟನೆ ವೇಳೆ ಹಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸೂಚಿಸಿತ್ತು: ಹೈಕೋರ್ಟ್‌ಗೆ ಟ್ವಿಟರ್ ಮಾಹಿತಿ

ರೈತರ ಪ್ರತಿಭಟನೆ ವೇಳೆ ಹಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸೂಚಿಸಿತ್ತು: ಹೈಕೋರ್ಟ್‌ಗೆ ಟ್ವಿಟರ್ ಮಾಹಿತಿ