ಮೇಕರ್ಸ್ ಹಬ್ ವಿದ್ಯಾರ್ಥಿಗಳಿಂದ ಸಿದ್ಧಗೊಂಡ “ಫೇಸ್ ಶೀಲ್ಡ್” ತಾಲೂಕಾಸ್ಪತ್ರೆಗೆ ಹಸ್ತಾಂತರ

Source: sonews | By Staff Correspondent | Published on 8th April 2020, 5:22 PM | Coastal News | Don't Miss |

•    ಸ್ವಯಂ ಚಾಲಿತ ಸಾರ್ವಜನಿಕ ಸೆನೆಟೈಸರ್ ಅಭಿವೃದ್ಧಿಗೊಳಿಸುವ ಗುರಿ

ಭಟ್ಕಳ: ಕೊರೋನ ಮಹಾಮಾರಿಯ ವಿರುದ್ಧ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹಗಲಿರುಳು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂಧಿಗಳ ಉಪಯೋಗಕ್ಕಾಗಿಯೇ  ಇಲ್ಲಿನ “ಮೇಕರ್ಸ್ ಹಬ್” ವಿದ್ಯಾರ್ಥಿಗಳಿಂದ ವಿಶೇಷವಾಗಿ ವಿನ್ಯಾಸಗೊಂಡಿರುವ ‘ಫೇಸ್ ಶೀಲ್ಡ್’ ನ್ನು(ಮುಖಕ್ಕೆ ಗುರಾಣಿಯಂತೆ ಬಳಸಲ್ಪಡುವ ಸಾಧನಾ) ಬುಧವಾರ ಇಲ್ಲಿನ ತಾಲೂಕಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿ ಹಾಗೂ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿಗಳಿಗೆ ಹಸ್ತಾಂತರಿಸಿದರು. 

ಈ ಕುರಿತಂತೆ ಮಾಹಿತಿ ನೀಡಿದ ಮೇಕರ್ಸ್ ಹಬ್ ಸದಸ್ಯ ನುಹೇಲ್ ದಾಮೋದಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ಸಕ್ರೀಯರಾಗಿರುವ ವೈದ್ಯಕೀಯ ಸಿಬ್ಬಂಧಿಗಳಿಗೆ ಪೇಸ್ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಧರಿಸುವುದರಿಂದ ಕೊರೋನಾ ಸೋಂಕು ಕಣ್ಣುಗಳಿಗೆ ಹರಡುವುದನ್ನು ತಪ್ಪಿಸಬಹುದು, ಅಂಜುಮನ್  ತಾಂತ್ರಿಕ ಮಹಾವಿದ್ಯಾಲಯದ ಅಲುಮ್ನಿ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅನುಭವನ್ನು ಗಳಿಸಲು ಹುಟ್ಟುಹಾಕಿದ ಮೇಕರ್ಸ್ ಹಬ್ ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಅವಿಷ್ಕಾರಗಳ ಕಡೆ ಹೆಚ್ಚಿನ ಒಲವು ಮೂಡುವಂತಾಗಿದೆ. ವೈದ್ಯಕೀಯ ಸಿಬ್ಬಂಧಿಗಳಿಗೆ ಹಾಗೂ ಕೊರೋನಾ ಹೋರಾಟದಲ್ಲಿ ತಮ್ಮ ಅಳಿಲು ಸೇವೆ ಇರಲಿ ಎಂಬ ಉದ್ದೇಶದೊಂದಿಗೆ ಮೇಕರ್ಸ್ ಹಬ್ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಿಂದ ಈ ಸಾಧನಾ ಗಳನ್ನು ಸಿದ್ಧಗೊಳಿಸಿದ್ದಾರೆ. ಸಧ್ಯಕ್ಕೆ ವೈದ್ಯಕೀಯ ಸಿಬ್ಬಂಧಿಗಳಿಗೆ 60 ಹಾಗೂ ಸಹಾಯಕ ಆಯುಕ್ತರ ಕಚೇರಿಗೆ 40 ಒಟ್ಟು ನೂರು ಫೇಸ್ ಶೀಲ್ಡ್‍ಗಳನ್ನು ಸಿದ್ಧಗೊಳಿಸಿ ವಿತರಿಸಲಾಗಿದೆ ಎಂದು ತಿಳಿಸಿದರು. ಸಧ್ಯವೇ ಅಂಜುಮನ್ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಹಕಾರದೊಂದಿಗೆ  ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಸೆನಿಟೈಸರ್ ಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದ್ದು ಆಸಕ್ತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ 9731840753 ಸಂಪರ್ಕಿಸಬಹುದಾಗಿದೆ ಎಂದೂ ಅವರು ಕೋರಿದ್ದಾರೆ. 
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೋವಿಡ್-19 ನೂಡಲ್ ಅಧಿಕಾರಿ ಡಾ.ಶರದ್ ನಾಯಕ, ಮೇಕರ್ಸ್ ಹಬ್ ಸದಸ್ಯರಾದ ನುಹೇಲ್ ದಾಮೋದಿ, ಶೀಹ್‍ಝಾನ್ ಮೊಹತೆಶಮ್, ಎಸ್.ಎಂ.ಶುಯೇಬ್ ಮಾರ್ಕೇಟ್, ಮುಹಮ್ಮದ್ ಖಮರ್ ತಾಲೂಕಾಸ್ಪತ್ರೆ ಹಾಗೂ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...