ಅರಫಾ ಮೈದಾನದಲ್ಲಿ 25ಲಕ್ಷ ಮುಸ್ಲಿಮರು; ಹಜ್ ಯಾತ್ರೆಯ ಎರಡನೇ ದಿನ ಮಕ್ಕಾದಲ್ಲಿ

Source: sonews | By Staff Correspondent | Published on 10th August 2019, 11:09 PM | Global News | Don't Miss |

ಅರಫಾತ್ : ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿರುವ ಸುಮಾರು 25 ಲಕ್ಷ ಮುಸ್ಲಿಮರು ಯಾತ್ರೆಯ ಎರಡನೇ ದಿನವಾದ ಶನಿವಾರ ಅರಫಾತ್ ಬೆಟ್ಟಕ್ಕೆ ಆಗಮಿಸಿದ್ದಾರೆ.

ಪುರುಷ ಮತ್ತು ಮಹಿಳಾ ಯಾತ್ರಿಗಳು ದೇವರ ನಾಮ ಪಠಿಸುತ್ತಾ ಬೆಟ್ಟವನ್ನು ಹತ್ತಿದರು.

ಪ್ರವಾದಿ ಮುಹಮ್ಮದರು ತನ್ನ ಕೊನೆಯ ಪ್ರವಚನವನ್ನು ನೀಡಿದ ಬೆಟ್ಟಕ್ಕೆ ಹೆಚ್ಚಿನ ಯಾತ್ರಿಕರು ಶನಿವಾರ ಮುಂಜಾನೆಯೇ ನಡೆದುಕೊಂಡು ಹೋದರು.

 ಭೂಮಿ ಮೇಲಿನ ಅತಿ ದೊಡ್ಡ ಧಾರ್ಮಿಕ ಸಮಾವೇಶಗಳ ಪೈಕಿ ಒಂದಾಗಿರುವ ಹಜ್ ಆಚರಣೆಯ ಎರಡನೇ ದಿನವು ಯಾತ್ರಿಗಳಿಗೆ ಅತ್ಯಂತ ಸ್ಮರಣೀಯವಾಗಿದೆ.

ಶುಕ್ರವಾರ ರಾತ್ರಿ ಮಿನಾದಲ್ಲಿ ತಂಗಿದ ಯಾತ್ರಿಕರು ಶನಿವಾರ ಸೂರ್ಯೋದಯದ ಬಳಿಕ ಅರಫಾತ್ ಬೆಟ್ಟದತ್ತ ಸಾಗಿದರು.

ರಸ್ತೆಗಳಲ್ಲಿ ಯಾತ್ರಿಕರ ಸಂಚಾರವನ್ನು ನಿಯಂತ್ರಿಸಿದ ಭದ್ರತಾ ಸಿಬ್ಬಂದಿ, ಅವರಿಗೆ ಮಾರ್ಗದರ್ಶನ ನೀಡಿದರು. ವಿವಿಧ ಸರಕಾರ ಸಂಸ್ಥೆಗಳು ಯಾತ್ರಿಗಳಿಗೆ ಆಹಾರ ಮತ್ತು ಔಷಧಗಳನ್ನು ಪೂರೈಸಿದರು.

► ಯಾತ್ರಿಕರ ಮೇಲೆ ಸುರಿದ ಜಡಿ ಮಳೆ

ಶನಿವಾರ ಅರಫಾತ್ ಬೆಟ್ಟದಲ್ಲಿ ಹಜ್‌ನ ಎರಡನೇ ದಿನದ ವಿಧಿ ವಿಧಾನಗಳನ್ನು ಯಾತ್ರಿಕರು ಪೂರೈಸುತ್ತಿದ್ದಂತೆಯೇ, ಭಾರೀ ಮಳೆ ಸುರಿಯಿತು.

ಕೆಲವರು ಆಶ್ರಯಕ್ಕಾಗಿ ಓಡಿದರೆ, ಹಲವರು ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ರಸ್ತೆಗಳಿಗೆ ಓಡಿದರು.

ಮಳೆ ಸುರಿಯುತ್ತಿರುವಾಗ ಪ್ರಾರ್ಥನೆ ಸಲ್ಲಿಸಿದರೆ ಹೆಚ್ಚಿನ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇಸ್ಲಾಮ್‌ನಲ್ಲಿದೆ.

ಜಡಿ ಮಳೆ ಸುರಿದ ಕೆಲವೇ ನಿಮಿಷಗಳಲ್ಲಿ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯಿತು. ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತಿತು ಹಾಗೂ ವಾತಾವರಣ ತಂಪಾಯಿತು.

ಈ ಸಂದರ್ಭದಲ್ಲಿ ಪ್ರವಾಹ ತಲೆದೋರುವ ಸಾಧ್ಯತೆಯಿರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಹಾಗೂ ಲೋಹದ ವಸ್ತುಗಳನ್ನು ಸ್ಪರ್ಶಿಸದಂತೆ ಅಧಿಕಾರಿಗಳು ಯಾತ್ರಿಗಳಿಗೆ ಎಚ್ಚರಿಕೆ ನೀಡಿದರು.

► ಮೂರನೇ ಘಟ್ಟದತ್ತ ಯಾತ್ರಿಕರು

ಶನಿವಾರ ಹಗಲು ಅರಫಾತ್ ಬೆಟ್ಟದಲ್ಲಿ ಕಳೆದ ಬಳಿಕ, ರಾತ್ರಿ ಯಾತ್ರಿಕರು ಹಜ್‌ನ ಮೂರನೇ ಘಟ್ಟದತ್ತ ಸಾಗಿದ್ದಾರೆ.

ಸುಮಾರು 25 ಲಕ್ಷ ಯಾತ್ರಿಕರು ಶನಿವಾರ ರಾತ್ರಿ ಮುಝ್ದಲಿಫದಲ್ಲಿ ಕಳೆಯಲಿದ್ದಾರೆ. ಅವರು ಮಧ್ಯರಾತ್ರಿಯ ಬಳಿಕ, ‘ಸೈತಾನನಿಗೆ ಕಲ್ಲೆಸೆಯುವ’ ವಿಧಿಯಲ್ಲಿ ಪಾಲ್ಗೊಳ್ಳಲು ಮಿನಾಕ್ಕೆ ತೆರಳಲಿದ್ದಾರೆ.

ಮಿನಾದಲ್ಲಿ ಅವರು ಸೈತಾನನ್ನು ಸಂಕೇತಿಸುವ ಗೋಡೆಗೆ ಕಲ್ಲೆಸೆಯಲಿದ್ದಾರೆ.

Read These Next

ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು

ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ...

ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ

ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ...

ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ'

ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ...

ಏ.10 ರಿಂದ 20 ರ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿ-ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ...

ಜಿಲ್ಲೆಯ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ : ಸಿಇಓ ಪ್ರಿಯಾಂಗ ಎಂ.

ಕಾರವಾರ : ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ರಸ್ತೆ,ರೈಲು, ವಾಯು ಮಾರ್ಗ- ಸಮಗ್ರ ಅಭಿವೃದ್ದಿ. ಶಿಕ್ಷಣದಿಂದ ಬದಲಾವಣೆ - ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಬಿ‌ ವೈ ರಾಘವೇಂದ್ರ.

ಶಿವಮೊಗ್ಗ : ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ...

ನಾಗಿರೆಡ್ಡಿ ಗ್ರಾಮದ ಬಳಿ ತ್ವರಿತವಾಗಿ ಗೋಶಾಲೆ ಆರಂಭಿಸಿ: ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ : ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯಾಗಿರುವ ಜಿಲ್ಲೆಯ ನಾಗಿರೆಡ್ಡಿ ಗ್ರಾಮದ ಬಳಿ ಪ್ರಸ್ತುತ ...

ಓವೈಸಿ ಮನೆ ಮೇಲೆ ದಾಳಿ: ಐವರ ಬಂಧನ

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರ ಇಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದ ಆರೋಪದ ಮೇರೆಗೆ ಹಿಂದೂ ಸೇನಾದ ಐವರನ್ನು ...