“ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೊ ಮಹೆಶ್ವರ”

Source: sonews | By Staff Correspondent | Published on 31st August 2020, 10:23 PM | Coastal News | Special Report |

(ಸಪ್ಟೆಂಬರ್ 5ಶಿಕ್ಷಕರ ದಿನಾಚರಣೆ ನಿಮಿತ್ತ ವಿಶೇಷ ಲೇಖನ )

ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು;
ನುಗ್ಗಿದುದು ಮುಂದೆ ಧೀರದಂಡು!
ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ;
ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!

ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ, ಗುರು ಬಹುಮುಖ್ಯ ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಉದಾಹರಣೆಗಳಿವೆ. ಪ್ರತಿಯೊಬ್ಬರ ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಅಷ್ಟೇ ಗುರುಗಳೂ ಮುಖ್ಯ ಏಕೆಂದರೆ, ಆ ಗುರಿ ಮುಟ್ಟಲು ಸೋಪಾನ ಉತ್ತಮ ಗುರುಗಳು. “When you study great teachers, you will learn much more from their caring and hard work than from their style”.

1888 ಸೆಪ್ಟೆಂಬರ್ 5 ರಂದು ಚಿತ್ತೂರ್ ಜಿಲ್ಲೆಯ ತಿರುತನಿ ಪವಿತ್ರ ಕ್ಷೇತ್ರದಲ್ಲಿ ಹುಟ್ಟಿದರು. ಸರ್ವಪಲ್ಲಿ ಇದು ಇವರ ಮನೆತನದ ಹೆಸರು. ಬಾಲ್ಯದಿಂದಲೂ ದೈವರಾಧನೆಯಲ್ಲಿ, ಅಧ್ಯಾತ್ಮದಲ್ಲಿ ರಾಧಾಕೃಷ್ಣರಿಗೆ ಒಲವು. ಎಂಟು ವರ್ಷಗಳ ಕಾಲ ಕ್ರೈಸ್ತ ಸೇವಾ ಸಂಘದ ಶಾಲೆಯಲ್ಲಿ ಕಲಿತು ಅನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜನ್ನು ಸೇರಿದರು. ಎಂ.ಎ ಪದವಿಧರರಾದ ಮೇಲೆ ಮೈಸೂರು, ಕಲ್ಕತ್ತಾ ವಿಶ್ವವಿದ್ಯಾನಿಲಯಗಳಲ್ಲಿ ತತ್ವ ಶಾಸ್ತ್ರದ ಪ್ರಾಧ್ಯಾಪಕರಾದರು. ಆಂದ್ರ ವಿಶ್ವವಿದ್ಯಾನಿಲಯದಲ್ಲಿ 1931-1936ರ ಅವಧಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ 1939-1948ರ ಅವಧಿಯಲ್ಲಿ ಉಪಕುಲಪತಿಯಾಗಿದ್ದರು. ದೆಹಲಿ ವಿಶ್ವವಿದ್ಯಾನಿಲಯದಲ್ಲಿ 1953-1962ರ ಅವಧಿಯಲ್ಲಿ ಕುಲಪತಿಯಾಗಿದ್ದರು.

ಪಾಶ್ಚಾತ್ಯ ಜಗತ್ತಿನ ಹಿರಿಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಆಕ್ಸ್‍ಫರ್ಡನಲ್ಲಿ ಅವರು ಪೌರಸ್ತ್ಯ ಧರ್ಮಗಳು ಮತ್ತು ನೀತಿ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು, 1946 ರಿಂದ 1952ರ ವರೆಗೆ ಯುನೆಸ್ಕೋದಲ್ಲಿ ಭಾರತ ನಿಯೋಗದ ಮುಖಂಡರಾಗಿದ್ದರು. 1949 ರಿಂದ 1952ರ ವರೆಗೆ ಸೋವಿಯತ್ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು. 1952ರಲ್ಲಿ ಭಾರತಕ್ಕೆ ಹಿಂದುರುಗಿದಾಗ ಭಾರತದ ಉಪ-ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. 1962 ಮೇ 11 ರಂದು ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾಗಿ ಐದು ವರ್ಷಗಳ ನಂತರ 1967ರಲ್ಲಿ ನಿವೃತ್ತಿಯಾದರು.

1967ರಲ್ಲಿ  “ಭಾರತ ರತ್ನ” ಎಂಬ ಗೌರವವನ್ನು ತಮ್ಮದಾಗಿಸಿಕೊಂಡರು. 86ರ ವಯಸ್ಸಿನಲ್ಲಿ 1975 ಏಪ್ರಿಲ್ 17 ರಂದು ನಿಧನರಾದರು.

ಶ್ರೇಷ್ಠ ಶಿಕ್ಷಣ ಚಿಂತಕರು ಡಾ. ರಾಧಾಕೃಷ್ಣನ್ ಇವರ ಪ್ರಕಾರ ಶಿಕ್ಷಣದ ಅರ್ಥ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುವುದು. ಶಿಕ್ಷಣ ಇದು ಬೌದ್ಧಿಕ ಶಕ್ತಿಯನ್ನು ತರಬೇತಿ ಪಡಿಸುವುದು ಮಾತ್ರವಲ್ಲದೇ ಮಕ್ಕಳ ಮನಸ್ಸನ್ನು ಶುದ್ಧಗೊಳಿಸಿ, ಆಧ್ಯಾತ್ಮ ಭಾವನೆಯನ್ನು ಪ್ರಚೋದಿಸಬೇಕು. ವ್ಯಕ್ತಿಯ ಪ್ರಗತಿಯೇ ಶಿಕ್ಷಣದ ಪ್ರಮುಖ ಮುತವರ್ಜಿಯಾಗಬೇಕು. ಶಿಕ್ಷಣವು ಆಲೋಚನಾತ್ಮಕವಾದ, ವಿವರಣಾತ್ಮಕವಾದ ಮನಸ್ಸನ್ನು ರೂಪಿಸಬೇಕು. “His teacher was the legendary philosopher”.

ಡಾ. ರಾಧಾಕೃಷ್ಣನ್ ಅವರ ಶಿಕ್ಷಣದ ಗುರಿಗಳು, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆ, ಶಿಕ್ಷಣವು ವ್ಯಕ್ತಿ ತನ್ನನ್ನು ಮತ್ತು ಸಹಚರರನ್ನು ಪ್ರೀತಿಸಲು ಪ್ರೇರೇಪಿಸಬೇಕು. ಶಿಕ್ಷಣವು ವೈಜ್ಞಾನಿಕ ಮನೋವಿಜ್ಞಾನವನ್ನು ವೃದ್ಧಿಸಬೇಕು. ಮಾನವನ ನೆಮ್ಮದಿಯ ಜೀವನಕ್ಕೆ ಅವಶ್ಯವಾದುದು. ಮಕ್ಕಳಲ್ಲಿ ಆಲೋಚನಾ ಶಕ್ತಿ ಶಿಕ್ಷಣವು ಅಭಿವೃದ್ಧಿ ಪಡಿಸಬೇಕು. ಶಿಕ್ಷಣವು ಮಕ್ಕಳಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿದ್ಧತೆಯ ಸಲಹೆ ನೀಡಬೇಕು. “Education is the most powerful weapon which you can use to change the world”.

ಪಠ್ಯಕ್ರಮವು ನಮ್ಮ ಚರ್ಚೆಯಲ್ಲಿ ಕಾರ್ಯಕಾರಣ ಆಧಾರ, ತೀರ್ಮಾನಗಳನ್ನು ಕಂಡು ಕೊಳ್ಳಲು ಪೂರಕವಾಗುವಂತಹ ವಿಷಯಗಳಿರಬೇಕು. ವಿಜ್ಞಾನವು ಕೂಡಾ ಶಿಕ್ಷಣದ ಒಂದು ಅಂಗವಾಗಿರಬೇಕು. ಪ್ರಜಾಪ್ರಭುತ್ವದ ಗುಣಗಳನ್ನು ಅರಿಯುವ, ವೃದ್ಧಿಸುವ ವಿಷಯಗಳು ಪಠ್ಯವಸ್ತುವಿನಲ್ಲಿರಬೇಕು. ಹೀಗಾಗಿ ನೃತ್ಯ ಸಂಗೀತ ಇವುಗಳಿಗೆ ಶಿಕ್ಷಣದಲ್ಲಿ ಉನ್ನತ ಸ್ಥಾನವಿರಬೇಕು. ಪಠ್ಯವಸ್ತುವಿನ ವಿಷಯಗಳು ಮಕ್ಕಳಲ್ಲಿ ಆಲಸ್ಯವನ್ನು ಹೋಗಲಾಡಿಸಿ ಆಂತರಿಕ ಒಲವನ್ನು ವೃದ್ಧಿಸಬೇಕು. ಸಂಸ್ಕøತಿಯ ಅಭ್ಯಾಸಕ್ಕೆ ವಿಶೇಷ ಸೌಲಭ್ಯವಿರಬೇಕು.

ಬೋಧನಾ ಪದ್ಧತಿ, ಮಗುವಿನಲ್ಲಿ ವೈಚಾರಿಕ ಆಶಯಗಳನ್ನು ಸೃಷ್ಠಿಸಬೇಕು. ಮುಕ್ತ ಪರಿಸರದಲ್ಲಿ ಶಿಕ್ಷಣ ಕೋಡಬೇಕು. ಸ್ವ-ಕಲಿಕೆಗೆ ಸೌಲಭ್ಯವಿರಬೇಕು. ಶಿಕ್ಷಣ ಕೇವಲ ವಿಷಯವನ್ನು ರವಾನಿಸಿದೆ ವಿದ್ಯಾರ್ಥಿಗಳಲ್ಲಿ ನವಜ್ಞಾನ ಅರಿಸಬೇಕು. “What the teacher is, is more important than what he teaches”.

ರಾಧಾಕೃಷ್ಣನರ ಶೈಕ್ಷಣಿಕ ವಿಚಾರಗಳು :- ಮನಸ್ಸು ಮತ್ತು ಆತ್ಮಗಳ ತರಬೇತಿಯೇ ಶಿಕ್ಷಣ, ವೈಜ್ಞಾನಿಕ ಪ್ರವೃತ್ತಿಯ ವಿಕಾಸವೇ ಶಿಕ್ಷಣ, ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಮತ್ತು ಸ್ವಯಂ ಶಿಸ್ತು, ಸ್ತ್ರೀ-ಪುರುಷರಿಗೆ ಸಮಾನ ಶಿಕ್ಷಣ, ಮುಕ್ತ ಮನಸ್ಸಿನ ರಚನೆಗಾಗಿ ಶಿಕ್ಷಣ. “You educate a man, you educate a man. You educate a woman, you educate a generation”.

ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು, ಅಚ್ಚುಕಟ್ಟಾಗಿ ಕೆತ್ತಿ, ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ ಅವರ ವಿದ್ಯಾರ್ಜನೆ ನೀಡುವ ಮಕ್ಕಳಿಗೆ ಪ್ರೀತಿತೋರಿ ಅವರನ್ನು ಗೌರವಿಸುವುದು ಒಳಿತಾಗಿದೆ. ಹೀಗೆ ಮುಂದೊಂದು ದಿನ ಅವರು ನವ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುವಾಗ ಅವರ ಮನಸ್ಸಿನಲ್ಲಿ “ಇವನು ನನ್ನ ವಿದ್ಯಾರ್ಥಿ” ಎಂಬ ಸಾರ್ಥಕತೆಯ ಮನೋಭಾವನೆ ಅವರ ಮನಗಳಲ್ಲಿ ಮೂಡಿದರೆ ಅದು ಅವರ ಶಿಕ್ಷಕ ವೃತ್ತಿಯ ಸಾರ್ಥಕತೆ. “The mediocre teacher tells. The good teacher explains. The superior teacher demonstrates. The great teacher inspires”.

ರಾಧಾಕೃಷ್ಣನ್ ಅವರ ಪ್ರಕಾರ ಅಧ್ಯಾಪಕ ಸದ್ಗುಣಗಳ ಸಾಕಾರ ರೂಪ. ಮಕ್ಕಳಲ್ಲಿ ಆದರ್ಶವನ್ನು ರೂಢಿಸಿಕೊಳ್ಳಲು ಮಾದರಿ. ಇಂತಹ ಶಿಕ್ಷಕರನ್ನು ‘ಆಚಾರ್ಯ’ ಎಂದರೆ ‘ಆಚಾರವುಳ್ಳವನು’ ಎಂದೂ ಕರೆಯುತ್ತಾರೆ. ಅವನು ನಿರಂತರ ಅಧ್ಯಯನಕಾರಿ. ಒಳ್ಳೆಯ ಗುಣಗಳನ್ನು ಒಳಗೊಂಡಿರುವನು. ತನ್ನ ವಿದ್ಯಾಮಂದಿರದಲ್ಲಿರುವ ವಿದ್ಯಾರ್ಥಿಗಳನ್ನು ಕರುಣೆ, ಪ್ರೀತಿಯಿಂದ ಪೋಷಿಸುವನು. ಇದೆ ರೀತಿ ಪ್ರೋತ್ಸಾಹಿಸಬೇಕು. ಶಿಕ್ಷಕ ಅಜ್ಞಾನದ ಅಂಧಕಾರವನ್ನು ಹೊಡೆದೊಡಿಸುವದಲ್ಲದೇ ಆತ್ಮದ ಅಂಧಕಾರವನ್ನು ಹೋಗಲಾಡಿಸುವವನೇ ನಿಜವಾದ ಶಿಕ್ಷಕ ವಿದ್ಯಾರ್ಥಿಗಳು ಶಿಕ್ಷಕನ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಶಿಕ್ಷಕನ ನಡೆ, ನುಡಿ, ಆಚಾರ, ಶಿಸ್ತು, ವೇಷಭೂಷಣಗಳಿಗೆ ಒತ್ತು ನೀಡಿ ಅದನ್ನು ಅನುಸರಿಸುತ್ತಾರೆ. ಅವರಲ್ಲಿ ಉತ್ತಮತೆ ಜಾಗೃತಗೊಳ್ಳಬೇಕಾದರೆ ಶಿಕ್ಷಕನ ಪ್ರತೀಚರ್ಯ ಅತಿ ಎಚ್ಚರಿಕೆಯಿಂದ ಕೂಡಿದ್ದಾಗಿರಬೇಕು. “Those who educate children well are more to be honored than they who produce them, for these only gave them life, those the art of living well”.

ಪ್ರತಿ ಶಿಕ್ಷಕರನ್ನು ಗೌರವಿಸುವುದು ಪ್ರತೀ ವಿದ್ಯಾರ್ಥಿಯ ಆದ್ಯ ಕರ್ತವ್ಯ. ಗುರುಗಳಿಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಇಂದು ಶಿಕ್ಷಕರ ದಿನ ನಾವೆಲ್ಲರೂ, ನಮ್ಮ ಜೀವನದ ಮೇಲೆ ಒಳ್ಳೆಯ ಪ್ರಭಾವ ಬೀರಿದ ಶಿಕ್ಷಕರನ್ನು ಜ್ಞಾಪಿಸಿಕೊಳ್ಳುತ್ತಾ, ಇಂದು ಮಾತ್ರವಲ್ಲ ಪ್ರತಿದಿನ ವಂದನೆಗಳನ್ನು ಸಲ್ಲಿಸೋಣ. ಅವರಿಗೆ ಚಿರಋಣಿಗಳಾಗಿರೋಣ. “They inspire you, They entertain you, and you end up learning a ton even when you don’t know it”.A good teacher is like a candle it consumes itself to light the way for others.  “ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೆ ಗುರು”. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೊ ಮಹೇಶ್ವರ. ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಷಯಗಳು.

ಜಗದೀಶ ವಡ್ಡಿನ
ಕಾರವಾರ
ಮೊ: 9632332185
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...