ಭಟ್ಕಳನಗರದಲ್ಲಿ ಹೆಚ್ಚುತ್ತಿರುವ ಹುಚ್ಚುನಾಯಿ ಹಾವಾಳಿ; ಮೂವರಿಗೆ ನಾಯಿ ಕಡಿತ

Source: sonews | By Staff Correspondent | Published on 3rd December 2020, 10:24 PM | Coastal News | Don't Miss |

ಭಟ್ಕಳ: ನಗರದಲ್ಲಿ ಹಲವು ಕಡೆಗಳಲ್ಲಿ ಹುಚ್ಚು ನಾಯಿ ಹಾವಳಿ ಆರಂಭವಾಗಿದ್ದು ಬುಧವಾರ ಒಂದೇ ದಿನ ಮೂವರಿಗೆ ಕಚ್ಚಿದೆ ಎನ್ನಲಾಗಿದೆ. ಪುರಸಭಾ ವ್ಯಾಪ್ತಿಯ ಕಿದ್ವಾಯಿ ರಸ್ತೆ, ಹಳೇ ಬಸ್ ನಿಲ್ದಾಣ, ಪಟ್ಟಣದ ಪುರಸಭೆ ವ್ಯಾಪ್ತಿಯ ಕಿದ್ವಾಯಿ ರಸ್ತೆ, ಮುಖ್ಯ ರಸ್ತೆ, ಪುರಸಭೆ ಕಟ್ಟಡದ ಬಳಿಯಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ತಿರುಗಾಡುವದು ದುಸ್ತರವಾಗಿದೆ. ಈಗಾಗಲೆ 3ಕ್ಕೂ ಅಧಿಕ ಮಂದಿಗೆ ನಾಯಿ ಕಡಿತಕೊಳಕ್ಕಾಗಿ ಆಸ್ಪತ್ರೆ ಸೇರಿದ ಘಟನೆ ಬುಧವಾರ ಸಂಭವಿಸಿದೆ. 

ನಗರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೆÇಲೀಸ್ ಸಿಬ್ಬಂದಿ, ಆಸರಕೇರಿ ನಿವಾಸಿ 40 ವರ್ಷದ ಮಹಿಳೆ, ಗುಳ್ಮಿಯ ವ್ಯಕ್ತಿಯೋರ್ವರು ಸೇರಿ ಒಂದೇ ಬಾರಿಗೆ ಮೂವರಿಗೆ ಕಚ್ಚಿ ನಾಯಿ ಪರಾರಿಯಾಗಿದೆ. ಮೂವರೂ ಕೂಡಾ ಇಲ್ಲಿನ ತಾಲೂಕಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಹುಚ್ಚು ನಾಯಿ ಜನರನ್ನು ಕಂಡೊಡನೆಯೇ ಅವರ ಮೈಮೇಲೆ ಹಾಕಿ ಕಚ್ಚಿ ಪರಾರಿಯಾಗುತ್ತಿದ್ದು ತಕ್ಷಣ ಅದನ್ನು ಹಿಡಿಯಲು ಪೌರ ಕಾರ್ಮಿಕರು ಪ್ರಯತ್ನಿಸಿದರಾದರೂ ತಪ್ಪಿಸಿಕೊಂಡು ಪರಾರಿಯಾಗಿದೆ. 

ಪುರಸಭಾ ವ್ಯಾಪ್ತಿಯಲ್ಲಿ ಒಂದು ಹುಚ್ಚು ನಾಯಿ ಕೆಲವರಿಗೆ ಕಚ್ಚಿ ಗಾಯಗೊಳಿಸಿದ ಕುರಿತು ತಿಳಿದು ಬಂದ ತಕ್ಷಣ ಅದನ್ನು ಹಿಡಿಯಲು ನುರಿತ ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಆದರೆ ಅದು ಸಿಕ್ಕ ಸಿಕ್ಕಲ್ಲಿ ಓಡುತ್ತಿರುವುದರಿಂದ ಕಷ್ಟವಾಗುತ್ತಿದೆ. ಯಾರೂ ಕೂಡಾ ಹೆದರುವ ಅಗತ್ಯವಿಲ್ಲ, ಅದನ್ನು ಹಿಡಿದು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.  

-ಸುಜಯಾ ಸೋಮನ್, ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...