ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Source: so news | By MV Bhatkal | Published on 28th September 2022, 12:32 AM | Coastal News | Don't Miss |

ಉಡುಪಿ:ಪದವಿ ಪೂರ್ವ ಶಿಕ್ಷಣ ಇಲಾಖೆ,ಉಡುಪಿ ಮತ್ತು ಗ್ರೀನ್‍ವ್ಯಾಲಿ ಪದವಿ ಪೂರ್ವ ಕಾಲೇಜು, ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಪುಟ್ಬಾಲ್ ಪಂದ್ಯಾಟವು  ಗ್ರೀನ್‍ವ್ಯಾಲಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಈ ಕ್ರೀಡಾಕೂಟವನ್ನು ಕುಂದಾಪುರ ಉಪವಿಭಾಗದ ಡಿ.ವೈ.ಎಸ್.ಪಿ. ಶ್ರೀಕಾಂತ ಕೆ. ರವರು ಉದ್ಘಾಟಿಸಿ ಶುಭ ಹಾರೈಸಿದರು.  
ಈ ಸಮಾರಂಭದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಜಾನ್ ಮ್ಯಾಥಿವ್, ಮುಖ್ಯ ಸಂಯೋಜಕಿ ಮೀನಾ ಮ್ಯಾಥಿವ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ತಾಲ್ಲೂಕು ಕ್ರೀಡಾ ಸಂಯೋಜಕ ಸುಖೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ನಂತರ ನಡೆದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಬೈಂದೂರು ತಾಲ್ಲೂಕನ್ನು ಪ್ರತಿನಿಧಿಸಿದ ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜು ಪ್ರಥಮ ಮತ್ತು ಉಡುಪಿ ತಾಲ್ಲೂಕು ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಕಾಪು ತಾಲ್ಲೂಕು ಪ್ರಥಮ ಮತ್ತು ಉಡುಪಿ ತಾಲ್ಲೂಕು ದ್ವಿತೀಯ ಸ್ಥಾನ ಪಡೆಯಿತು.

 

Read These Next

ಭಟ್ಕಳ ಅಂಜುಮನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ. ಡಿಸೆಂಬರ್ 28 ಮತ್ತು 29ರಂದು ಶತಮಾನೋತ್ಸವ.

ಭಟ್ಕಳ : ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ ನಡೆಯುತ್ತಿದೆ. ...

ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ; ಸಂವಿಧಾನದತ್ತವಾದ ಕರ್ತವ್ಯಗಳನ್ನು ನಿರ್ವಹಿಸುತ್ತ ಹಕ್ಕುಗಳನ್ನು ಪಡೆಯಬೇಕು

ಅಂಬೇಡ್ಕರ್ ಮೊದಲಾದ ಅನೇಕ ತಜ್ಞರು, ನಾನಾ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಿದ ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ...

ಹೆದ್ದಾರಿ ಅಗಲೀಕರಣ ಕಾಮಗಾರಿ ಸದ್ಯದಲ್ಲಿಯೇ ಮುಗಿಸುತ್ತೇವೆ, ಭಟ್ಕಳದಲ್ಲಿ ಜಿಲ್ಲಾಧಿಕಾರಿ ಹೇಳಿಕೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‍ಬಿ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ...

ಭಟ್ಕಳ: ಗುರು ಸುಧೀಂದ್ರ ಕಾಲೇಜಿನಲ್ಲಿ ನೂತನ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 'ಸ್ವಾಗತ ಕಾರ್ಯಕ್ರಮ

ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2022-23 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ 'ಸ್ವಾಗತ ...

ಭಟ್ಕಳ ಅಂಜುಮನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ. ಡಿಸೆಂಬರ್ 28 ಮತ್ತು 29ರಂದು ಶತಮಾನೋತ್ಸವ.

ಭಟ್ಕಳ : ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನೋಂದಣಿ ಅಭಿಯಾನ ನಡೆಯುತ್ತಿದೆ. ...

ಗ್ರಾಮೀಣ ಜನರ ಅಹವಾಲುಗಳ ಸ್ಪಂದನೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವರದಾನ : ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು ಗ್ರಾಮಾಂತರ : ಗ್ರಾಮೀಣ ಪ್ರದೇಶಗಳ ಜನರ ಅಹವಾಲುಗಳ ತ್ವರಿತ ಸ್ಪಂದನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ದೊರೆತ ...

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಧಾರವಾಡ ಭೇಟಿ; ಮತದಾರಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಪರಿಶೀಲನೆ.

ಧಾರವಾಡ : ರಾಜ್ಯ ಸ್ವೀಪ್ ( SVEEP) ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ಕರ್ನಾಟಕ ವಿಧಾನಸಭಾ ಮತಕ್ಷೇತ್ರ 71 ಮತ್ತು 74 ರ ವ್ಯಾಪ್ತಿಯ ...