ಗ್ರಾಮ ಪಂಚಾಯ್ತಿ ಉಪ ಚುನಾವಣೆ: ಮದ್ಯದಂಗಡಿ ಮುಚ್ಚಲು ಡಿಸಿ ಆದೇಶ

Source: so news | By MV Bhatkal | Published on 17th May 2019, 12:59 AM | Coastal News | Don't Miss |

ಕಾರವಾರ: ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮದ್ಯಮಾರಾಟ ಅಂಗಡಿಗಳ ಮತ್ತು ಮದ್ಯ ತಯಾರಿಕೆ ಘಟಕಗಳ ಮುಚ್ಚಲು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವಿವಿಧ 8 ಗ್ರಾಮ ಪಂಚಾಯ್ತಿಗಳಲ್ಲಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ದಿನಾಂಕ 13-05-2019ರಿಂದ 31-05-2019ರವರೆಗೆ ಚುನಾವಣೆ ನಡೆಯುತ್ತಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಅಂಗಡಿಗಳು ಮತ್ತು ಮದ್ಯ ತಯಾರಿಕೆ ಘಟಕಗಳನ್ನು ಮುಚ್ಚಲು ಆದೇಶಿಸಿದ್ದು ಮೊಹರು ಮಾಡಿದ ಬೀಗದ ಕೈಗಳನ್ನು ಆಯಾ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ ಒಪ್ಪಿಸುವಂತೆ ಅವರ ಆದೇಶದಲ್ಲಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶ ವ್ಯಾಪ್ತಿಯಲ್ಲಿ ಮದ್ಯವನ್ನು ಸ್ವಾದೀನದಲ್ಲಿರಿಸಿಕೊಂಡಿರುವುದು ಅಥವಾ ಮದ್ಯ ಸೇವಿಸಿ ಸಾರ್ವಜನಿಕ ಉಪದ್ರವ ನೀಡಿದ ಬಗ್ಗೆ ಕಂಡು ಬಂದರೆ ಅವರನ್ನು ಚುನಾವಣೆ ಮುಗಿಯುವವರೆಗೆ ಕಸ್ಟಡಿಯಲ್ಲಿ ಇರಿಸತಕ್ಕದ್ದು ಮತ್ತು ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮಾನುಸಾರ ಅಬಕಾರಿ ಉಪ ಆಯುಕ್ತರು ಕಾರವಾರ ಇವರು ಈ ಆದೇಶವನ್ನು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
ಅಂಕೋಲಾ ತಾಲೂಕು ಹೊನ್ನೆಬೈಲ್, ಕುಮಟಾ ತಾಲೂಕು ಗೋಕರ್ಣ (ತದಡಿ ಬೆಲೆಖಾನ), ಹೊನ್ನಾವರ ತಾಲೂಕು ಹಡಿನಬಾಳ (ಮುಟ್ಟಾ), ಶಿರಸಿ ತಾಲೂಕು ಬಿಸಲಕೊಪ್ಪ, (ಮುಳಲಗಾಂವ), ಇಸಳೂರು (ಚಿಪಗಿ), ಗುಡ್ನಾಪುರ (ಅಚ್ಚರಣಿ), ಸಿದ್ದಾಪುರ ತಾಲೂಕು ತಾರೆಹರ್ಳಳಿ (ಕಾನುಸೂರು), ಜೊಯಿಡಾ ತಾಲೂಕು ಪ್ರದಾನಿ ಈ ಗ್ರಾಮ ಪಂಚಾಯ್ತಿಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...