ನೌಕಾ ದಿನಾಚರಣೆಯಲ್ಲಿ ಪಾಲ್ಗೊಂಡ ರಾಜ್ಯಪಾಲರು. ದೇಶದ ರಕ್ಷಣೆಗೆ ನೌಕಾಸೇನೆ ಪಾತ್ರ ಮುಖ್ಯ : ಥಾವರಚಂದ್ ಗೆಹ್ಲೋಟ್

Source: SO News | By Laxmi Tanaya | Published on 4th December 2021, 10:28 PM | National News |

ಕಾರವಾರ : ಏಷ್ಯಾದ ಅತಿ ದೊಡ್ಡ ನೌಕಾನೆಲೆ ಕಾರವಾರದಲ್ಲಿ ಶನಿವಾರ ನೌಕಾ ದಿನಾಚರಣೆ ನಡೆಸಲಾಯಿತು.           

   ಬಿಣಗಾದ  ಕದಂಬ ನೌಕಾನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಭಾಗವಹಿಸಿದ್ದರು. 

     ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ನೌಸೇನಾ ಬಲಿಷ್ಠ ದೃಷ್ಡಿಯಿಂದ  ನೇವಲ್‌ ಥಿಯೇಟರ್ ಕಮಾಂಡ್ ಪ್ರಾರಂಭಿಸುವ ಯೋಜನೆ ನಡೆಯುತ್ತಿದೆ.     ಮಾಡುವ ಯೋಜನೆ ನಡೆಯುತ್ತಿದ್ದು, ಇದರಿಂದ ನೌಕಾ ಸೇನೆ‌ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು. 

                      ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರ ಮುತುವರ್ಜಿಯಿಂದ  ಸೀ‌ಬರ್ಡ್ ಎರಡನೇ ಹಂತದ ಯೋಜನೆ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡ‌ ಬಳಿಕ ಕದಂಬ ನೌಕಾನೆಲೆ ಏಷ್ಯಾದ ಅತಿ‌ದೊಡ್ಡ ನೌಕಾ ನೆಲೆ‌ ಆಗಲಿದೆ.  1971 ರಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಗಳಿಸುವಲ್ಲಿ ಭಾರತೀಯ ನೌಕಾ ಸೇನೆ ಮುಖ್ಯ ಪಾತ್ರ ನಿರ್ವಹಿಸಿದ್ದು,  ಕರ್ನಾಟಕದ ರಕ್ಷಣೆಯಲ್ಲಿಯೂ ನೌಕಾ ಸೇನೆ ಮಹತ್ವದ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.               

    ಕರ್ನಾಟಕದ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಮಹೇಶ ಸಿಂಗ್ ಅವರು ಮಾತನಾಡಿದರು.         

       ಕಾರ್ಯಕ್ರಮದಲ್ಲಿ ನೌಕಾ ಸೇನೆಯ ಬ್ಯಾಂಡ್ ಪ್ರದರ್ಶಿಸುವ ಮೂಲಕ ಹುತಾತ್ಮರ ಸ್ಮರಣೆ ಮಾಡಿಕೊಳ್ಳಲಾಯಿತು.          ಕದಂಬ ನೌಕಾನೆಲೆಯ ಶಿಫ್ ಯಾರ್ಡ್ ಮುಖ್ಯಸ್ಥ ರಿಯರ್ ಅಡ್ಮಿರಲ್ ದೀಪಕ ಕುಮಾರ ಗೋಸ್ವಾಮಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೇರಿದಂತೆ ಇತರರು ಹಾಜರಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...