ಮಾರ್ಗಸೂಚಿ ಅನುಗುಣವಾಗಿ ಸರಕಾರಿ ಕಚೇರಿಗಳು ತಂಬಾಕು ಮುಕ್ತ ಕಛೇರಿಗಳಾಗಬೇಕು: ಡಿಸಿ           

Source: sonews | By Staff Correspondent | Published on 10th July 2020, 5:11 PM | Coastal News | Don't Miss |

ಕಾರವಾರ :ತಂಬಾಕು ನಿಯಂತ್ರಣ ಕೋಶದ ವತಿಯಿಂದ ಜಿಲ್ಲಾ ಸಮನ್ವಯ ಸಮಿತಿಯ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇತ್ತೀಚೆಗೆ ನಡೆಸಲಾಯಿತು. 

2020-21ನೇ ಸಾಲಿನ ಮೊದಲ ತ್ರೈಮಾಸಿಕ ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಮಾತನಾಡಿ, ಕೋಟ್ಪಾ ಕಾಯ್ದೆ-2003ರ ಸೆಕ್ಷನ್-4 ರ ನಾಮಫಲಕವನ್ನು ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿ ಅನುಷ್ಠಾನ ಮಾಡುವ ಕುರಿತು ಹಾಗೂ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳನ್ನು ಮಾರ್ಗಸೂಚಿ ಅನುಗುಣವಾಗಿ ತಂಬಾಕು ಮುಕ್ತ ಕಛೇರಿಯಾಗಿ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. 
ಕೋವಿಡ್-19 ಇರುವುದರಿಂದ ತಾಲೂಕಾ ಮಟ್ಟದ ತಂಬಾಕು ತನಿಖಾದಳವು ಮುಂಜಾಗೃತ ಕ್ರಮಕೈಗೊಂಡು ಪರಿಸ್ಥಿತಿ ಅನುಗುಣವಾಗಿ ನಿರ್ಣಯ ಕೈಗೊಂಡು ದಾಳಿ ನಡಸಿ ವರದಿ ನೀಡುವಂತೆ ಸೂಚಿಸಿದರು. ಕೊರೊನಾ ಇರುವ ಈ ಸಂದರ್ಭದಲ್ಲಿ  ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ  ಮಾಹಿತಿ ಕಾರ್ಯಕ್ರಮ ಆಯೋಜಿಸಿ ತಿಳುವಳಿಕೆ ನೀಡಲು ಸೂಚಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಉಪ ವಿಭಾಗಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ ಇಲಾಖೆ ಕಾನೂನು ಸೇವಾ ಪ್ರಾಧಿಕಾರ, ರೆಡ್ ಕ್ರಾಸ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರಿದ್ದರು ಹಾಗೂ ವಿಡಿಯೋ ಕಾನ್ಪರೇನ್ಸ್ ಮೂಲಕ ತಾಲೂಕಿನ ತಹಶಿಲ್ದಾರರು, ಉಪವಿಭಾಗಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್, ತಾಲೂಕಾ ಆರೋಗ್ಯಾಧಿಕಾರಿಗಳು ಹಾಜರಿದ್ದರು.
 

Read These Next

ಸಾರ್ವಜನಿಕರ ಮಾಹಿತಿ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕೃತ್ ವೆಬ್‍ಸೈಟ್ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ

ಧಾರವಾಡ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ...

ಕಲಿಕೆಯೊಂದಿಗೆ ಕಲಿಯುವ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಸಾಧ್ಯ : ರಾಘವೇಂದ್ರ ನಾಯ್ಕ

ಭಟ್ಕಳ: ಶಿಕ್ಷಣ ಪಡೆಯುವ ಹಂತದಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಗಳಿಸಲು ಸಾಧ್ಯ. ಓದಿನ ಜೊತೆಗೆ ಮನಸನ್ನು ...

ಮುರುಢೇಶ್ವರ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ- ಜಿ.ಪಂ. ಸಿಇಒ ಪ್ರಿಯಾಂಗ್

ಭಟ್ಕಳ: ಅಪೂರ್ಣಗೊಂಡಿರುವ ಮುರ್ಡೇಶ್ವರ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ...

ಸಾರ್ವಜನಿಕರ ಮಾಹಿತಿ ಹಾಗೂ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯ ಅಧಿಕೃತ್ ವೆಬ್‍ಸೈಟ್ ಆರಂಭ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ

ಧಾರವಾಡ : ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರಿಗೆ ಸುರಕ್ಷತೆ, ಅಪರಾಧಗಳ ಕುರಿತು ಮಾಹಿತಿ, ...