ಸಂಭ್ರಮ ಸಡಗರದಿಂದ ನಡೆದ ಗೊರಟೆ ಕಿರುಹೊಳೆ ಶ್ರೀ ಮಹಾಸತಿ ಅಮ್ಮನವರ ಜಾತ್ರೆ

Source: S.O. News Service | By MV Bhatkal | Published on 17th January 2021, 8:23 PM | Coastal News | Don't Miss |

ಭಟ್ಕಳ: ಇಲ್ಲಿನ ಪ್ರಸಿದ್ಧ ಕ್ಷೇತ್ರದಲ್ಲಿ ಒಂದಾದ ಗೊರಟೆ ಗ್ರಾಮದ ಕಿರುಹೊಳೆ ಶ್ರೀ ಮಹಾಸತಿ ಅಮ್ಮನವರ ಎರಡು ದಿನದ ಹಾಲ ಹಬ್ಬ ಜಾತ್ರಾ ಮಹೋತ್ಸವವೂ ಭಾನುವಾರ
ದಂದು ಅದ್ದೂರಿಯಾಗಿ ಆರಂಭಗೊಂಡಿತು. 
ಬೆಳಿಗ್ಗೆಯಿಂದಲೇ ಸಾವಿರರು ಭಕ್ತರು ಶ್ರೀ ಮಹಾಸತಿ ದೇವಿಯಲ್ಲಿ ಪೂಜೆಯನ್ನು ಸಲ್ಲಿಸುತ್ತಿರುವುದು ಕಂಡು ಬಂತು. ತಾಲೂಕಿನ ಗಡಿ ಪ್ರದೇಶದಲ್ಲಿ ಈ ದೇವಸ್ಥಾನವಿದ್ದು ಪಕ್ಕದ ಶಿರೂರು ಬೈಂದೂರು ತಾಲುಕಿನ ಜನರು ಪೂಜೆ ಸಲ್ಲಿಸಲು ಬಂದಿದ್ದಾರೆ. ಈ ಜಾತ್ರೆಯೂ ಎರಡು ದಿನಗಳ ಕಾಲ ನಡೆಯಲಿದೆ. ಭಾನುವಾರ ದಂದು ಆರಂಭಗೊಂಡ ಜಾತ್ರೆಯೂ ಇಲ್ಲಿನ ಸ್ಥಳಿಯರು ಪೂಜೆ ಸಲ್ಲಿಸಲಿದ್ದಾರೆ. ಸೋಮವಾರ ದಂದು ಅಕ್ಕಪಕ್ಕದ ಊರಿನ ಭಕ್ತರು ಪೂಜೆ ಸಲ್ಲಿಸಲಿದ್ದು, ಅಂದು ವಿಶೇಷ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. 

ತಾಲೂಕಿನಾದ್ಯಂತ ಹಲವಾರು ದೇವಾಲಯಗಳಿದ್ದು, ಎಲ್ಲಾ ದೇವಸ್ಥಾನ ಕ್ಕೂ ಒಂದೊಂದು ಪುರಾಣ ಪ್ರಸಿದ್ದ ಇತಿಹಾಸವಿದೆ. ಅದೇ ರೀತಿ ಇಂತಹದ್ದೇ ಇತಿಹಾಸ ನಿರ್ಮಿತ ದೇವಾಲಯಗಳ ಪೈಕಿ ತಾಲೂಕಿನ ಗೊರಟೆ ಗ್ರಾಮದ ಕಿರುಹೊಳೆಯ ಶ್ರೀ ಮಹಾಸತಿ ಅಮ್ಮನವರ ದೇವಾಲಯವು ಸಹ ಒಂದು. 
ಭಾನುವಾರ ದಂದು ಸಂಜೆ ದೇವಸ್ಥಾನದ ಆವರಣದಲ್ಲಿ  ಸಾಂಸ್ಕøತಿಕ ಕಾರ್ಯಕ್ರಮವೂ ನಡೆಯಿತು. ಆ ಬಳಿಕ ಕುಂದಾಪುರದ ರೂಪಕಲಾ ನಾಟಕ ತಂಡದವರಿಂದ ಹಾಸ್ಯಮಯ ನಾಟಕ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಕಮಿಟಿ ತಿಳಿಸಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...