ಕೊರೋನಾ ಲಾಕ್‍ಡೌನ್ ನಿಂದಾಗಿ ದುಬೈಯಲ್ಲಿ ಸಿಲುಕಿರುವ ಭಟ್ಕಳಿಗರಿಗೆ ಶುಭ ಸುದ್ದಿ

Source: sonews | By Staff Correspondent | Published on 30th May 2020, 11:27 PM | Coastal News | Gulf News | Special Report |

ಜೂನ್ 11ರಂದು ದುಬೈಯಿಂದ ಮಂಗಳೂರಿಗೆ  ಹಾರಲಿದೆ ಚಾರ್ಟೆಡ್ ವಿಮಾನ
 

ಭಟ್ಕಳ: ಕೊರೋನಾ ಸಂಕಷ್ಟದಿಂದಾಗಿ ದುಬೈ ಮತ್ತು ಯುಎಇ ಗಳಲ್ಲಿ ಸಿಲುಕಿರುವ ಭಟ್ಕಳ ಮತ್ತು ಆಸುಪಾಸಿನ ನಿವಾಸಿಗಳಿಗೊಂದು ಶುಭ ಸುದ್ದಿಯೊಂದು ಬಂದಿದ್ದು ಭಟ್ಕಳದ ಖ್ಯಾತ ಉದ್ಯಮಿ ನೂಹಾ ಜನರಲ್ ಟ್ರೇಡಿಂಗ್ ಕಂಪನಿಯ ಮಾಲಿಕ ಅತಿಕುರ್ರಹ್ಮಾನ್ ಮುನೀರಿ ಜನರ ಸಂಕಷ್ಟಕ್ಕೆ ಸ್ಪಂಧಿಸಿ ದುಬೈಯಲ್ಲಿ ಸಿಲುಕಿಕೊಂಡಿರುವ ಭಟ್ಕಳಿಗರಿಗೆ ಅವರ ತಾಯ್ನಾಡಿಗೆ ಮರಳಿ ಕಳುಹಿಸುವ ವ್ಯವಸ್ಥೆನ್ನು ಮಾಡಿದ್ದಾಗಿ ತಿಳಿದುಬಂದಿದೆ.

ಭಟ್ಕಳ ಮತ್ತು ಭಟ್ಕಳದ ನೆರೆಹೊರೆಯ ನಿವಾಸಿಗಳನ್ನು ಹೊತ್ತು  ಯುಎಇ ಯ ರಾಸಲ್ ಖೈಮಾದಿಂದ ಚಾರ್ಟೆಡೆಟ್ ವಿಮಾನವೊಂದು ಜೂನ್ 11 ರಂದು ದುಬೈ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ ಎಂಬ ಅಧಿಕೃತ ಮಾಹಿತಿ ದೊರಕಿದೆ. ಈ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ, ವಿಮಾನಯಾನದ ಅಧಿಕಾರಿಗಳು, ಉತ್ತರಕನ್ನಡ ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಎಲ್ಲ ಅಧಿಕಾರಿಗಳೊಂದಿಗೆ ಮಾತುಕತೆ ಅಚಿತಿಮಗೊಂಡಿದೆ ಎನ್ನಲಾಗಿದೆ.  

ದುಬೈಯಿಂದ ಭಟ್ಕಳಕ್ಕೆ ಬರುವವರನ್ನು ಮೊದಲ 7ದಿನಗಳ ಕಾಲ ಹೊಟೇಲ್ ಅಥಮಾ ಅಂಜುಮನ್ ಕ್ವಾರೆಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ ನಂತರದ ಏಳು ದಿನಗಳವರೆಗೆ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ. ಒಂದು ವೇಳೆ ನಿಯಮಗಳಲ್ಲಿ ಏನಾದರೂ ಬದಲಾವಣೆಯುಂಟಾದರೆ ನಿಯಮಗಳಂತೆ ಮಾರ್ಪಾಡು ಮಾಡಲಾಗುತ್ತದೆ ಎಂದು ಅವರು ತೀಳಿಸಿದ್ದಾರೆ. 

ಈ ಕುರಿತಂತೆ ಅತಿಕುರ್ರಹ್ಮಾನ್ ಮುನೀರಿ ಸಾಹಿಲ್ ಆನ್ ಲೈನ್ ನೊಂದಿಗೆ ಮಾತನಾಡಿ, ದುಬೈ ಮತ್ತು ಯುಎಇ ಯ ವಿವಿಧ ನಗರಗಳಲ್ಲಿ ಭಟ್ಕಳದ ನೂರಾರು ಮಂದಿಗೆ ಬಹಳ ತೊಂದರೆಯಲ್ಲಿದ್ದು ತಮ್ಮ ತಾಯ್ನಾಡಿಗೆ ಮರಳಲು ಬಯಸುತ್ತಿದ್ದಾರೆ.ಆದರೆ ಸರ್ಕಾರದ ವತಿಯಿಂದ ವಿಮಾನಯಾನ ಸೇವೆಯ ಯಾವುದೇ ವ್ಯವಸ್ಥೆ ಇರುವುದಿಲ್ಲ. ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೆ ಯಾರಾದರೂ ತಮ್ಮದೇ ಆದ ಚಾರ್ಟರ್ಡ್ ವಿಮಾನ ವ್ಯವಸ್ಥೆಯನ್ನು ಮಾಡಿಕೊಂಡರೆ ಮತ್ತು ಜನರನ್ನು ಸ್ವಂತ ಖರ್ಚಿನಲ್ಲಿ ಕಳುಹಿಸಲು ಬಯಸಿದರೆ, ರಾಯಭಾರ ಕಚೇರಿಯು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಬಹುದು ಎಂದು ರಾಯಭಾರಿ ಕಚೇರಿ ತಿಳಿಸಿದ್ದು ಅದರಂತೆ ನಾವು ಖಾಸಗಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಜೂನ್ 11 ಕ್ಕೆ ವಿಮಾನವು ಮಂಗಳೂರಿಗೆ ಪ್ರಯಾಣ ಬೆಳೆಸುವ ವ್ಯವಸ್ಥೆಯನ್ನು ಮಾಡಿರುವುದಾಗಿ ಮುನಿರಿ ತಿಳಿಸಿದ್ದಾರೆ.  ವಿಮಾನವು 175 ಆಸನಗಳನ್ನು ಹೊಂದಿರುತ್ತದೆ.

ಭಟ್ಕಳ ಮತ್ತು ಭಟ್ಕಳದ ನೆರೆಹೊರೆಯ ನಿವಾಸಿಗಳನ್ನು ಹೊತ್ತು  ಯುಎಇ ಯ ರಾಸಲ್ ಖೈಮಾದಿಂದ ಚಾರ್ಟೆಡೆಟ್ ವಿಮಾನವೊಂದು ಜೂನ್ 11 ರಂದು ದುಬೈ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ ಎಂಬ ಅಧಿಕೃತ ಮಾಹಿತಿ ದೊರಕಿದೆ. ಈ ಕುರಿತಂತೆ ಭಾರತೀಯ ರಾಯಭಾರಿ ಕಚೇರಿ, ವಿಮಾನಯಾನದ ಅಧಿಕಾರಿಗಳು, ಉತ್ತರಕನ್ನಡ ಜಿಲ್ಲಾಧಿಕಾರಿ ಮತ್ತು ಸಂಬಂಧಿತ ಎಲ್ಲ ಅಧಿಕಾರಿಗಳೊಂದಿಗೆ ಮಾತುಕತೆ ಅಂತಿಮಗೊಂಡಿದೆ ಎನ್ನಲಾಗಿದೆ.  

ದುಬೈಯಲ್ಲಿ ವಾಸಿಸುತ್ತಿರುವ ಭಟ್ಕಳ ಮತ್ತದ ಸುತ್ತಮುತ್ತಲ ಪ್ರದೇಶದ ನಾಗರೀಕರು ಈ ವಿಮಾನದ ಮೂಲಕ ತಮ್ಮ ತಾಯ್ನಾಡಿಗೆ ಹೋಗಲು ಬಯಸಿದ್ದರೆ ಅಂತಹವರೂ ಕೂಡಲೆ ತಮ್ಮನ್ನು ಸಂಪರ್ಕಿಸುವಂತೆ ಕೋರಿಕೊಂಡಿದ್ದಾರೆ. ವಿಮಾನಯಾನ ಮತ್ತು ಭಟ್ಕಳದಲ್ಲಿ ಕ್ವಾರೈಂಟೈನ್ ಖರ್ಚು ಸೂಕ್ತ ಮತ್ತು ಸಮಂಜಸವಾಗಿರುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲಾನಿ ಮೊಹ್ತೆಶಮ್ 0505584203, ರಹಮತುಲ್ಲಾ ರಾಹಿ 0505643432, ಶೆಹರ್ಯಾರ್ ಖತೀಬ್ 0505560640, ಯಾಸಿರ್ ಖಾಸಿಂಜಿ 0506251833, ಆಫಾಖ್ ನಾಯ್ತೆ 0505845537 ರನ್ನು ಸಂಪರ್ಕಿಸಬೇಕೆಂದು ಮತ್ತು ಪಾಸ್ಪೋರ್ಟ್ ಪ್ರತಿ ಇತ್ಯಾದಿಗಳನ್ನು ಈ ಇಮೇಲ್ [email protected] ವಿಳಾಸಕ್ಕೆ ಕಳುಹಿಸಬಹುದು ಅವರು ಕೋರಿದ್ದಾರೆ.

ಕೊರೋನಾ ಸೋಂಕು ಜಗತ್ತಿನಾದ್ಯಂತ ಹರಡುತ್ತಿರುವ ಈ ಸಂದರ್ಭದಲ್ಲಿ ಜಗತ್ತಿನ ಅನೇಕಾರು ದೇಶಗಳಲ್ಲಿ ಬಹಳಷ್ಟು ಕಷ್ಟನಷ್ಟಗಳು ಸಂಭವಿಸಿವೆ. ಭಟ್ಕಳದ ಜನರು ದುಬೈಯಲ್ಲಿ ಕಳೆದ 2ತಿಂಗಳಿನಿಂದ ಲಾಕ್‍ಡೌನ್ ನಿಂದಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಿಮಾನ ಪ್ರಯಾಣವನ್ನು ನಿಷೇಧಿಸಿದ್ದು ಒಂದೆಡೆಯಾದರೆ, ಮೊತ್ತೊಂದೆಡೆ ಭಟ್ಕಳವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಇದೊಂದು ನಿರ್ಬಂಧಿತ ಪ್ರದೇಶವಾಗಿದ್ದು ಹೊರಗಡೆಯಿಂದ ಬಂದ ಯಾವುದೇ ವ್ಯಕ್ತಿ 14 ದಿನಗಳ ವರೆಗೆ ಭಟ್ಕಳವನ್ನು ಪ್ರವೇಷಿಸುವಂತಿಲ್ಲ. 14 ದಿನಗ ಸರ್ಕಾರಿ ಅಥವಾ ಹೊಟೇಲ್ ಕ್ವಾರೆಂಟೈನ್ ನಂತರವಷ್ಟೆ ಭಟ್ಕಳ ಪ್ರವೇಶಿಸಲು ಅವಕಾಶ ನೀಡುತ್ತಾರೆ ಆದ್ದರಿಂದ ಭಟ್ಕಳಕ್ಕೆ ಹೋಗಲು ಕಷ್ಟವಾಗುತ್ತಿದೆ ಎಂದ ಮುನೀರಿ ಅನೇಕಾ ಯುವಕರು ಉದ್ಯೋಗವನ್ನು ಅರಸಿ ವಿಸಿಟ್ ವಿಸಾದ ಮೂಲಕ ಭಟ್ಕಳದಿಂದ ದುಬೈಗೆ ಬಂದು ಇಲ್ಲಿ ಸಿಲುಕಿಕೊಂಡಿದ್ದಾರೆ. ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಾಕ್‍ಡೌನ್ ನಿಂದಾಗಿ ಬಹಳಷ್ಟು ಜನರಿಗೆ ವೇತನ ದೊರೆತಿಲ್ಲ. ಅಲ್ಲದೆ ಅನೇಕಾರು ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ ಭಾರತಕ್ಕೆ ಮರಳಿ ಚಿಕಿತ್ಸೆಯನ್ನುಪಡೆಯ ಬಯಸುತ್ತಿದ್ದಾರೆ. ಇವರೆಲ್ಲರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಚಾರ್ಟೆಡ್ ವಿಮಾನವನ್ನೇ ಪಡೆದುಕೊಂಡು ಇವರೆಲ್ಲರನ್ನೂ ಭಾರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕಾಯಿತೆಂದು ಮುನೀರಿ ಹೇಳುತ್ತಾರೆ. 

ದುಬೈನಿಂದ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಮತ್ತು ಮಂಗಳೂರಿನಿಂದ ಭಟ್ಕಳಕ್ಕೆ ಬಸ್ ಸೇವೆ: ದುಬೈಯಿಂದ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಮಾಡಲಾಗಿದ್ದು ಅದರಂತೆ ಮಂಗಳುರು ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ವಿಶೇಷ ಬಸ್ ಇರಲಿದೆ. ಭಟ್ಕಳದಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯ ಮುಖಂಡರೊಂದಿಗೆ ಸಂಪರ್ಕಿಸಿ ಭಟ್ಕಳದಲ್ಲಿ ಕ್ವಾರೈಂಟೇನ್ ವ್ಯವಸ್ಥೆ ಮಾಡುವ ಕುರಿತಂತೆ ಮಾತುಕತೆಯು ನಡೆದಿದ್ದು ಅರ್ಷದ್ ಮೊಹತೆಶಮ್ ರು ಉತ್ತರಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ನಿರಂತ ಸಂಪರ್ಕದಲ್ಲಿದ್ದಾರೆ. ಅಲ್ಲಿಯೂ ಕೂಡ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ತೊಂದರೆ ಮತ್ತು ಅಡೆತಡೆಗಳು ಸಂಭವಿಸಲಾರವು ಎಂದ ಅತಿಕುರ್ರಹ್ಮಾನ್ ಮುನೀರಿ, ವಿಮಾನಯಾದ ಟಿಕೆಟ್ ಬುಕ್ಕಿಂಗ್ ಗಾಗಿ ಯಾರು ಮೊದಲು ಬುಕ್ ಮಾಡುತ್ತಾರೋ ಅವರಿಗೆ ಆಧ್ಯತೆ ನೀಡಲಾಗುವುದು ಮತ್ತು ಕೂಡಲೇ ಪ್ರಯಾಣಿಕರ ಯಾದಿಯನ್ನು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಲಾಗುವುದು ಮತ್ತು ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದರು. 

Read These Next

ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು - ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ...

ಕಾರವಾರ: ಅರ್ಜಿ ಆಹ್ವಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2021-22 ನೇ ...

ಕಾರವಾರ: ಸಹಾಯವಾಣಿ ಪ್ರಾರಂಭ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು ಸಾರ್ವಜನಿಕರು ಹಾಗೂ ಫಲಾನುಭವಿಗಳಿಗೆ ಅನುಕೂಲವಾಗುವಂತೆ 24/7 ...

ಉಡುಪಿ: ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಹತ್ಯೆ ಪ್ರಕರಣ, ಆರೋಪಿ ಅನೂಪ್ ಶೆಟ್ಟಿ 7 ದಿನಗಳ ಪೊಲೀಸ್ ಕಸ್ಟಡಿಗೆ

ಕೋಟೇಶ್ವರ ಸಮೀಪದ ಕಾಳಾವರ -ಅಸೋಡು ಎಂಬಲ್ಲಿನ ಡ್ರೀಮ್ ಫೈನಾನ್ಸ್ ಸಂಸ್ಥೆಯ ಪಾಲುದಾರ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ...

ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ಆಸ್ಪತ್ರೆಗಳಿಗೆ ಧಾವಂತ, ಬೃಹತ್ ಸಮಾವೇಶಗಳಿಂದ ಭಾರತದ ಕೋವಿಡ್ ಸ್ಥಿತಿ ಇನ್ನಷ್ಟು ಉಲ್ಬಣ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಭಾರತದಲ್ಲಿ ಜನರು ಅನಗತ್ಯವಾಗಿ ಆಸ್ಪತ್ರೆಗಳಿಗೆ ಧಾವಿಸುವ ಮೂಲಕ ಬೃಹತ್ ಸಮಾವೇಶಗಳು, ಹೆಚ್ಚು ಸಾಂಕ್ರಾಮಿಕವಾಗಿರುವ ರೂಪಾಂತರಿತ ...

ಕಳಚಿ ಬಿದ್ದ ಭಟ್ಕಳ ಹೈಟೆಕ್ ಬಸ್ ನಿಲ್ದಾಣದ ಕಲ್ಪನೆ; ಉದ್ಘಾಟನೆ, ನಿರ್ವಹಣೆಗೂ ಉದಾಸೀನ !

ಮಣ್ಣುಗೂಡಿನಂತೆ ಇದ್ದ ಭಟ್ಕಳ ಬಸ್ ನಿಲ್ದಾಣದ ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಮಾತು ಕೇಳಿ ...