ಕಾರವಾರ : ರಾಜ್ಯದ ಗಡಿಭಾಗವಾದ ಕಾರವಾರದ ಮಾಜಾಳಿಯಲ್ಲಿ ಕೋವಿಡ್ ಹಿನ್ನಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಅದನ್ನ ವಿರೋಧಿಸಿ ಗೋವಾ ನಾಗರಿಕರು ಬುಧವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕದಿಂದ ಗೋವಾಕ್ಕೆ ತೆರಳುವ ವಾಹನ ತಡೆದು ಪ್ರತಿಭಟನಾಕಾರರು ಕರ್ನಾಟಕ ಸರ್ಕಾರದ ಬಿಗಿ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲಾಡಳಿತ ಗೋವಾದಿಂದ ಕಾರವಾರ ಪ್ರವೇಶಿಸುವ ಜನರಿಗೆ ಆರ್ಟಿಪಿಸಿಆರ್ ನೆಗೆಟಿವ್ ದಾಖಲೆ ಪತ್ರ ಇದ್ದರೆ ಮಾತ್ರ ಪ್ರವೇಶ ನೀಡುತ್ತಿದೆ. ಇದು ಗೋವಾ ನಾಗರಿಕರ ಅಸಮಧಾನಕ್ಕೆ ಕಾರಣವಾಗಿದೆ.
ಪ್ರತಿನಿತ್ಯ ಕಾರವಾರದಿಂದ ಗೋವಾ ಕಡೆ ಹೋಟೇಲು, ಬಾರುಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಹೋಗುತ್ತಾ ಇದ್ದರು. ಇದೀಗ ಗಡಿಯಲ್ಲಿ ಬಿಗಿ ಕ್ರಮ ವಹಿಸಿದ್ದರಿಂದ ನಷ್ಟ ಉಂಟಾಗಿದೆ ಎಂದು ಹೊಟೇಲ್ ಉದ್ಯಮಿಗಳು ಆರೋಪಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.