ಮುರ್ಡೇಶ್ವರ ದೇವಸ್ಥಾನಕ್ಕೆ ಗೋವಾ ರಾಜ್ಯಪಾಲೆ ಶ್ರೀಮತಿ ಮೃದಲಾ ಸಿನ್ಹ ಭೇಟಿ

Source: so news | By MV Bhatkal | Published on 26th April 2019, 9:03 PM | Coastal News | Don't Miss |

 

ಭಟ್ಕಳ: ಇಲ್ಲಿನ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರದಲ್ಲಿ ಒಂದಾದ ಮಾತ್ಹೋಭಾರ ಶ್ರೀ ಮುರ್ಡೇಶ್ವರ ದೇವಸ್ಥಾನಕ್ಕೆ ಗುರುವಾರದಂದು ಮಧ್ಯಾಹ್ನ ಗೋವಾ ರಾಜ್ಯಪಾಲೆ ಶ್ರೀಮತಿ ಮೃದಲಾ ಸಿನ್ಹ ಹಾಗು ಅವರ ಪತಿ ರಾಮಕೃಷ್ಣ ಸಿನ್ಹ ಭೇಟಿ ನೀಡಿ ಸಂಕಲ್ಪಿತ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಗುರುವಾರದಂದು ಬೆಳಿಗ್ಗೆ ಶ್ರೀ ಕ್ಷೇತ್ರ ಗೋಕರ್ಣಕ್ಕೆ ತೆರಳಿ ಅಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಧ್ಯಾಹ್ನದ ವೇಳೆ ಮುರ್ಡೇಶ್ವರಕ್ಕೆ ಬಂದಿದ್ದು, ಆರ್.ಎನ.ಎಸ್. ರೆಸಿಡೆನ್ಸಿಯಲ್ಲಿ ಉಪಹಾರ ಸೇವಿಸಿ ವಿಶ್ರಾಂತಿ ಪಡೆದುಕೊಂಡರು. ಬಳಿಕ ಮಧ್ಯಾಹ್ನ 3 ಗಂಟೆಗೆ ದೇವಸ್ಥಾನಕ್ಕೆ ತೆರಳಿ ಕುಟುಂಬ ಸಮೇತ ವಿಶೇಷ ಹಣ್ಣು ಕಾಯಿ ನೀಡಿ ವಿಶೇಷ ಸಂಕಲ್ಪಿತ ಪೂಜೆಯನ್ನು ಸಲ್ಲಿಸಿದರು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ದೇವಸ್ಥಾನ ಆಡಳಿತ ಕಮಿಟಿಯಿಂದ ಗೋವಾ ರಾಜ್ಯಪಾಲೆ ಶ್ರೀಮತಿ ಮೃದಲಾ ಸಿನ್ಹ ಹಾಗು ಅವರ ಪತಿ ರಾಮಕೃಷ್ಣ ಸಿನ್ಹ ಅವರನ್ನು ಮಲ್ಲಿಗೆ ಹೂವಿನ ಹಾರ ಹಾಗೂ ಶಾಲು ಹೊದಿಸಿ ಸತ್ಕರಿಸಲಾಯಿತು. 
ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಬಂದಿದ್ದು ಪ್ರವಾಸಿಗರನ್ನು ಅರ್ಧಗಂಟೆ ದರ್ಶನ ನಿಷೇಧಿಸಲಾಗಿದ್ದು ಅರ್ಧಗಂಟೆಗೂ ಅಧಿಕ ಕಾಲ ಕಾದು ಕೊನೆಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. 
ಈ ಸಂಧರ್ಭದಲ್ಲಿ ಗೋವಾ ಪೋಲಿಸ ವರಿಷ್ಠಾಧಿಕಾರಿಗಳಾದ ಗೋವಾ ಪೊಲೀಸ್ ಅಧಿಕಾರಿ ವಿಶಾರಾಮ ವಿ. ಬೋರಕರ ಹಾಗೂ ರಾಜವೀರ ಸಿಂಗ್ ರಾಥೋಡ, ಭಟ್ಕಳಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ, ತಹಸೀಲ್ದಾರ್ ಎನ್.ಬಿ.ಪಾಟೀಲ್, ಮುರ್ಡೇಶ್ವರ ಪಿಎಸೈ ಬಸವರಾಜ್, ಸೇರಿದಂತೆ ಗೋವಾ ರಾಜ್ಯದ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗಳು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...