ಗೋವಾದ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ನಿಧನ

Source: sonews | By Staff Correspondent | Published on 17th March 2019, 10:33 PM | National News | Don't Miss |

ಪಣಜಿ: ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಮೇದೋಜ್ಜೀರಕ ಗ್ರಂಥಿಯ ಸಮಸ್ಯೆಯಿಂದ ನರಳುತ್ತಿದ್ದ ಗೋವಾದ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್(63) ಅವರು ರವಿವಾರ ಇಲ್ಲಿಯ ತನ್ನ ಪುತ್ರನ ನಿವಾಸದಲ್ಲಿ ಕೊನೆಯುಸಿರೆಳೆದರು.

ಹಲವಾರು ದಿನಗಳಿಂದ ಏರಿಳಿತದಲ್ಲಿಯೇ ಇದ್ದ ಪಾರಿಕ್ಕರ್ ಅವರ ಆರೋಗ್ಯವು ಶನಿವಾರ ಬೆಳಿಗ್ಗೆ ತೀರ ವಿಷಮಿಸಿತ್ತು. ಕಳೆದ ವರ್ಷದ ಫೆಬ್ರುವರಿಯಿಂದಲೂ ಅವರು ಗೋವಾ,ಮುಂಬೈ,ದಿಲ್ಲಿ ಮತ್ತು ನ್ಯೂಯಾರ್ಕ್‌ಗಳ ಆಸ್ಪತ್ರೆಗಳಿಗೆ ಆಗಾಗ್ಗೆ ದಾಖಲಾಗುತ್ತಲೇ ಇದ್ದರು.

ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪಾರಿಕ್ಕರ್,ತನ್ನ ಕೊನೆಯುಸಿರಿನವರೆಗೂ ತಾನು ಗೋವಾ ಮುಖ್ಯಮಂತ್ರಿಯಾಗಿಯೇ ಇರುತ್ತೇನೆ ಎಂದು ಕಳೆದ ಜನವರಿಯಲ್ಲಷ್ಟೇ ಹೇಳಿದ್ದರು. ಇತ್ತೀಚಿನ ತಿಂಗಳುಗಳಲ್ಲಿ ಸಂಪೂರ್ಣ ಜರ್ಜರಿತರಾಗಿದ್ದ ಅವರು ಮೂಗಿನಲ್ಲಿ ನಳಿಕೆಸಹಿತವಾಗಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.

ಕಳೆದ ಜನವರಿಯಲ್ಲಿ ಗೋವಾ ವಿಧಾನಸಭೆಯಲ್ಲಿ ರಾಜ್ಯ ಮುಂಗಡಪತ್ರವನ್ನು ಮಂಡಿಸಿದ ಸಂದರ್ಭದಲ್ಲಿ ಪಾರಿಕ್ಕರ್ ಅವರಲ್ಲಿ ಮೊದಲಿನಂತೆ ಭಾಷಣ ಮಾಡುವಷ್ಟು ತ್ರಾಣವಿರಲಿಲ್ಲ,ಆದರೂ ಉತ್ಸಾಹವನ್ನು ಅವರು ಕಳೆದುಕೊಂಡಿರಲಿಲ್ಲ.‘‘ “ಈಗಿನ ಸ್ಥಿತಿಯು ವಿವರವಾದ ಬಜೆಟ್ ಭಾಷಣ ಮಾಡಲು ನನಗೆ ಅವಕಾಶ ನೀಡುತ್ತಿಲ್ಲ. ಆದರೆ ನನ್ನಲ್ಲಿ ‘ಜೋಷ್’ ಇದೆ ಮತ್ತು ಅದೂ ಅತ್ಯಂತ ‘ಹೈ’ ಆಗಿದೆ ಮತ್ತು ನಾನು ಸಂಪೂರ್ಣ ‘ಹೋಷ್’ನಲ್ಲಿದ್ದೇನೆ” ಎಂದು ಹೇಳಿದ್ದರು. ಭಾಷಣದ ನಡುವೆ ಅವರು ಔಷಧಿಗಳನ್ನು ಸೇವಿಸುತ್ತಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿತ್ತು.

 ಈ ವರ್ಷದ ಆರಂಭದಲ್ಲಿ ಗೋವಾದಲ್ಲಿ ನೂತನ ಸೇತುವೆಯೊಂದನ್ನು ಸಹ ಉದ್ಘಾಟಿಸಿದ್ದ ಪಾರಿಕ್ಕರ್ ಅವರು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿರುವ ‘ಉರಿ:ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರದ ಪಂಚ್‌ಲೈನ್ ‘ಹೌ ಈಸ್ ದಿ ಜೋಷ್?’ ಅನ್ನು ಉಚ್ಚರಿಸಿದಾಗ ನೆರೆದಿದ್ದ ಜನರು ಭಾರೀ ಹರ್ಷೋದ್ಗಾರ ಮಾಡಿದ್ದರು. 2016ರಲ್ಲಿ ಜಮ್ಮು-ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ದಾಳಿಗಳ ಕೆಲವೇ ದಿನಗಳಲ್ಲಿ ಭಾರತವು ನಿಯಂತ್ರಣ ರೇಖೆಯಾಚೆಯಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತವು ಸರ್ಜಿಕಲ್ ದಾಳಿಯನ್ನು ನಡೆಸಿದಾಗ ಪಾರಿಕ್ಕರ್ ರಕ್ಷಣಾ ಸಚಿವರಾಗಿದ್ದರು.

ಪಾರಿಕ್ಕರ್ ಅವರು ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದು, ಜಿಎಫ್‌ಪಿ,ಎಂಜಿಪಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲವನ್ನು ಹೊಂದಿದ್ದರು. ‘ಅಲ್ಪಸಂಖ್ಯಾತ’ ಸರಕಾರವನ್ನು ವಜಾಗೊಳಿಸುವಂತೆ ಮತ್ತು ಸರಕಾರ ರಚನೆಗೆ ತನ್ನನ್ನು ಆಹ್ವಾನಿಸುವಂತೆ ಕಾಂಗ್ರೆಸ್ ಪಕ್ಷವು ಗೋವಾದ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಲಿಖಿತ ಬೇಡಿಕೆಯನ್ನು ಸಲ್ಲಿಸಿರುವುದರಿಂದ ಪಾರಿಕ್ಕರ್ ಅವರ ನಿಧನದಿಂದಾಗಿ ರಾಜ್ಯದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ.

ಪಾರಿಕ್ಕರ್ ಅವರು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ರಫೇಲ್ ಯುದ್ಧವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಪುನರ್ ಮಾತುಕತೆಗಳು ನಡೆದು ಒಪ್ಪಂದಕ್ಕೆ ಅಂಕಿತ ಬಿದ್ದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಮತ್ತು ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಕುರಿತು ಪಾರಿಕ್ಕರ್ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸುವುದರೊಂದಿಗೆ ರಫೇಲ್ ಒಪ್ಪಂದವು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದೆ. 2000-2005 ಮತ್ತು 2012-2014ರ ಅವಧಿಗಳಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಪಾರಿಕ್ಕರ್ 2014ರಿಂದ 2017ರವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಪಕ್ಷದ ಸೂಚನೆಯಂತೆ ರಾಜ್ಯ ರಾಜಕಾರಣಕ್ಕೆ ಮರಳಿದ್ದ ಅವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಮೂರನೇ ಬಾರಿಗೆ ಮುಖ್ಯಮಂತ್ರಿ ಗಾದಿಗೇರಿದ್ದರು.

ರಾಷ್ಟ್ರಪತಿಗಳ ಸಂತಾಪ

ಪಾರಿಕ್ಕರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

‘‘ಪಾರಿಕ್ಕರ್ ನಿಧನದ ಸುದ್ದಿ ಕೇಳಿ ತೀವ್ರ ವಿಷಾದವಾಗಿದೆ. ಅನಾರೋಗ್ಯವನ್ನು ಅವರು ಧೈರ್ಯ ಮತ್ತು ಘನತೆಯಿಂದಲೇ ಎದುರಿಸಿದ್ದರು. ಪ್ರಾಮಾಣಿಕತೆಯ ಪ್ರತೀಕವಾಗಿದ್ದ ಅವರು ಸಾರ್ವಜನಿಕ ಜೀವನಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದರು. ಗೋವಾ ಮತ್ತು ಭಾರತದ ಜನತೆ ಅವರ ಸೇವೆಯನ್ನು ಮರೆಯುವುದಿಲ್ಲ ’’ಎಂದು ರಾಷ್ಟ್ರಪತಿಗಳು ಟ್ವೀಟಿಸಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...