ಗಿರೀಶ ಕಾರ್ನಾಡ್ ರ ನಿಧನ : ಶಿಕ್ಷಕರ ಸಂಘದ ಸಂತಾಪ

Source: so news | By Manju Naik | Published on 11th June 2019, 7:24 PM | State News | Don't Miss |

ಬೆಳಗಾವಿ: ದಿ.10- ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ, ಬಹುಮುಖ ಪ್ರತಿಭೆಯ ಮೇರುಸಾಹಿತಿ, ಕನ್ನಡದ ಹೆಮ್ಮೆಯ ಡಾ. ಗಿರೀಶ ಕಾರ್ನಾಡ್ ರ ನಿಧನಕ್ಕೆ ಬೆಳಗಾವಿ ನಗರ ಹಾಗೂ ತಾಲೂಕಿನ ಗುರುಸ್ಪಂದನ ಶಿಕ್ಷಕರ ಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸಿದರು.
ಅವರಿಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಸೇರಿ ಸಂತಾಪ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾತನಾಡಿದ ತಾಲೂಕಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ , ಸಾಹಿತಿ ಬಸವರಾಜ ಸುಣಗಾರರು  ಗಿರೀಶ ಕಾರ್ನಾಡ್ ರು ಸಾಹಿತ್ಯ ಕ್ಷೇತ್ರವಲ್ಲದೆ ನಟ ನಿರ್ದೇಶಕರಾಗಿ ಸ್ಮರಣೆಯ ಕಾರ್ಯ ಮಾಡಿರುವರು. ಹಯವದನ, ಯಯಾತಿ ಸೇರಿದಂತೆ ಹಲವಾರು ನಾಟಕಗಳನ್ನು ರಚಿಸಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿÉಸಿ ಜನಪ್ರೀಯರಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಆರನೇಯ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದರು ಎಂದು ಹೇಳಿದರು. 
ರಾಜ್ಯ ಶಿಕ್ಷಕ ಸಂಘದ ಕೋಶಾಧ್ಯಕ್ಷ ಎಸ್.ಡಿ.ಗಂಗಣ್ಣವರ, ತಾಲೂಕಾ ಶಿಕ್ಷಕ ಸಹಕಾರ ಸಂಘದ ಅಧ್ಯಕ್ಷ ಶೇಖರ ಕರಂಬಳಕರ, ಮಾಜಿ ಅಧ್ಯಕ್ಷರಾದ ಅನ್ವರ ಲಂಗೋಟಿ, ಮಹಿಳಾ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರೇಖಾ ಅಂಗಡಿ, ಗಿರಿಜಾ ಮಣ್ಣೀಕೇರಿ, ಸುಶೀಲಾ  ಗುರವ, ಖುಷಕುಮಾರ ದೇಸಾಯಿ, ಅಸೀಪ್ ಅತ್ತಾರ, ಸುಮಾ ದೊಡ್ಡಮನಿ, ಮಡಿವಾಳರ, ರಸೂಲ್ ಖಾನ್, ಮೋದಗೇಕರ, ಎಸ್.ಬಿ.ರಾವಳ, ಎ.ಡಿ.ಸಾಗರ. ಶಿವಾನಂದ ಹಿತ್ತಲಮನಿ, ಆಸ್ಮಾ ನಾಯಿಕ, ಆರ್.ಕೆ.ಗುರವ ಸೇರಿದಂತೆ ಪಧಾಧಿಕಾರಿಗಳು ಉಪಸ್ಥಿತರಿದ್ದರು.

Read These Next

ಲಕ್ಷಣರಹಿತ ರೋಗಿಗಳಿಗೆ ಇನ್ಮುಂದೆ ಹೋಂ ಐಸೋಲೇಶನ್ 1ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ನಿರ್ಧಾರ: ಸಚಿವ ಶ್ರೀರಾಮುಲು