ಭಟ್ಕಳ: ಕೊರೊನಾ 3 ನೇ ಅಲೆ ಎದುರಿಸಲು ಸಿದ್ದರಾಗಿ; ವೀರೇಂದ್ರ ಬಾಡಕರ

Source: S O News service | By I.G. Bhatkali | Published on 17th June 2021, 1:45 PM | Coastal News |

ಭಟ್ಕಳ: ಭಟ್ಕಳ ತಾಲೂಕ ಪಂಚಾಯತ ಸಾಮಾನ್ಯ ಸಭೆ ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಕುರಿತಾಗಿ ತಜ್ಞರು ಅಭಿಪ್ರಾಯ ಪಡುತ್ತಿರುವ ಹಿನ್ನಲೆಯಲ್ಲಿ ಈಗಿನಿಂದಲೇ  ತಾಲೂಕಿನ ಅಧಿಕಾರಿಗಳು ಅದನ್ನು ಎದುರಿಸುವ ಕುರಿತು ಪೂರ್ವ ಸಿದ್ಧತೆಯಲ್ಲಿರಬೇಕು ಎಂದು ಭಟ್ಕಳ ತಾಲೂಕ ಪಂಚಾಯತ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ವೀರೇಂದ್ರ ಬಾಡಕರ ಕರೆ ನೀಡಿದರು.

ಅವರು ಭಟ್ಕಳ ತಾಲೂಕ ಪಂಚಾಯತಿಯ ಬಜೆಟ್ ಮಂಡನಾ ಸಾಮಾನ್ಯ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. 

ಜುಲೈ 01 ರಿಂದ ಶಾಲೆಗಳು ಪುನರಾಂಭ ಆಗುವುದರಿಂದ ಎಲ್ಲಾ ಶಿಕ್ಷಕ ಸಮುದಾಯಕ್ಕೆ ಕಡ್ಡಾಯವಾಗಿ ಲಸಿಕೆ ಹಾಕುವುದರ ಜೊತೆಗೆ ಶಾಲೆಗಳಲ್ಲಿ ಸೆನಿಟೈಸರ್, ಸಾಮಾಜಿಕ ಅಂತರ, ಮಾಸ್ಕ ಬಳಕೆ, ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ವಿಕಲಾಂಗರಿಗೆ ಲಸಿಕೆ ನೀಡುವ ಪಕ್ರಿಯೆ ಚಾಲ್ತಿಯಲ್ಲಿದ್ದು, ಶಿಶು ಅಭಿವೃದ್ಧಿ ಇಲಾಖೆ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ನೌಕರರು ಕ್ರೀಯಾಶೀಲವಾಗಿ ತೊಡಗಿಸಿಕೊಂಡು ಪ್ರತಿಶತ ಸಾಧನೆ ಮಾಡಲು ಕರೆ ನೀಡಿದರು. ಮುಂಡಳ್ಳಿ, ಯಲ್ವಡಿಕವೂರ ಗ್ರಾ.ಪಂ. ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸುವಂತೆ ತಿಳಿಸಿದರು. 
    ತಾಲೂಕ ಪಂಚಾಯತಿಯ 2021-22 ನೇ ಸಾಲಿನ ಆಯ-ವ್ಯಯ ಪತ್ರವನ್ನು ಆಡಳಿತಾಧಿಕಾರಿಗಳಾದ ವೀರೇಂದ್ರ ಬಾಡಕರ ರವರು ಓದಿ ಸಭೆಯಲ್ಲಿ ಮಂಡಿಸಿದರು. ಈ ಮುಂಗಡ ಪತ್ರವು ಸಾರ್ವಜನಿಕ ಶಿಕ್ಷಣ ಇಲಾಖೆಗೆ ರೂ. 4987.96 ಲಕ್ಷ, ವೈದ್ಯಕೀಯ ಹಾಗೂ ಜನಾರೋಗ್ಯ ಇಲಾಖೆಗೆ ರೂ. 37.520 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ  ರೂ. 19.15 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ರೂ. 1.87 ಲಕ್ಷ, ಶಿಶು ಅಭಿವೃದ್ಧಿ ಇಲಾಖೆಗೆ ರೂ. 1045.63 ಲಕ್ಷ, ಕೃಷಿ ಇಲಾಖೆಗೆ ರೂ. 28.48 ಲಕ್ಷ, ಪಶು ಸಂಗೋಪನೆ ಇಲಾಖೆಗೆ ರೂ. 56.51 ಲಕ್ಷ ಹಾಗೂ ತಾಲೂಕ ಪಂಚಾಯತ ಕಾರ್ಯಕ್ರಮಗಳಿಗೆ ರೂ. 258.58 ಲಕ್ಷ ನಿಗಧಿಪಡಿಸಿ ತಾಲೂಕ ಪಂಚಾಯತ ನಿಧಿಯ ಎಲ್ಲಾ ಕಾರ್ಯಕ್ರಮಗಳಿಗೆ ಅಂತೂ ರೂ. 6435.70 ಲಕ್ಷ ಅನುದಾನದ ವೆಚ್ಚಕ್ಕೆ ಗುರಿ ಹೊಂದಿರುವುದನ್ನು ಸಭೆಯು ತಾಲೂಕ ಪಂಚಾಯತ ನಿಧಿಯ ಕಾರ್ಯಕ್ರಮ ಪರಿಶೀಲಿಸಿ ಸರ್ವಾನುಮತದಿಂದ 2021-22 ನೇ ಸಾಲಿನ ಆಯ-ವ್ಯಯಕ್ಕೆ ಅನುಮೋದನೆ ನೀಡಿತು.

ನಂತರ ಶಿಕ್ಷಣ, ಆರೋಗ್ಯ, ಪಶುವೈದ್ಯಕೀಯ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಭಾಕರ ಚಿಕ್ಕನ್ಮನೆಯವರು ವೇದಿಕೆಯಲ್ಲಿದ್ದು, 2021-22 ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು. ವ್ಯವಸ್ಥಾಪಕಿ ಲತಾ ನಾಯ್ಕ, 2020-21 ನೇ ಸಾಲಿನ ವಾರ್ಷಿಕ ಜಮಾ ಖರ್ಚು ಓದಿ ಹೇಳಿದರು. ಹೇಮಾ ನಾಯ್ಕ ಮಾಸಿಕ ಲೆಕ್ಕ ಓದಿ ಹೇಳಿ ಅನುಮೋದನೆ ಪಡೆಯಲಾಯಿತು. ಕರಿಯಪ್ಪ ನಾಯ್ಕ ಸ್ವಾಗತಿಸಿದರು. ಲತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...