ಶ್ರೀನಿವಾಸಪುರ: ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ

Source: Shabbir Ahmed | By S O News | Published on 5th August 2021, 4:59 PM | State News |

ಶ್ರೀನಿವಾಸಪುರ: ಇಲ್ಲಿ ಏರ್ಪಡಿಸಿದ್ದ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ ಪಟ್ಟಣದಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ 15ನೇ ಹಣಕಾಸು ಯೋಜನೆಯ ಎರಡು ವಿಭಾಗಗಳಲ್ಲಿ ಕ್ರಮವಾಗಿ ರೂ.141 ಲಕ್ಷ ಹಾಗೂ ರೂ.110 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಸಭೆಯ ಸಮ್ಮತಿ ಕೇಳಲಾಯಿತು. ಈ ಬಗ್ಗೆ ಕೆಲವು ಸದಸ್ಯರು ಎತ್ತಿದ ಆಕ್ಷೇಪಣೆಗೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಉತ್ತರ ನೀಡಿದ ಬಳಿಕ ಸಭೆ ಸಮ್ಮತಿ ನೀಡಿತು.

ಪುರಸಭೆಗೆ ಸೇರಿದ 50 ಹಳೆ ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಿಸಲು, ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳಿಗೆ ಅವಕಾಶ ಕಲ್ಪಿಸಲು ಸಭೆ ಅನುಮೋದನೆ ನೀಡಿತು.

ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು, ಕೋವಿಡ್ ನಿಯಮ ಪಾಲಿಸಲು ಸದಸ್ಯರು ಸಹಕಾರ ನೀಡಬೇಕು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಸದಸ್ಯರಾದ ಬಿ.ವೆಂಕಟರೆಡ್ಡಿ, ಮುನಿರಾಜು ಮತ್ತಿತರರು ಸಭೆಯಲ್ಲಿ ಮಾತನಾಡಿ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಅಧಿಕಾರಿಗಳಾದ ಡಿ.ಶೇಖರ್ ರೆಡ್ಡಿ, ಪೃಥ್ವಿರಾಜ್, ನಾಗರಾಜ್, ಶಂಕರ್, ರಾಜೇಶ್ವರಿ, ನಾಗೇಶ್, ಸಂತೋಷ್ ಇದ್ದರು.

Read These Next

ರಸ್ತೆ,ರೈಲು, ವಾಯು ಮಾರ್ಗ- ಸಮಗ್ರ ಅಭಿವೃದ್ದಿ. ಶಿಕ್ಷಣದಿಂದ ಬದಲಾವಣೆ - ಕೈಗಾರಿಕೆಯಿಂದ ಅಭಿವೃದ್ದಿ ಸಾಧನೆ ಆಗಬೇಕು : ಬಿ‌ ವೈ ರಾಘವೇಂದ್ರ.

ಶಿವಮೊಗ್ಗ : ಶಿಕ್ಷಣದಿಂದ ಬದಲಾವಣೆ ಮತ್ತು ಕೈಗಾರಿಕೆಯಿಂದ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಶಿಕ್ಷಣ ನೀತಿ ...

ನಾಗಿರೆಡ್ಡಿ ಗ್ರಾಮದ ಬಳಿ ತ್ವರಿತವಾಗಿ ಗೋಶಾಲೆ ಆರಂಭಿಸಿ: ಜಿಲ್ಲಾಧಿಕಾರಿ ಆರ್ ಲತಾ

ಚಿಕ್ಕಬಳ್ಳಾಪುರ : ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆಯಾಗಿರುವ ಜಿಲ್ಲೆಯ ನಾಗಿರೆಡ್ಡಿ ಗ್ರಾಮದ ಬಳಿ ಪ್ರಸ್ತುತ ...

ಈ ಬಾರಿ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಿರ್ಧಾರ: ಡಾ. ಕೆ.ಸಿ ನಾರಾಯಣಗೌಡ

ಮಂಡ್ಯ : ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ...