ಸೇನಾ ಹೆಲಿಕಾಪ್ಟರ್ ಪತನ; ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವು

Source: S O News | By I.G. Bhatkali | Published on 9th December 2021, 11:22 AM | National News |

ಹೊಸದಿಲ್ಲಿ: ರಕ್ಷಣಾ ಪಡೆಗಳ ವರಿಷ್ಠ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರು ಸಮೀಪ ಪತನಗೊಂಡಿದ್ದು, ಘಟನೆಯಲ್ಲಿ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಸೇನಾಧಿಕಾರಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನೀಲಗಿರಿ ಜಿಲ್ಲೆಯಲ್ಲಿರುವ ವೆಲ್ಲಿಂಗ್ಟನ್‌ಗೆ ತೆರಳುವುದಕ್ಕಾಗಿ ಈ ನತದೃಷ್ಟ ಹೆಲಿಕಾಪ್ಟರ್ ಬೆಳಗ್ಗೆ 11:48ರ ವೇಳೆಗೆ ಸುಲೂರ್‌ನಲ್ಲಿರುವ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ದಟ್ಟಾರಣ್ಯದ ನಡುವೆ ಇರುವ ಕಚೇರಿ ಟೀ ಎಸ್ಟೇಟ್ ಸಮೀಪ

ಭಾರತದ ರಕ್ಷಣಾ ಪಡೆಗಳ ವರಿಷ್ಠರಾಗಿ ಜನರಲ್ ರಾವತ್ ಅವರು ರಕ್ಷಣಾಸುಧಾರಣೆಗಳು ಸೇರಿದಂತೆ ನಮ್ಮ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವೈವಿಧ್ಯಮಯ ವಿಷಯಗಳ ಬಗೆಗೆ ಶ್ರಮಿಸಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸಿದ ಶ್ರೀಮಂತ ಅನುಭವವನ್ನು ಅವರು ತನ್ನೊಂದಿಗೆ ತಂದಿದ್ದರು. ಅವರ ಅತ್ಯುತ್ಕೃಷ್ಟ ಸೇವೆಯನ್ನು ಭಾರತವು ಎಂದಿಗೂ ಮರೆಯಲಾರದು.

ನರೇಂದ್ರ ಮೋದಿ, ಪ್ರಧಾನಿ

ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ. ಬಿಪಿನ್ ರಾವತ್ ಅವರು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜ್‌ನ ಬೋಧಕವರ್ಗ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದ್ದಾಗಿ ಅವು ತಿಳಿಸಿವೆ.

ಅವಘಡ ನಡೆದ ಸಂದರ್ಭ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿಯಲ್ಲಿ 13 ಮಂದಿ ಸಾವನಪ್ಪಿದ್ದಾರೆ. ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್‌ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆಯೆಂದು ಮೂಲಗಳು ತಿಳಿಸಿವೆ.

ಭೂಸ್ಪರ್ಶ ಮಾಡಲು ಕೇವಲ 10 ನಿಮಿಷಗಳಿರುವಾಗ

ರಸ್ತೆಯಿಂದ 10 ಕಿ.ಮೀ. ದೂರದ ಅರಣ್ಯಪ್ರದೇಶದಲ್ಲಿ ಹೆಲಿಕಾಪ್ಟರ್ ಪನತಗೊಂಡಿದೆ. ಹೆಲಿಕಾಪ್ಟರ್ ದುರಂತದ ಬಗ್ಗೆ ತನಿಖೆಗೆ ಭಾರತೀಯ ವಾಯುಪಡೆ ಆದೇಶ ನೀಡಿದೆ.

ನೀಲಗಿರಿ ಬೆಟ್ಟದ ದಟ್ಟಾರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್‌ನ ಭಗ್ನಾವಶೇಷಗಳು ಚದುರಿಬಿದ್ದಿರುವ ಹಾಗೂ ದಟ್ಟವಾದ ಹೊಗೆ ಮತ್ತು ಉರಿಯುತ್ತಿರುವ ಬೆಂಕಿಯ ನಡುವೆ ಮೃತದೇಹ ಗಳನ್ನು ಗುರುತಿಸಲು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ಕಾಣಿಸಿವೆ. ಕರಕಲಾದ ಮೃತದೇಹ ಗಳನ್ನು ವಿಮಾನದ ಭಗ್ನಾವಶೇಷಗಳು ಹಾಗೂ ಮುರಿದುಬಿದ್ದ ಮರಗಳೆಡೆಯಿಂದ ಹೊರಗೆಳೆಯಲಾಗಿದೆ. 

ಘಟನೆಗೆ ಸಂಬಂಧಿಸಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವರಗಳನ್ನು ನೀಡಿದರು. ಬುಧವಾರ ಸಂಜೆ ನರೇಂದ್ರ ಮೋದಿಯವರು ತನ್ನ ನಿವಾಸದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ ತುರ್ತು ಸಭೆ ನಡೆಸಿದರು. ರಾವತ್ ಹಾಗೂ ಇತರ ರಕ್ಷಣಾ ಅಧಿಕಾರಿಗಳು ದುರಂತದಲ್ಲಿ ಸಾವನ್ನಪ್ಪಿರುವುದನ್ನು ಅಧಿಕೃತವಾಗಿ ಘೋಷಿಸುವ ಮುನ್ನ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಹಾಗೂ ಸೇನಾ ವರಿಷ್ಠ ಎಂ.ಎಂ. ನರವಣೆ, ದಿಲ್ಲಿಯಲ್ಲಿರುವ ಜನರಲ್ ರಾವತ್ ನಿವಾಸಕ್ಕೆ ಭೇಟಿ ನೀಡಿದ್ದರು.

ಜನರಲ್ ರಾವತ್ ನಿಧನಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಅವರು ರಕ್ಷಣಾ ಪಡೆಗಳ ವರಿಷ್ಠ ನಿಧನವು ದೇಶಕ್ಕೆ ಹಾಗೂ ಸೇನಾಪಡೆಗಳಿಗೆ ತುಂಬಲಾರದ ನಷ್ಟವೆಂದು ಘೋಷಿಸಿದ್ದಾರೆ.

63 ವರ್ಷದ ಜನರಲ್ ರಾವತ್ ಅವರು ಭಾರತದ ರಕ್ಷಣಾ ಪಡೆಗಳ ಮೊತ್ತಮೊದಲ ವರಿಷ್ಠರಾಗಿ 2020ರ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆ, ಈ ಮೂರು ರಕ್ಷಣಾಪಡೆಗಳಲ್ಲಿ ಪರಸ್ಪರ ಸಮನ್ವಯತೆಗಾಗಿ ಈ ಹುದ್ದೆಯನ್ನು ಮೋದಿ ಸರಕಾರವು ಸೃಷ್ಟಿಸಿತ್ತು.

ಭೂಸೇನೆಯ ಮಾಜಿ ವರಿಷ್ಠರೂ ಆಗಿರುವ ಜನರಲ್ ರಾವತ್ ಅವರು ನೂತನವಾಗಿ ಸೃಷ್ಟಿಸಲಾದ ಸೇನಾ ವ್ಯವಹಾರಗಳ ಇಲಾಖೆಯ ವರಿಷ್ಠರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

1978ರಲ್ಲಿ ದ್ವಿತೀಯ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದ ರಾವತ್ ಅವರು ರಕ್ಷಣಾಪಡೆಯಲ್ಲಿ ನಾಲ್ಕು ದಶಕಗಳ ಸೇವೆಯನ್ನು ಸಲ್ಲಿಸಿದ್ದಾರೆ. ಜಮ್ಮಕಾಶ್ಮೀರ ಗಡಿಯಲ್ಲಿ ಹಾಗೂ ಚೀನಾದ ಗಡಿಗೆ ತಾಗಿಕೊಂಡಿರುವ ನೈಜಗಡಿನಿಯಂತ್ರಣ ರೇಖೆಯುದ್ದಕ್ಕೂ ಅವರು ಸೇನಾಪಡೆಗಳ ನೇತೃತ್ವ ವಹಿಸಿದ್ದರು. 2016ರ ಡಿಸೆಂಬರ್‌ನಲ್ಲಿ ಅವರು ಭೂಸೇನೆಯ ವರಿಷ್ಠರಾಗಿ ನೇಮಕಗೊಂಡಿದ್ದರು.

ಈ ದಾರುಣ ದುರಂತಕ್ಕೆ ಮಾಜಿ ಸೇನಾ ವರಿಷ್ಠರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಎಂಐ-17ಡಬಲ್ ಎಂಜಿನ್ ಹೆಲಿಕಾಪ್ಟರ್‌ ಅತ್ಯಂತ ಸುಸ್ಥಿರವಾದ ಹೆಲಿಕಾಪ್ಟರ್‌ ಆಗಿದ್ದು, ಅದನ್ನು ಅತಿ ಗಣ್ಯ ವ್ಯಕ್ತಿಗಳ ಹಾರಾಟಕ್ಕಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...