ಕಂಡಕಂಡಲ್ಲಿ ಕಸದ ರಾಶಿ; ಭಟ್ಕಳದ ಅಭಿವೃದ್ಧಿಗೊಂದು ಕಳಂಕ

Source: sonews | By Staff Correspondent | Published on 7th August 2018, 6:46 PM | Coastal News | State News | Special Report | Public Voice | Don't Miss |

•    ಎಂ.ಆರ್.ಮಾನ್ವಿ 

ಉತ್ತರಕನ್ನಡ ಜಿಲ್ಲೆಯಲ್ಲೇ ಅನಿವಾಸಿ ಭಾರತಿಯರು ಹೆಚ್ಚಾಗಿ ವಾಸಿಸುವ ನಗರವೆಂದರೆ ನಿಸ್ಸಂಶಯವಾಗಿ ಭಟ್ಕಳ ಎಂದೇ ಹೇಳಬಹುದು. ಆದ್ದರಿಂದಲೆ  ಗಲ್ಫ್, ಸೌದಿ ಅರೇಬಿಯಾ ಮತ್ತಿತರರ ಹೊರದೇಶಗಳ ಪರಿಸರದಲ್ಲಿ ಬದುಕಿಬಂದ ಭಟ್ಕಳಿಗಳಿಗರಿಗೆ ಇಲ್ಲಿನ ರಾಶಿ ರಾಶಿ ಕಸವನ್ನು ಕಂಡು ನಿಜಕ್ಕೂ ಗಾಬರಿ ಮತ್ತು ಆಚ್ಚರಿ ಎರಡು ಏಕಕಾಲದಲ್ಲಿ ಉಂಟಾಗಬಹುದು. ಉತ್ತಮ ಪರಿಸರ, ಹವಮಾನ, ಕ್ಲೀನ್ ಮತ್ತು ಗ್ರೀನ್ ನಗರಗಳು ಅಲ್ಲಿನ ಆಡಳಿತ ಎಲ್ಲವೂ ಕಂಡು ಒಮ್ಮೆ ಇಲ್ಲಿನ ಆಡಳಿತದ ಮೇಲೆ ಕೋಪ ಮತ್ತು ರೋಷ ಉಂಟಾಗಲೂ ಬಹುದು ಅಥವಾ ಇಲ್ಲಿನ ಅವವ್ಯಸ್ಥೆ ಕಂಡೂ ರೋಸಿಹೋಗಲು ಬಹುದು. 

ಇರಲಿ ವಿಷಯಕ್ಕೆ ಬರುವುದಾದರೆ ನಗರದ ತುಂಬೆಲ್ಲಾ ಕಸದ ರಾಶಿ, ಪ್ಲಾಸ್ಟಿಕ್ ಕೊಟ್ಟೆಗಳು ಹೊಲಸನ್ನು ತನ್ನೊಡಲಲ್ಲಿ ತುಂಬಿಕೊಂಡು ನಾರುತ್ತಿವೆ. ಮದೀನಾ ಕಾಲೋನಿ, ಹನಿಫಾಬಾದ್, ಹೆಬಳೆ ಗ್ರಾ.ಪಂ.ವ್ಯಾಪ್ತಿಯ ಜಾಮಿಯಾಬಾದ್ ರಸ್ತೆ ಇನ್ನೂ ಹತ್ತಾರು ಪ್ರದೇಶಗಳು ಪ್ಲಾಸ್ಟಿಕ್ ಮಯಗೊಂಡಿದ್ದು ಇಕ್ಕೆಲಗಳಲ್ಲಿ ಹಾನಿಕಾರ ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿರುವ ಎಲ್ಲ ರೀತಿಯ ಕೊಳಕು ವಸ್ತುಗಳು ದುರ್ವಾಸನೆ ಬೀರಿ ಜನರನ್ನು ಭಯಬೀತರನ್ನಾಗಿ ಮಾಡಿವೆ. 

ಭಟ್ಕಳ ಈಗ ಅಭಿವೃದ್ಧಿ ಹೊಂದುತ್ತಿದೆ. ಹೊರದೇಶಗಳನ್ನು ನಾಚಿಸುವಂತಹ ಮಲ್ಟಿ ಫ್ಲೋರ್ ಕಟ್ಟಗಳು ಈಗ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಗಲ್ಫ್ ಮಾದರಿಯ ಬಹುಮಹಡಿ ಕಟ್ಟಡಗಳು, ಸುಂದರ ಇಮಾರತ್ತುಗಳು ಈಗ ಭಟ್ಕಳವನ್ನು ಮತ್ತಷ್ಟು ಸುಂದರಗೊಳಿಸುತ್ತಿದೆ. ಆದರೆ ನಗರದ ಸ್ವಚ್ಚತೆಯ ವಿಷಯಕ್ಕೆ ಬಂದಾಗ ಇದೊಂದು ಗಾರ್ಬೇಜ್ ನಗರವಾಗಿ ಮಾರ್ಪಡುತ್ತಿದೆ. ಪ್ಲಾಸ್ಟಿಕ್ ಕೊಟ್ಟೆಗಳ ಅತಿಯಾದ ಬಳಕೆಯ ದುಷ್ಪÀರಿಣಾಮ ಈಗ ಗೋಚರವಾಗತೊಡಗಿದೆ. ನೆಲದಲ್ಲಿ ಹುದುಗಿದರೂ ಕರಗದ ಪ್ಲಾಸ್ಟಿಕ್ ಚೀಲಗಳು ಮನುಷ್ಯನ ಆಯಸ್ಸನ್ನು ಮಾತ್ರ ಕರಗಿಸುತ್ತಿದೆ. ಅದರಿಂದಾಗಿ ಉಂಟಾಗುವ ಪರಿಸರ ನಾಶ ಸೇರಿದಂತೆ ಮನುಷ್ಯನ ಹಲವು ಅದ್ವಾನಗಳಿಗೆ ಈ ಪ್ಲಾಸ್ಟಿಕ್ ಬಳಕೆ ಕಾರಣವಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ. 
ಇಲ್ಲಿನ ಸಂಘಸಂಸ್ಥೆಗಳು, ಸಮಾಜಸೇವಕರು ಇಲಾಖೆಯ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಕುರಿತು ಎಷ್ಟೆ ಜಾಗೃತಿ ಮೂಡಿಸಿದರೂ ಸಹ ಮನುಷ್ಯನ ಸಂಬಂಧ ಮಾತ್ರ ಪ್ಲಾಷ್ಟಿಕ್ ನೊಂದಿಗೆ ಅತ್ಯಂತ ಗಾಢವಾಗತೊಡಗಿದೆ. ಪ್ಲಾಸ್ಟಿಕ್ ಇಲ್ಲದೆ ಮನುಷ್ಯ ಬದುಕಲು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರತೊಡಗಿದೆ. ಪ್ರತಿಯೊಂದನ್ನು ಪ್ಲಾಷ್ಟಿಕ್ ಅವಲಂಭಿಸಿದ್ದರ ಪರಿಣಾಮವಾಗಿ ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಒಂದೆರಡು ಬಡ ಅಂಗಡಿಕಾರರ ಅಂಗಡಿಗಳಿಗೆ ದಾಳಿ ಮಾಡಿ ಒಂದಿಷ್ಟು ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪತ್ರಿಕೆಗಳಲ್ಲಿ ವರದಿಯಾಗುತ್ತಾರೆ. ಹೋಲ್ ಸೇಲ್ ವ್ಯಾಪರಸ್ಥರ ಗೊಡವೆಗೆ ಹೋಗದ ಅಧಿಕಾರಿಗಳು ಕೇವಲ ಕಾಟಚಾರಕ್ಕೆ ಬಡಅಂಗಡಿಕಾರರ ಮೇಲೆ ತಮ್ಮ ಮಂತ್ರದಂಡ ಬೀಸುತ್ತಾರೆ. ಇದರ ಪರಿಣಾಮ ಕೆಲದಿನಗಳು ಮಾತ್ರ. ಮತ್ತದೆರಾಗ ಅದೇ ಹಾಡು ಎನ್ನುವಂತೆ ಜನರು ಕೂಡ ಎಲ್ಲವನ್ನು ಮರೆತು ಮೂಲಸ್ಥಿತಿಗೆ ಮರಳುತ್ತಾರೆ. 

ಪ್ಲಾಸ್ಟಿಕ್ ಚೀಲಗಳ ಒಂದು ಕತೆಯಾದರೆ ಅದು ಬಿಟ್ಟು ಹೋಗುವ ಭಯಂಕರ ಸಮಸ್ಯಗಳ ಕಥೆ ಮತ್ತೊಂದೆಡೆ ಇದನ್ನು ಸಮರ್ಪಕವಾಗಿ ವಿಲೆಮಾಡದೆ ಅಲ್ಲಲ್ಲೇ ಬಿಟ್ಟು ಅತ್ತ ಕೊಳೆಯದೆ ಇತ್ತ ಕರಗದೆ ಅಂತರಪಿಶಾಚಿಯಂತೆ ರಸ್ತೆಯಲ್ಲಿ ಅಲೆದಾಡುತ್ತಿರುವ ತುಂಡು ತುಂಡು ಕೊಟ್ಟೆಗಳು. ಇದನ್ನು ಸರಿಪಡಿಸಲು ಯಾವುದೇ ವ್ಯವಸ್ಥೆ ಇಲ್ಲದಿರುವುದು ಒಂದು ಸಮಸ್ಯೆಯಾಗಿದೆ. ಪುರಸಭೆಯವರು ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಿದ್ದು ಒಂದು ಉತ್ತಮ ಬೆಳವಣೆಗೆ. ಆದರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಇದರ ವ್ಯವಸ್ಥೆ ಇಲ್ಲದಿರುವುದು ಮಾತ್ರ ಸಮಸ್ಯೆಗಳ ಸೃಷ್ಟಿಗೆ ಕಾರಣ. ಹೆಬಳೆ ಪಂಚಾಯತ್. ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಂತೋ ಕಸದ ರಾಶಿಯೇ ತುಂಬಿಕೊಂಡಿದೆ. ಜನರು ತಮ್ಮ ಮನೆಯ ಮಂದೆ ಕಸವನ್ನು ಇಟ್ಟಿಕೊಳ್ಳದೆ ರಸ್ತೆಯ ಮೇಲೆಯೇ ಬಿಸಾಡಿ ಹೋಗುತ್ತಿದ್ದು ಯಾರನ್ನು ಹೇಳಬೇಕು ಯಾರನ್ನು ಬಿಡಬೆಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಜನರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದೆಯಾದಲ್ಲಿ ಇಷ್ಟೊಂದು ಗಂಬೀರ ಸಮಸ್ಯ ಹುಟ್ಟಿಕೊಳ್ಳುತ್ತಿರಲಿಲ್ಲ. ಆದರೆ ಜನರಿಗೆ ಇದು ಬೇಕಾಗಿಲ್ಲ. ಕಸವನ್ನು ರಸ್ತೆಯ ಮೇಲೆ ಬೀಸಾಡುವುದರ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. 

ಕೆಲವರ್ಷಗಳ  ಹಿಂದೆ ಅನಿವಾಸಿ ಭಾರತೀಯರ ಸಂಘಟನೆ ರಾಬಿತಾ ಸೂಸೈಟಿ ‘ಗ್ರೀನ್ ಭಟ್ಕಳ ಕ್ಲೀನ್ ಭಟ್ಕಳ’ ಅಭಿಯಾನಕ್ಕೆ ಚಾಲನೆ ನೀಡಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತಾದರೂ ಅದರ ಫಾಲೋಅಪ್ ಮಾತ್ರ ಆಗಲಿಲ್ಲ. ಕೇವಲ ಬ್ಯಾನರ್, ಘೋಷಣೆಗಳಿಗೆ ಮಾತ್ರ ಅದು ಸೀಮಿತಗೊಂಡಿತು.

 

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...