ಭಟ್ಕಳ: ಭಟ್ಕಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಗರ್ ರೋಡ್ ನಲ್ಲಿರುವ ಪುರಸಭೆಯ ವಾಟರ್ ಟ್ಯಾಂಕ್ ಹತ್ತಿರ KA-04-MZ-4343 ನೇದರ ಕಾರಿನಲ್ಲಿ ನಿಷೇಧಿತ ಗಾಂಜಾ ಮತ್ತು MDMA ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಭಟ್ಕಳದ ಮಗ್ದುಂ ಕಾಲೋನಿ ಯ ಮೊಹಮ್ಮದ ಜೀಯಾಮ್ (19), ನೌಮಾನ (25), ಮೊಹಮ್ಮದ ಫರ್ಹಾನ್ (25), ಬೇಳ್ನಿ ಬಂದರ ನಿವಾಸಿ ನಸರುದ್ದೀನ ಶೇಖ್ (24) ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳು ಬಳಸುತ್ತಿದ್ದ ಕಾರು, 15,000 ರೂ. ಮೌಲ್ಯದ 370 ಗ್ರಾಂ ನಿಷೇಧಿತ ಗಾಂಜಾ ಮತ್ತು 3,000 ರೂ. ಮೌಲ್ಯದ MDMA (methamphetamine) ಮಾದಕ ಪದಾರ್ಥಗಳೊಂದಿಗೆ ಇತರ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ನಾಯ್ಕ ಮತ್ತು ತಂಡದ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದರು.