ಗಾಂಧೀಜಿ : ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

Source: so news | Published on 12th November 2019, 12:30 AM | State News | Don't Miss |

 

ಮಂಗಳೂರು ;ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಸಾಧನೆಯ ಕುರಿತ 3 ದಿನಗಳ  ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವು ಬಂಟ್ವಾಳ ಬಿ.ಸಿ. ರೋಡ್ ಮಿನಿ ವಿಧಾನಸೌಧದಲ್ಲಿ ಪ್ರಾರಂಭಗೊಂಡಿತು
ಬಂಟ್ವಾಳ ತಹಶೀಲ್ದಾರ್  ರಶ್ಮಿ ಉದ್ಘಾಟನೆ ನೆರವೇರಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ, ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.  ಗಾಂಧೀಜಿಯವರ ಬದುಕಿನ ವಿವಿಧ ಮಜಲುಗಳನ್ನು ನೋಡುವ ಅವಕಾಶ ಈ ಛಾಯಾಚಿತ್ರ ಪ್ರದರ್ಶನ ಮೂಲಕ ಸಿಕ್ಕಿದೆ. ಆ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನೂ ಕಾಣಬಹುದಾಗಿದೆ ಎಂದು ಅವರು ಹೇಳಿದರು.
  ದ.ಕ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಸ್ವಾಗತಿಸಿ,  ಛಾಯಾಚಿತ್ರ ಪ್ರದರ್ಶನದ ಉದ್ದೇಶವನ್ನು ತಿಳಿಸಿದರು.
  ಬಂಟ್ವಾಳ ತಾಲೂಕು ಕಚೇರಿ ಒಳಾಂಗಣದಲ್ಲಿ ಆಯೋಜನೆಗೊಂಡಿರುವ ಪ್ರದರ್ಶನದಲ್ಲಿ ಗಾಂಧೀಜಿಯವರ ಹುಟ್ಟು ಮತ್ತು ಸಾವು ನಡುವಿನ ಅವಿಸ್ಮರಣೀಯ ಭಾವಚಿತ್ರಗಳೊಂದಿಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.   ಗಾಂಧೀಜಿ ನಡೆದು ಬಂದಿರುವ ಹಾದಿ, ಅವರ ಜೀವನದ ಪ್ರಮಖ ಘಟ್ಟಗಳು, ಕಸ್ತೂರ ಬಾ ಜೊತೆಗಿನ ದಿನಗಳು, ಅಗಾಖಾನ್ ಅರಮನೆ, ನೌಕಾಲಿಗೆ ಪ್ರಯಾಣ ಮಾಡಿದ ದಿನಗಳು, ಶಾಂತಿಯ ತೀರ್ಥಯಾತ್ರಿಕನಾಗಿ ಗುರುತಿಸಿಕೊಂಡ ಕ್ಷಣ, ಮಹಾನ್ ವ್ಯಕ್ತಿಗಳ ಭೇಟಿ, ಚಳುವಳಿಗಳ ಹುಟ್ಟು,  ಕುರಿತ ಮಾಹಿತಿಗಳು ಪ್ರದರ್ಶನದಲ್ಲಿ ಕಾಣಬಹುದು.
 ಉಪವಾಸ ಸತ್ಯಾಗೃಹದ ಸಂದರ್ಭದಲ್ಲಿನ ಕಸ್ತೂರ ಬಾ ಅವರ ನಿಧನ, ನೂಲುವ ಚರಕದೊಂದಿಗೆ ಗಾಂಧೀಜಿ,  ಗಾಂಧೀಜಿ ಅವರ ನಿಯತಕಾಲಿಕೆಗಳು, ನೆಹರು ಅವರೊಂದಿಗಿನ ದಿನಗಳು, ಗಾಂಧೀ ಕೈಗೊಂಡ ಕೊನೆಯ ಉಪವಾಸ, ವಿವಿಧ ಕಡೆಗಳ ಊರುಸ್‍ನಲ್ಲಿ ಪಾಲ್ಗೊಂಡ ಗಾಂಧಿ, ಕರ್ನಾಟಕದಲ್ಲಿ ಭೇಟಿ ನೀಡಿದ ದಿನಾಂಕ ಮತ್ತು ಸ್ಥಳಗಳ ಪರಿಚಯಗಳು, ತೊಂದರೆಗೊಳಗಾದ ಬಿಹಾರ ಮತ್ತು ಇತರ ಸ್ಥಳಗಳಿಗೆ ಬೇಟಿಯಾದ ದಿನಗಳು, ಪ್ರಾಣಿಗಳ ಮೇಲಿನ ಪ್ರೀತಿಯ ಕುರಿತ ಭಾವಚಿತ್ರಗಳು ಹೀಗೆ ಹಲವಾರು  ಚಿತ್ರಶೀರ್ಷಿಕೆಗಳೊಂದಿಗೆ ಗಾಂಧೀಜಿಯವರ ಜೀವನ ಸಾಧನೆಯನ್ನು ಪ್ರದರ್ಶನದಲ್ಲಿ ತೋರಲಾಗಿದೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...