ಕಾರವಾರ: FRUITS ತಂತ್ರಾಂಶ : ರೈತರಿಗೆ ಗುರುತಿನ ಸಂಖ್ಯೆ ಕಡ್ಡಾಯ

Source: S.O. News service | By JD Bhatkali | Published on 4th March 2021, 8:03 PM | Coastal News |

ಕಾರವಾರ: ವಿವಿಧ ಇಲಾಖೆಯಲ್ಲಿನ ಹಲವು ಯೋಜನೆಯ ಸವಲತ್ತು ಪಡೆಯಲು ರೈತರು FRUITS ತಂತ್ರಾಂಶದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಗುರುತಿನ ಸಂಖ್ಯೆ(FID) ಹೊಂದುವುದು ಕಡ್ಡಾಯವಾಗಿದೆ ಎಂದು ಕಾರವಾರ ತಾಲೂಕಿನ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಂಟಿ ಖಾತೆದಾರರೂ ಸೇರಿದಂತೆ ತಾಲೂಕಿನ ಎಲ್ಲಾ ರೈತರು ಆಧಾರ ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ನ ನಕಲು, ಜಾತಿ ಪ್ರಮಾಣ ಪತ್ರ, ಎಲ್ಲಾ ಪಹಣಿ/ಸರ್ವೇ ನಂಬರ್‍ಗಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಅಥವಾ ತೋಟಗಾರಿಕೆ ಇಲಾಖೆಗೆ ನೀಡಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವರು ವಿನಂತಿಸಿದ್ದಾರೆ.

Read These Next

ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ...

ಭಟ್ಕಳದಲ್ಲಿ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, ...