ಭಟ್ಕಳ ರೋಟರಿ ಕ್ಲಬ್ ನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ

Source: sonews | By Staff Correspondent | Published on 27th March 2019, 5:32 PM | Coastal News |

ಭಟ್ಕಳ: ರೋಟರಿ ಕ್ಲಬ್ ಹಾಗೂ ಬ್ಯಾಡ್ಮಿಂಟನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾ.29ರಿಂದ ಮೂರು ದಿನಗಳ ಕಾಲ ಸ್ಮಾಶ್ ಹಾಗೂ ಡ್ರಿಬ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು  ರೋಟರಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಭಟ್ಕಳ ಬ್ಯಾಡ್ಮಿಂಟನ್ ಅಸೋಸಿಯೇಶನ್  ಅಧ್ಯಕ್ಷ ಶ್ರಿನೀವಾಸ ಪಡಿಯಾರ್ ತಿಳಿಸಿದರು.

ಮಂಗಳವಾರ ಇಲ್ಲಿನ ಹೋಟೆಲ್ ರಾಯಲ್ ಓಕ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಥಮಬಾರಿ ಭಟ್ಕಳದಲ್ಲಿ ಇಂತಹ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು ಇದರಲ್ಲಿ ಸ್ಥಳೀಯ ಆಟಗಾರರು ಹೊರತು ಪಡಿಸಿ ಉಡುಪಿ, ಮಂಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಮಾ.29 ರಂದು ಮಧ್ಯಾಹ್ನ 2ಗಂಟೆಗೆ ಸ್ಥಳಿಯ ಆಟಗಾರರಿಗೆ ಮೊದಲ ಆದ್ಯತೆಯಲ್ಲಿ ಪಂದ್ಯಗಳು ನಡೆಯಲಿದ್ದು, ಮಾ.30,31 ರಂದು ಬೆಳಿಗ್ಗೆ 9ಗಂಟೆಗೆ 45ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟರಿಗಾಗಿ ಪಂದ್ಯಗಳು ನಡೆಲಿವೆ ಎಂದು ತಿಳಿಸಿದರು. 

ಕಳೆದ 25ವರ್ಷಗಳ ಹಿಂದೆ ಭಟ್ಕಳದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ನ್ನು ನಿರ್ಮಿಸಿದ್ದು ಇದರಿಂದ ಹಲವಾರು ಮಂದಿ ಆಟಗಾರರು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಯುನಿವರ್ಸಿಟಿ ಬ್ಲೂ ಆಗಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಗುಣಮಟ್ಟದ ಕೋರ್ಟನ್ನಾಗಿ ಪರಿವರ್ತನೆಗೊಳಿಸಿದ್ದು ಇಲ್ಲಿ ರಾಜ್ಯ ಹಾಗೂ ಅಂತರ ರಾಜ್ಯಮಟ್ಟದ ಪಂದ್ಯಾವಳಿಗಳನ್ನು ನಡೆಸಲಾಗಿದೆ  ಈಗ ರಸ್ತೆ ಅಗಲೀಕರಣದಿಂದಾಗಿ ಈ ಬ್ಯಾಡ್ಮಿಂಟನ್ ಕೋರ್ಟ್ ನೆಲಸಮಗೊಳ್ಳಲಿದ್ದು ಮುಂದೆ ಇಂತಹ ಗುಣಮಟ್ಟದ ಕೋರ್ಟ್ ನಿರ್ಮಾಣಕ್ಕೆ ಸಾರ್ವಜನಿಕರು,ದಾನಿಗಳು ಸಹಕರಿಸಬೇಕೆಂದು ಅವರು ವಿನಂತಿಸಿಕೊಂಡರು. 

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಸುರೇಶ ಅಂಬಿಗ, ಇಷ್ತಿಯಾಖ್ ರುಕ್ನುದ್ದೀನ್, ವಂಕಟರಮಣ ಮೊಗೇರ್, ರೋಟರಿಯನ್ ನಝೀರ್ ಕಾಶಿಮಜಿ ಮತ್ತಿತರರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...