ಮನೆಗಳಲ್ಲೇ ಪ್ರಾರ್ಥನೆ; ಮುಂದುವರಿದ ಡ್ರೋಣ್ ಕಾರ್ಯಾಚರಣೆ ಮುಸ್ಲಿಮರ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿ

Source: S O News Service | By Office Staff | Published on 3rd April 2020, 11:26 PM | Coastal News | Don't Miss |

ಭಟ್ಕಳ: ತಾಲೂಕಿನಲ್ಲಿ ಕೊರೋನಾ ವೈರಸ್ ಅನ್ನು ಕಡಿವಾಣಕ್ಕೆ ತರಲು ತಾಲೂಕಾಡಳಿತ ಸಾಕಷ್ಟು ರೀತಿಯ ಪ್ರಯತ್ನ ನಡೆಸುತ್ತಿದ್ದು, ಮುಸ್ಲಿಂ ಸಮುದಾಯದವರು ಶುಕ್ರವಾರದ ಪ್ರಾರ್ಥನೆಯನ್ನು ಅವರ ಮನೆಗಳಲ್ಲಿ ನಡೆಸುವಂತೆ ಮನವೊಲಿಸುವಲ್ಲಿ ಪೆÇಲೀಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಿದೆ.
ಪೆÇಲೀಸರು ಗಸ್ತು ತಿರುಗುವ ಸೂಚನೆ ಸಿಕ್ಕ ಕೂಡಲೇ ಓಡಿ ಮರೆಯಾಗುತ್ತಿದ್ದ ಜನರು ಅತ್ತ ಅವರು ವಾಪಸ್ಸು ತೆರಳುತ್ತಿರುವಂತೆ ಮತ್ತೆ ತಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸುವ ಕುರಿತು ಎಸ್‍ಪಿ ಶಿವಪ್ರಕಾಶ ದೇವರಾಜು ಸೂಚನೆ ನೀಡಿ ಅದನ್ನು ಕಾರ್ಯಗತಗೊಳಿಸಿದ್ದರು.
ಬುಧವಾರದಿಂದ ಭಟ್ಕಳದ ಎಲ್ಲೆಡೆ ಡ್ರೋಣ ಮೂಲಕ ಜನರ ಓಡಾಟದ ನಿಗಾ ವಹಿಸಲು ಡಿವೈಎಸ್‍ಪಿ ಗೌತಮ್ ಕೆ.ಸಿ. ನೇತೃತ್ವದಲ್ಲಿ ಕಾರ್ಯಚರಣೆ ಆರಂಭವಾಗಿದ್ದು, ಅದರಂತೆ ಶುಕ್ರವಾರವೂ ಮುಂದುವರೆದಿದೆ. ಇಲ್ಲಿನ ಪಟ್ಟಣದ ಜಾಮೀಯಾ ಸ್ಟ್ರೀಟ್ ಬಳಿ ಚಿನ್ನದ ಪಳ್ಳಿ ಎದುರು ಪೆÇಲೀಸ ಸರ್ಪಗಾವಲಿನಲ್ಲಿ ಡ್ರೋಣ್ ಕಾರ್ಯಾಚರಣೆ ನಡೆಸಲಾಯಿತು.
ಕಳೆದ ಶುಕ್ರವಾರವೂ ಕೆಲವು ಮಸೀದಿಗಳಲ್ಲಿ ಗುಟ್ಟಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇಲಾಖೆಗೆ ದೊರಕಿದ್ದ ಹಿನ್ನೆಲೆ ಜನರು ಗುಂಪು ಸೇರಬಾರದೆಂಬ ಉದ್ದೇಶದೊಂದಿಗೆ ಸಮುದಾಯದಲ್ಲಿ ಕೊರೋನಾ ಪಸರಿಸಬಾರದೆಂದು ಶುಕ್ರವಾರ ಬೆಳಿಗ್ಗೆಯಿಂದಲೇ ಪೆÇಲೀಸರು ಕಾರ್ಯಾಚರಣೆಗೆ ಇಳಿದಿದ್ದರು.
ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ಡ್ರೋಣ್ ಹಾರಾಟ ನಡೆಸಿ ಜನರ ಚಲನವಲನಗಳ ಮೇಲೆ ಕಣ್ಣಿದ್ದರು. ಇದರಿಂದ ಶುಕ್ರವಾರ ಪರಿಸ್ಥಿತಿ ಸಂಪೂರ್ಣ ಪೆÇಲೀಸರ ಹತೋಟಿಗೆ ಬಂದಿದ್ದು ಜನರು ಮನೆಯಿಂದ ಹೊರಬರುವ ಸಾಹಸಕ್ಕೆ ಕೈ ಹಾಕಲಿಲ್ಲ. ಸದ್ಯ ಭಟ್ಕಳದ ಪರಿಸ್ಥಿತಿ ಒಂದು ಹಂತಕ್ಕೆ ಹತೋಟಿಯಲ್ಲಿ ಬಂದಿದ್ದು ಮುಂದಿನ ಕೆಲವು ದಿನ ಜನರು ಇದೆ ತರನಾದ ಸಹಕಾರ ನೀಡಬೇಕು ಎಂದು ಡಿವೈಎಸ್‍ಪಿ ಗೌತಮ್ ಕೆ.ಸಿ ವಿನಂತಿದ್ದಾರೆ.  
ಭಟ್ಕಳ ಕೊರೋನಾ ಪ್ರಕರಣದ ಹಾಟ್‍ಸ್ಪಾಟ್ ಆಗಿದ್ದು, ಚಿಕ್ಕ ಪಟ್ಟಣವೊಂದರಲ್ಲಿ 8 ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೆ ದೇಶಾದ್ಯಂತ ಗುರುತಿಸಲ್ಪಟ್ಟಿದೆ. ಜಿಲ್ಲಾಡÀಳಿತದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ, ಅಧಿಕಾರಿಗಳ ಸೂಕ್ತ ಕಾರ್ಯದಿಂದ ಒಂದು ಹತೋಟಿಗೆ ಬಂದಿದೆ. ಒಂದು ವೇಳೆ ಭಟ್ಕಳದಲ್ಲಿ 8 ಪ್ರಕರಣ ಪತ್ತೆಯಾಗದಿದಲ್ಲಿ ಉತ್ತರ ಕನ್ನಡ ಜಿಲ್ಲೆ ಯಾವುದೇ ಪ್ರಕರಣವಿಲ್ಲದೇ ಜನರು ನಿರರ್ಗಳವಾಗಿರುತ್ತಿದ್ದರು. ***
ಬಾಕ್ಸ್...
ಪೆÇಲೀಸ್ ಹತೋಟಿ
ವಿದೇಶದಿಂದ ಬಂದವರಲ್ಲಿ ಹೆಚ್ಚಿನ ಮಂದಿ ಭಟ್ಕಳದಲ್ಲಿದ್ದಾರೆಂಬ ಮಾಹಿತಿಯಿಂದ ಜಿಲ್ಲಾಡಳಿತ ಕಂಗಾಲಾಗಿತ್ತು. ವಿದೇಶದಿಂದ ಬಂದ ಭಟ್ಕಳಿಗರಿಗೆ ಹೋಮ್ ಕ್ವಾರಂಟೈನ್ ವಿಧಿಸಿದ್ದರೂ ಅಲ್ಲಲ್ಲಿ ತಿರುಗಾಡುತ್ತಿರುವುದು ಜಿಲ್ಲೆ ಹಾಗೂ ತಾಲೂಕಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. 
ಇಡೀ ಜಿಲ್ಲೆಯಲ್ಲಿ ಭಟ್ಕಳವನ್ನು ಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸಿದ ಜಿಲ್ಲಾಡಳಿತ ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆಯಾಗಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸುವ ಮೂಲಕ ಜನರ ಓಡಾಟಕ್ಕೆ ಕಡಿವಾಣ ಹಾಕಲು ಪೆÇಲೀಸ್ ಕಣ್ಗಾವಲಿನಲ್ಲಿ ಭಟ್ಕಳ ನಿಗಾ ವಹಿಸಲಾಯಿತು. ಅಂದಿನಿಂದ ಇಂದಿನ ತನಕ ಡಿವೈಎಸ್ಪಿ ಗೌತಮ್ ಕೆ.ಸಿ. ಅವರ ನೇತೃತ್ವದಲ್ಲಿ ಸಂಪೂರ್ಣ ಭಟ್ಕಳ ತಕ್ಕ ಮಟ್ಟಿಗೆ ಹತೋಟಿಗೆ ಬಂದಿದ್ದು, ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಭಟ್ಕಳದ ಪೆÇಲೀಸ್ ಇಲಾಖೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...