ಭಟ್ಕಳ ಮೂಲದ ಲಚ್ಮಯ್ಯ ಸಿದ್ದನಮನೆ ಅವರಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಕೊಡುಗೆ.

Source: SO News | By Laxmi Tanaya | Published on 9th October 2021, 10:06 PM | Coastal News | Don't Miss |

ಭಟ್ಕಳ : ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ  ಕಂಗೆಟ್ಟಿರುವ   ತನ್ನ ಹುಟ್ಟೂರಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಸಮವಸ್ತ್ರ ವಿತರಿಸಲು ಆರ್ಥಿಕ ಸಹಾಯ ನೀಡಿದ  ಲಚ್ಚಯ್ಯ ಕೆ ಸಿದ್ಧನಮನೆಯವರ ಕಾರ್ಯ ಶ್ಲಾಘನೀಯವಾದುದು ಎಂದು ಭಟ್ಕಳ ಎಜ್ಯೂಕೇಶನ್ ಟ್ರಸ್ಟ್ ನ ಟ್ರಸ್ಟ್ ಮ್ಯಾನೇಜರ್  ರಾಜೇಶ ನಾಯಕರವರು ನುಡಿದರು.

ದಿ ನ್ಯೂ ಇಂಗ್ಲೀಷ್ ಶಾಲೆಯ 180 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ, ಅವರು ಮಾತನಾಡಿದರು.

ಪ್ರಸ್ತುತ ಆಫ್ರಿಕಾದ ಉಗಾಂಡದಲ್ಲಿ ಉದ್ಯಮಿಯಾಗಿರುವ  ಲಚ್ಚಯ್ಯ ಕೆ. ಸಿದ್ಧನಮನೆಯವರ ಹೃದಯ ವೈಶಾಲ್ಯತೆಯನ್ನು ಭಾವೀ ಪ್ರಜೆಗಳಾದ ನೀವು ಹೊಂದಬೇಕು, ಅದಕ್ಕಾಗಿ ಆಸಕ್ತಿ ಮತ್ತು ಶಿಸ್ತಿನಿಂದ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಸೂಡೆಂಟ್ಸ್  ಕನ್ಸೂಮರ್ಸ್ ಕೋ-ಆಪರೇಟಿವ್ ಸೊಸೈಟಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟಬುಕ್ ವಿತರಿಸಲಾಯಿತು.

ಮುಖ್ಯೋಪಾಧ್ಯಾಯ ಗಣಪತಿ ಶಿರೂರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕರಾದ ಶಂಭು ಗೌಡ ವಂದಿಸಿದರು.  ಪಾಂಡುರಂಗ ಮೊಗೇರ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...