ಭಟ್ಕಳದ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು  ಆಮ್ಲಜನಕ ಸ್ಯಾಚುರೇಶನ್ ಕ್ಯಾಂಪ್

Source: sonews | By Staff Correspondent | Published on 21st July 2020, 6:52 PM | Coastal News | Special Report | Don't Miss |

ಭಟ್ಕಳ: ವೆಲ್ಫೇರ್ ಆಸ್ಪತ್ರೆಯು  ಇಂಡಿಯನ್ ನವಾತ್ ಫೋರಂ ನ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ತಾಪಮಾನ ತಪಾಸಣೆ ಮತ್ತು ಆಮ್ಲಜನ (ಆಕ್ಸಿಜನ್) ಸ್ಯಾಚುರೇಶನ್ ಕ್ಯಾಂಪ್ ಆಯೋಜಿಸಿದೆ. ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ ಸಾರ್ವಜನಿಕರಿಗೆ ಈ ಸೇವೆ ಲಭ್ಯವಿದೆ ಎಂದು ವೆಲ್ಫೇರ್ ಆಸ್ಪತ್ರೆಯ ಸಿಇಒ ಗುಫ್ರಾನ್ ಲಂಕಾ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂಡಿಯನ್ ನವಾಯತ್ ಫೋರಂ ಸಹಯೋಗದೊಂದಿಗೆ ವೆಲ್ಫೇರ್ ಆಸ್ಪತ್ರೆಯಲ್ಲಿ  ವೈಕ್ತಿಯ ದೇಹದ ತಾಪಮಾನ ಮತ್ತು ಆಮ್ಲಜನಕವನ್ನು ತಪಾಸಣೆ ಮಾಡಲಾಗುತ್ತದೆ. ಆಮ್ಲಜನಕದ ಪ್ರಮಾಣ ಕಡಿಯಾದಲ್ಲಿ ವೈದ್ಯರಿಂದ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದು. ಕೊರೋನಾ ಕಾರಣ ಸಾರ್ವಜನಿಕರು ವಿನಾಕಾರಣ ಭಯವನ್ನು ಪಡುತ್ತಿದ್ದಾರೆ. ದೇಹದ ತಾಪಮಾನ ಮತ್ತು ಆಮ್ಲಜನಕದ ಪ್ರಮಾಣವನ್ನು ಸರಿಯಾಗಿದ್ದಲ್ಲಿ ಯಾವುದೇ ಭಯಬೇಡ. ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಆಮ್ಲಜನಕದ ಪ್ರಮಾಣ 95 ಇರಬೇಕಾಗುತ್ತದೆ. ಆಕ್ಸಿಮೆಟ್ರಿ ಮೂಲಕ ದೇಹದ ಆಮ್ಲಜನಕದ ಶುದ್ಧತೆಯನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಚಿಕಿತ್ಸೆಗೆ ಸಲಹೆ ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೊರೋನಾ ಕುರಿತಂತೆ ಯಾವುದೇ ಭಯ ಮತ್ತು ಆತಂಕ ಪಡದೆ ಭಯಮುಕ್ತ ವಾತವರಣದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ದೇಹದ ಆಮ್ಲಜನಕ ಪ್ರಮಾಣ ಹೇಗೆ ತಿಳಿಯುತ್ತದೆ?: ಪಲ್ಸ್ ಆಕ್ಸಿಮೆಟ್ರಿ ಎನ್ನುವುದು ವ್ಯಕ್ತಿಯ ದೇಹದ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಅಥವಾ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅಳೆಯುವ ಆಕ್ರಮಣಕಾರಿಯಲ್ಲದ ಮತ್ತು ನೋವುರಹಿತ ಪರೀಕ್ಷೆಯಾಗಿದೆ. ಕಾಲುಗಳು ಮತ್ತು ತೋಳುಗಳನ್ನು ಒಳಗೊಂಡಂತೆ ಹೃದಯದಿಂದ ದೂರದವರೆಗೆ ಆಮ್ಲಜನಕವನ್ನು ಎಷ್ಟು ಪರಿಣಾಮಕಾರಿಯಾಗಿ ಸಾಗಿಸಲಾಗುತ್ತಿದೆ ಎಂಬುದರಲ್ಲಿನ ಸಣ್ಣ ಬದಲಾವಣೆಗಳನ್ನು ಸಹ ಇದು ವೇಗವಾಗಿ ಪತ್ತೆ ಮಾಡುತ್ತದೆ.

ನಾಡಿ ಆಕ್ಸಿಮೀಟರ್ ಒಂದು ಸಣ್ಣ, ಕ್ಲಿಪ್ ತರಹದ ಸಾಧನವಾಗಿದ್ದು ಅದು ಕಾಲ್ಬೆರಳುಗಳು ಅಥವಾ ಇಯರ್‌ಲೋಬ್‌ನಂತಹ ದೇಹದ ಭಾಗಕ್ಕೆ ಅಂಟಿಕೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ಬೆರಳಿಗೆ ಹಾಕಲಾಗುತ್ತದೆ, ಮತ್ತು ಇದನ್ನು ತುರ್ತು ಕೋಣೆಗಳು ಅಥವಾ ಆಸ್ಪತ್ರೆಗಳಂತಹ ನಿರ್ಣಾಯಕ ಆರೈಕೆ ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಶ್ವಾಸಕೋಶಶಾಸ್ತ್ರಜ್ಞರು ಇದನ್ನು ಬಳಸುತ್ತಾರೆ.

ಹೃದಯವು ದೇಹದ ಮೂಲಕ ಆಮ್ಲಜನಕವನ್ನು ಎಷ್ಟು ಚೆನ್ನಾಗಿ ಪಂಪ್ ಮಾಡುತ್ತಿದೆ ಎಂಬುದನ್ನು ಪರೀಕ್ಷಿಸುವುದು ನಾಡಿ ಆಕ್ಸಿಮೆಟ್ರಿಯ ಉದ್ದೇಶ.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...