ಮಾದರಿ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ

Source: so news | By Manju Naik | Published on 19th May 2019, 6:30 PM | Coastal News | Don't Miss |

ಮುಂಡಗೋಡ : 9 ರಿಂದ 16 ವರ್ಷ ದ ಒಳಗಿನ ಮಕ್ಕಳಿಗೆ ಉಚಿತ ಬೇಸಿಗೆ ಕಾರ್ಯಕ್ರಮನ್ನು ಜಿಲ್ಲಾಬಾಲ ಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಮುಂಡಗೋಡಹಾಗೂ ಅರುಣೋದಯ ಸಂಸ್ಥೆ (ರಿ)ಶಿರಸಿಇವರ ಸಂಯುಕ್ತಆಶ್ರಯದಲ್ಲಿ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕ ಅಧ್ಯಕ್ಷರಾದ  ಸುಭಾಸ ಡೋರಿ ಉದ್ಘಾಟಿಸಿ ಮಾತನಾಡಿ ಯೋಗ, ಕರಕುಶಲ ಕಲೆ ಮುಂತಾದಪಠ್ಯೇತರ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದೂ ಸಹ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.ಮಕ್ಕಳ ಬೌದ್ಧಿಕ ಬೆಳವಣಿಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.  ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಬೇಸಿಗೆ ರಜೆಯ ಬಿಡುವು  ದೊರೆತ ತಕ್ಷಣ ಮಕ್ಕಳು ಸಂಬಂಧಿಗಳ ಮನೆಗೆ ತೆರಳುವುದು, ಪ್ರವಾಸ ಕೈಗೊಳ್ಳುವುದು ಸಹಜ. ಆದರೆ ಆ ರೀತಿ ಮಾಡುವ ಬದಲುಇಂತಹ ಶಿಬಿರಗಳಲ್ಲಿ ಸೇರುವುದರಿಂದಮಕ್ಕಳಿಗೆ ಬದಲಾವಣೆಯಜೊತೆಗೆ ವಿಶೇಷ ಚೈತನ್ಯ ಸಿಕ್ಕಂತಾಗುತ್ತದೆ ಎಂದುಅವರು ಹೇಳಿದರು.
ಯಲ್ಲಾಪುರಶಿಶು ಅಭಿವೃದ್ಧಿಇಲಾಖೆಯ ಮೇಲ್ವಿಚಾರಕಿ  ಲಕ್ಷ್ಮೀ ಭಟ್‍ಇವರು ಮಾತನಾಡಿ ಮಕ್ಕಳು ಇಂತಹ ಶಿಬಿರಗಳಲ್ಲಿನ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳುವುದರಿಂದ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು  ಸಾಧ್ಯ  ಅಲ್ಲದೇ  ಹೊಸ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ರಾಜಪ್ಪ,  ಸುಲೋಚನಾ,  ಮುಂಡಗೋಡ ಶಿಶು ಅಭಿವೃದ್ಧಿಇಲಾಖೆಯ ಮೇಲ್ವಿಚಾರಕಿ ರೂಪಾಅಂಗಡಿ, ವಕೀಲೆ ಮಮತಾ ಮಾಸ್ಕೇರಿ,  ಮುಖ್ಯೋಪಾಧ್ಯಾಯರಾದ  ವಿನೋದ ಜಿ. ನಾಯ್ಕ ಹಾಗೂ ಸಹ ಶಿಕ್ಷಕಿ ಮಾಧುರಿ, ಉಪಸ್ಥಿತರಿದ್ದರು.
ಅರುಣೋದಯ ಸಂಸ್ಥೆಯ ಕಾರ್ಯ ನಿರ್ವಾಹಕ ರಾಜು ನಾಯ್ಕ ಕಾರ್ಯಕ್ರಮವನ್ನು ನಿರೂಪಿದರು ಇವರು ಸಂಯೋಜಕ  ಚಂದ್ರಕಾಂತ ಪವಾರಇವರುವಂದನಾರ್ಪಣೆ ಮಾಡಿದರು.

 

Read These Next

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...