ಭಟ್ಕಳ: ವೆಲ್ಫೇರ್ ಆಸ್ಪತ್ರೆಯಲ್ಲಿ ಉಚಿತ ಬಂಜೆತನ ಆರೋಗ್ಯ ಶಿಬಿರ

Source: sonews | By Staff Correspondent | Published on 25th August 2019, 11:29 PM | Coastal News | Don't Miss |

ಭಟ್ಕಳ: ಮಂಗಳೂರಿನ ರೆಪ್ರೋ ಹೆಲ್ತ್ ಕೇರ್ ಘಟಕವಾಗಿರುವ ಎಆರ್‍ಎಂಸಿ ಹಾಗೂ ಭಟ್ಕಳದ ವೆಲ್ಫೇರ್ ಆಸ್ಪತ್ರೆಯ ಜಂಟಿಯಾಗಿ ಆಯೋಜಿಸಿದ್ದ ಉಚಿತ ಬಂಜೆತನ ಆರೋಗ್ಯ ಶಿಬಿರ ಭಾನುವಾರ ಯಶಸ್ವಿಯಾಗಿ ಜರಗಿತು. 

ತಮ್ಮ ಸ್ವಂತ ಮಗುವನ್ನು ಹೊಂದಲು ಸಮಸ್ಯೆಯನ್ನು ಎದುರಿಸುತ್ತಿರುವ ನೂರಕ್ಕೂ ಅಧಿಕ ದಂಪತಿಗಳು ಈ ಶಿಬಿರದಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಂಡರು. 

ಎಆರ್‍ಎಂಸಿ ಐವಿಎಫ್(ಪ್ರಣಾಳೀಯ ಫಲೀಕರಣ) ವು ಬಂಜೆತನ ಕ್ಷೇತ್ರದಲ್ಲಿ ಇತ್ತಿಚಿಗಿನ ತಂತ್ರಜ್ಞಾನವಾಗಿದ್ದು ಇದು ಸಮಸ್ಯೆಯ ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಖಾತ್ರಿಗೊಳಿಸುತ್ತದೆ. ಈ ತಂಡದ ಪ್ರಮುಖ ಬಂಜೆತನ ತಜ್ಞರಾದ ಡಾ.ಗೌರವ್ ಗುಜರಾತಿ, ಡಾ.ಸುಸಾನ್ ಮಣಿ ಮತ್ತು ಇವರ ತಂಡವು ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 

ಮಕ್ಕಳಾಗದೆ ಚಿಂತೆಯಲ್ಲಿರುವವರಿಗೆ ಈ ತಂತ್ರಜ್ಞಾನ ಹಾಗೂ ಇಂತಹ ಶಿಬಿರಗಳು ಉತ್ತಮ ಪ್ರಯೋಜವಾಗಲಿದೆ ಜನರಿಗೆ ಸೇವೆ ಒದಗಿಸುವುದೇ ನಮ್ಮ ಪ್ರಯತ್ನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. 
 

Read These Next