ಕೋಟೆ ಶ್ರೀ ವೀರಾಂಜನೇಯ ಕ್ಷೇತ್ರದ ಹೊಗೆವಡ್ಡಿ ನವಚೇತನ ಚಾರಿಟೇಬಲ್ ಟ್ರಸ್ಟ್ ನಿಂದ ಉಚಿತ ಪುಸ್ತಕ ವಿತರಣೆ

Source: sonews | By Staff Correspondent | Published on 13th September 2019, 11:51 PM | Coastal News |

ಭಟ್ಕಳ: ಕೋಟೆ ಶ್ರೀ ವೀರಾಂಜನೇಯ ಕ್ಷೇತ್ರದ ಹೊಗೆವಡ್ಡಿ ನವಚೇತನ ಚಾರಿಟೇಬಲ್ ಟ್ರಸ್ಟ ರಾಮನಗರ, ಟೊಯೊಡ್ ಗೋಸ್ಕರ್ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಿಡದಿ, ಮಾರುತಿ ಮೆಡಿಕಲ್ಸ್ ಬೆಂಗಳೂರು ಹಾಗೂ ಅಮೃತ್ ವಿಕಲಚೇತನ ಟ್ರಸ್ಟ್ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ "ವಿದ್ಯಾರ್ಥಿ ಮಿತ್ರ" ಎನ್ನುವ ಉದ್ಘೋಷಣೆದೊಂದಿಗೆ  ಸಾಗರ ತಾಲ್ಲೂಕಿನ ಸರ್ಕಾರಿ ಶಾಲೆಗೆ ಅಂದಾಜು 2500 ಹಾಗೂ ಭಟ್ಕಳ ತಾಲ್ಲೂಕಿನಲ್ಲಿ ಅಂದಾಜು 3500 ವಿದ್ಯಾರ್ಥಿಗಳಿಗೆ ಉಚಿತ ಬರಹ ಪುಸ್ತಕಗಳನ್ನು ವಿತರಿಸಲಾಯಿತು.

ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಜುಲೈ ತಿಂಗಳಲ್ಲಿ ಪ್ರಾರಂಭಿಸಿ ಇಂದು ಮುಟ್ಟಳ್ಳಿ, ಮೂಡಭಟ್ಕಳ ಇತರೆ ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ವಿತರಿಸಿದರು. ಕರ್ನಾಟಕ ರಾಜ್ಯಾದ್ಯಂತ ಒಟ್ಟು 11 ಜಿಲ್ಲೆಗಳಲ್ಲಿ 1,75,000 ವಿದ್ಯಾರ್ಥಿಗಳಿಗೆ 7 ಲಕ್ಷ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಅನಂತ ನಾಯ್ಕ ಉಗ್ರಾಣಿಮನೆ ಧರ್ಮದರ್ಶಿಗಳು ಕ್ಷೇತ್ರ ಹೊಗೆವಡ್ಡಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡಿ ದೇಶದಲ್ಲಿ ಕೇವವು ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗಳಿಗೆ ಹೋದ ಉದಾರಣೆಗಳು ಹೆಚ್ಚಾಗಿದ್ದು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆಯುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು. ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗಳಿಗೆ ಹೋದ ನಂತರ ನಮ್ಮನ್ನು ಗುರುತಿಸಿ ಅದೇ ಶಾಲೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಅದು ನಮ್ಮ ಸೌಭಾಗ್ಯ ವಾಗಿರುತ್ತದೆ. ನಾವು ಎಷ್ಟೇ ದೊಡ್ಡ ಹುದ್ದೆಗಳಿಗೆ ಹೋದರೆ ನಮ್ಮ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿಬೇಕು. ಸಮಾಜವನ್ನು ಒಬ್ಬ ವ್ಯಕ್ತಿಯಿಂದ ಮುಂದೆ ನಡೆಸಲು ಸಾಧ್ಯವಿಲ್ಲ ಹಾಗಾಗಿ ನಾವು ಎಲ್ಲರೂ ಒಟ್ಟಾಗಿ ಸಮಾಜವನ್ನು ಮುಂದೆ ನಡೆಸಬೇಕು. ಹಾಗಾಗಿ ನಾವು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 4 ಉಚಿತ ಪುಸ್ತಕ ನಿಮಗಾಗಿ ನೀಡುತ್ತಿದ್ದು ಇದನ್ನು ಸರಿಯಾಗಿ ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟಕೆ ಹೋದಾಗ ನೀವು ಕಲಿತಿರುವ ಶಾಲೆಗೆ ಇದಕ್ಕೂ ಹೆಚ್ಚಿನ ಪುಸ್ತಕ ವಿತರಿಸುವಂತಾಗಲಿ ಎಂದು ಹೇಳಿದರು.

ಸಂದರ್ಭದಲ್ಲಿ ಮಂಜುನಾಥ ಅಧ್ಯಕ್ಷರು ನವಚೇತನ ರಾಮನಗರ, ರಮೇಶ ರಾಮನಗರ, ಮಂಜು ಭಟ್ಕಳ ನೀಲಾವರ ಪ್ಯಾಲೇಸ್, ಸೋಮಪ್ಪ ಅಧ್ಯಕ್ಷರು ಭಟ್ಕಳ ಘಟಕ ಹೊಗೆವಡ್ಡಿ ಕ್ಷೇತ್ರ, ಕಿಶೋರ್ ಭಟ್ಕಳ, ಸಾತ್ವಿಕ ಗೌಡ

ಬೆಂಗಳೂರು , ಹಾಗೂ ಮುಟ್ಟಳ್ಳಿ,  ಮೂಡಭಟ್ಕಳ ಸ್ಥಳೀಯರಾದ  ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ,  ವೆಂಕಟೇಶ ನಾಯ್ಕ,  ಶಂಕರ ನಾಯ್ಕ, ಗಣಪತಿ ನಾಯ್ಕ,  ಹಾಗೂ ಶಾಲಾ ಮುಖ್ಯ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕಿಯರು ಮತ್ತು ಶಾಲೆ ಎಸ್.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...