ರ್ಯಾಗಿಂಗ್ ಮತ್ತು ಉಪನ್ಯಾಸಕರಿಗೆ ಬೆದರಿಕೆ ಪ್ರಕರಣದಲ್ಲಿ‌ ನಾಲ್ವರು ವಿದ್ಯಾರ್ಥಿಗಳ ಬಂಧನ.

Source: SO News | By Laxmi Tanaya | Published on 5th March 2021, 6:18 PM | Coastal News |

ಮಂಗಳೂರು : ವಿದ್ಯಾರ್ಥಿಯ ರ್ಯಾಗಿಂಗ್ ಮತ್ತು ಕಾಲೇಜು ಉಪನ್ಯಾಸಕರಿಗೆ ಹಲ್ಲೆಗೈದ ಆರೋಪದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ  . 

ಪೋಲಿಸ್ ಆಯುಕ್ತ ಶಶಿಕುಮಾರ್ ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ಕ ಶ್ರೀನಿವಾಸ್ ಕಾಲೇಜಿನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಅದೇ ಕಾಲೇಜಿನ ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮೊಹಮ್ಮದ್ ಬಾಝಿಲ್ ,  ಕೆಯು ಶಮೀಲ್ , ಸಂಭ್ರಮ ಆಳ್ವಾ  , ಅಶ್ವಿನ್ ಜಾನ್ಸನ್ ಎಂಬವರು ರ್ಯಾಗಿಂಗ್ ನಡೆಸುತ್ತಿದ್ದರು.

 ಈ ಬಗ್ಗೆ ನೊಂದ ವಿದ್ಯಾರ್ಥಿನಿ ನೀಡಿದ ದೂರಿನಂತೆ ಕಾಲೇಜಿನ ಡೀನ್ ಆರೋಪಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದರು. ಈ ಮಧ್ಯೆ ಆರೋಪಿತ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರೊಬ್ಬರಿಗೆ ಹಲ್ಲೆಗೈದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿ ಮತ್ತು ಉಪನ್ಯಾಸಕ ನೀಡಿದ ಪ್ರತ್ಯೇಕ ದೂರುಗಳನ್ನು ಪೊಲೀಸರು ದಾಖಲಿಸಿದ್ದಾರೆ.

 ಬಂಧಿತ ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

Read These Next

ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು  ಎಪ್ರಿಲ್ 17 ರಂದು ಸಂಜೆ ಪಿಲಿಕುಳ ಪ್ರಾದೇಶಿಕ ...

ಭಟ್ಕಳದಲ್ಲಿ ಉದ್ಯೋಗ ಸಂದರ್ಶನ

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಸಂದರ್ಶನವನ್ನು ಹಮ್ಮಿಕೊಳ್ಳುತ್ತಿದ್ದು, ...