ಭಟ್ಕಳ ಕಾಲೇಜು ಕಟ್ಟಡಕ್ಕೆ ಶಾಸಕ ಸುನಿಲ್ ಶಂಕು ಸ್ಥಾಪನೆ; ಕಾನೂನು ಮಹಾವಿದ್ಯಾಲಯಕ್ಕೂ ಪ್ರಸ್ತಾವನೆ

Source: S O News service | By I.G. Bhatkali | Published on 4th August 2020, 8:17 PM | Coastal News |

ಭಟ್ಕಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳ ಇದರ ರು.3ಕೋ.86ಲ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ತಾಲೂಕಿನ ಜಾಲಿಯಲ್ಲಿ ಸೋಮವಾರ ಶಾಸಕ ಸುನಿಲ್ ನಾಯ್ಕ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿದರು.

 ನಂತರ ಮಾತನಾಡಿದ ಅವರು, ಭಟ್ಕಳ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಸುಮಾರು 6 ಎಕರೆಗೂ ಅಧಿಕ ವಿಸ್ತೀರ್ಣದ ಪ್ರದೇಶದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ತಲೆ ಎತ್ತಲಿದ್ದು, ಐಟಿಐ, ಆರೋಗ್ಯ ಕೇಂದ್ರ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ.

ಭಟ್ಕಳದಲ್ಲಿ ಕಾನೂನು ಮಹಾವಿದ್ಯಾಲಯ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಸಿಗುವ ವಿಶ್ವಾಸ ಇದೆ. ಇನ್ನು ಮುಂದೆ ಶಿಕ್ಷಣಕ್ಕಾಗಿ ಭಟ್ಕಳದ ವಿದ್ಯಾರ್ಥಿಗಳು ಬೇರೆ ತಾಲೂಕು, ಜಿಲ್ಲೆಗಳಿಗೆ ಅಲೆದಾಡುವುದು ತಪ್ಪಲಿದೆ. ವಿದ್ಯಾರ್ಥಿಗಳು ಸರಕಾರದ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

 ಭಟ್ಕಳದಲ್ಲಿ ಕಾನೂನು ಮಹಾವಿದ್ಯಾಲಯ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಸಿಗುವ ವಿಶ್ವಾಸ ಇದೆ. ಇನ್ನು ಮುಂದೆ ಶಿಕ್ಷಣಕ್ಕಾಗಿ ಭಟ್ಕಳದ ವಿದ್ಯಾರ್ಥಿಗಳು ಬೇರೆ ತಾಲೂಕು, ಜಿಲ್ಲೆಗಳಿಗೆ ಅಲೆದಾಡುವುದು ತಪ್ಪಲಿದೆ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಎಮ್.ಆರ್.ನಾಯ್ಕ, ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಡಿಗ, ರಾಜೇಶ ನಾಯ್ಕ, ಶಿವಾನಿ ಶಾಂತಾರಾಮ, ರವಿ ನಾಯ್ಕ ಜಾಲಿ, ಮೋಹನ ನಾಯ್ಕ, ಭಾಸ್ಕರ ದೈಮನೆ, ದಿನೇಶ ನಾಯ್ಕ, ಪ್ರಮೋದ ಜೋಶಿ, ರಾಮಚಂದ್ರ ಬೆಂಗ್ರೆ, ಕುಮಾರ ಹೆಬಳೆ, ಮಹೇಂದ್ರ ನಾಯ್ಕ, ದಾಸ ನಾಯ್ಕ ತಲಗೋಡ, ಲಕ್ಷ್ಮೀ ನಾರಾಯಣ, ಸಿದ್ಧಾರ್ಥ ನಾಯ್ಕ, ಮಂಜುನಾಥ ನಾಯ್ಕ ಕರಾವಳಿ, ವೆಂಕಟೇಶ ಶೆಟ್ಟಿ, ಗಣೇಶ ಬೈಲೂರು, ಹರೀಶ ನಾಯ್ಕ, ಶ್ರೀಕಾಂತ ನಾಯ್ಕ, ಪುರಂದರ ಮೊದಲಾದವರು ಉಪಸ್ಥಿತರಿದ್ದರು. ಭಟ್ಕಳ ಸರಕಾರಿ ಕಾಲೇಜು ಪ್ರಾಚಾರ್ಯೆ ಡಾ.ಭಾಗೀರಥಿ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.  

Read These Next