ನೂತನವಾಗಿ ವರದ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ ಉದ್ಘಾಟಿಸಿದ ಮಾಜಿ ಶಾಸಕ ಮಂಕಾಳು ವೈದ್ಯ

Source: sonews | By MV Bhatkal | Published on 9th October 2021, 7:10 PM | Coastal News | Don't Miss |


ಭಟ್ಕಳ:ತಾಲೂಕಿನ ರಂಗಿಕಟ್ಟೆ ವಜೇಶ್ವರಿ ಟವರ್‌ನಲ್ಲಿ ನೂತನವಾಗಿ ಆರಂಭಿಸಲಾದ ಶ್ರೀ ವರದ ಸೌಹಾರ್ದ ಕ್ರೆಡಿಟ್ ಸಹಕಾರಿ ನಿಯಮಿತ, ಭಟ್ಕಳ ಅನ್ನು  ಮಾಜಿ ಶಾಸಕ ಮಂಕಾಳು ವೈದ್ಯ ಉದ್ಘಾಟಿಸಿದರು.
ನ೦ತರ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ.ಸಹಕಾರಿ ಸಂಘಗಳಿಂದ ಉದ್ಯೋಗ ಉದ್ಯಮಗಳು ಸೃಷ್ಟಿಯಾಗುತ್ತವೆ.ಸಾಮಾನ್ಯ ಜನರೂ ತಮ್ಮ ಕೆಲಸ ಸಹಕಾರಿ ಕಾರ್ಯಗಳಿಗಾಗಿ ಸ೦ಘಗಳನ್ನು ಅವ ಲ೦ಬಿಸಿಕೊ೦ಡಿದ್ದು,ಇಲ್ಲಿಯವರೆಗೆ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗಿಲ್ಲ.ಇಲ್ಲಿನ ಸಹಕಾರಿ ಸಂಘಗಳ ಸದಸ್ಯರು ಸ್ವಾರ್ಥವನ್ನು ಬಿಟ್ಟು ಕೆಲಸ ಮಾಡುತ್ತಿರುವುದರಿಂದಲೇ ಸಹಕಾರಿ ಸಂಘಗಳು ಬೆಳೆಯುತ್ತಿವೆ.ಎಂದರು
ಮಾಜಿ ಶಾಸಕ ಜೆ.ಡಿ.ನಾಯ್ಕ ಮಾತ ನಾಡಿ,ರಾಷ್ಟ್ರೀಯ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳಲ್ಲಿ ಸಾಲ ಸೌಲಭ್ಯಗಳು ಸಿಗುತ್ತವೆ. 
ಸುಲಭವಾಗಿ ಸಾಲಗಾರರು ನಿಗದಿತ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡುವುದರಿಂದ ಸಹಕಾರಿ ಸಂಘಗಳ ಬೆಳವಣಿಗೆ ಸಾಧ್ಯ ಎಂದರು. ಸಹಕಾರಿ ಧುರೀಣ ಡಿ.ಬಿ.ನಾಯ್ಕ, ಪಡೆದ ಸಾಲವನ್ನು ಅದೇ ಉದ್ದೇಶಕ್ಕೆ ಬಳಸಿಕೊ೦ಡರ ಸಮಸ್ಯೆ ಇರಲಾರದು. ಗ್ರಾಹಕರು ಹಾಗೂ ಸಹಕಾರಿ
ಒಬ್ಬರಿಗೊಬ್ಬರು ಸಹಕಾರ ನೀಡಿ ಮುಂದುವರೆದರೆ ಇಬ್ಬರಿಗೂ ಒಳಿತಾಗುತ್ತದೆ ಎಂದು ವಿವರಿಸಿದರು.ಭಟ್ಕಳ ಅರ್ಬನ್ ಬ್ಯಾಂಕ್‌ ಉಪಾಧ್ಯಕ್ಷ ಎಮ್. ಆರ್.ನಾಯ್ಕ, ಸದಸ್ಯರಿಂದ ಸದಸ್ಯರಿಗಾಗಿ, ಸದಸ್ಯರೇ ಮಾಡಿಕೊ೦ಡ ಹಣಕಾಸು
ಸಸ್ಥೆಯ ಸಹಕಾರಿ ಸಂಘವಾಗಿದ್ದು, ಸಹಕಾರಿಯ ಒಳಿತಿಗಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವ೦ತೆ ಸಲಹೆ ನೀಡಿದರು. ಭಟ್ಕಳ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಈರಪ್ಪ ಗರ್ಡೀಕರ, ಶ್ರೀ ವರದ ಸೌಹಾರ್ದ ಕೆಡಿಟ್ ಸಹಕಾರಿಯ ಅಧ್ಯಕ್ಷ ಮಹೇಶ ನಾಯ್ಕ ಉಪಸ್ಥಿತರಿದ್ದರು. ವಿಠಲ್ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...