ಅಂಕೋಲಾ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅಸಮರ್ಪಕ ಜಿಪಿಎಸ್‌ಗೆ ಅರಣ್ಯವಾಸಿಗಳ ಮೇಲ್ಮನವಿ ಸಲ್ಲಿಸುವುದು ಅವಶ್ಯ ಇಲ್ಲದ್ದಿದಲೀ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಸಮಸ್ಯೆಗಳಾಗಿರುವದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ೨೭ ರಂದು ಅಂಕೋಲಾ ತಾಲೂಕಿನ ಜೈಹಿಂದ್ ಸಂಭಾಗಣದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅಸಮರ್ಪಕ ಜಿಪಿಎಸ್ ಮೇಲ್ಮನವಿ ಅಭಿಯಾನವನ್ನ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಜಿಪಿಎಸ್ ಕಾರ್ಯಾಲಯದಲ್ಲಿ ಸಾಕಷ್ಟು ಲೋಪಗಳಾಗಿದ್ದು ಸಾಗುವಳಿ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳು ವಂಚಿತ ಸಂದರ್ಭ ಇರುವುದರಿಂದ ಜಿಲ್ಲಾದ್ಯಂತ ಅರಣ್ಯವಾಸಿಗಳಿಗೆ ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ಬೆಂಬಲದ ಅಂಗವಾಗಿ ಉಚಿತ ಮೇಲ್ಮನವಿ ಅಭಿಯಾನವನ್ನ ಸಂಘಟಿಸಲಾಗಿದೆ ಎಂದು ಅವರು ಹೇಳಿದರು.
ತಾಲೂಕಾ ಅಧ್ಯಕ್ಷ ರಮಾನಂದ ನಾಯ್ಕ ಅಚವೆ ಅಧ್ಯಕ್ಷತೆಯನ್ನು ವಹಿಸಿದರು. ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗಿನಕೇರಿ, ತಾಲೂಕಾ ಸಂಚಾಲಕರಾದ ವಿಜಯ ಪಿಳ್ಳೆ, ತಾಲೂಕಾ ಸಂಚಾಲಕರಾದ ಸಂದೇಶ ನಾಯ್ಕ ಬ್ರಮೂರ್, ಅರವಿಂದ ಗೌಡ, ಶಂಕರ ಕೊಡಿಯಾ ಅಚವೆ, ವೆಂಕಟರಮಣ ನಾಯ್ಕ ಮಂಜುಗುಣಿ, ಮಾತನಾಡಿದರು. ರಾಮಚಂದ್ರ ತಾಂಡೇಲ್ ಉಪಸ್ಥಿತರಿದ್ದರು.
೩೨ ಸಾವಿರ ಅಫೀಲ್: ಜಿಲ್ಲಾದ್ಯಂತ ಹೋರಾಟಗಾರರ ವೇದಿಕೆಯು ೩೨ ಸಾವಿರ ಅಸಮರ್ಪಕ ಜಿಪಿಎಸ್ ಮೇಲ್ಮನವಿ ಮಾಡಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.