ಅರಣ್ಯ ಅತಿಕ್ರಮಣದಾರರ ವೈಯಕ್ತಿಕ ತಕರಾರು ಅರ್ಜಿಸಲ್ಲಿಕೆ ಅಭಿಯಾನ

Source: sonews | By Staff Correspondent | Published on 19th February 2020, 6:07 PM | Coastal News | Don't Miss |

•ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ ಅರಣ್ಯ ಅತಿಕ್ರಮಣದಾರರು

ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖಿಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೇ ಶೀಘ್ರದಲ್ಲಿ ಜರುಗಿಸುವ ಕುರಿತು ಜಿಲ್ಲಧಿಕಾರಿಗಳಿಗೆ ಅರಣ್ಯ ಅತಿಕ್ರಮಣದಾರರು ವೈಯಕ್ತಿಕವಾಗಿ ತಕರಾರು ಅರ್ಜಿ ಸಲ್ಲಿಸುವ ಅಭಿಯಾನ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂಧ್ರ ನಾಯ್ಕ ನೇತ್ರತ್ವದಲ್ಲಿ ಬುಧವಾರ ಕ್ರಿಕೇಟ್ ಅಕಾಡೆಮಿ ಆವರಣದಲ್ಲಿ ಜರುಗಿತು.
 
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಉ.ಕ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರ ಅರ್ಜಿಯನ್ನು 3 ತಲೆಮಾರಿನ ಸಾಗುವಳಿ ದಾಖಲೆಯನ್ನು ಆಧರಿಸಿ ಒತ್ತಾಯಿಸುತ್ತಿದ್ದು ಈ ದಿಶೆಯಲ್ಲಿ 85,757 ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ 74,220 ಅರ್ಜಿಗಳು ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತೀರಸ್ಕರಿಸಿದ ಆದೇಶವು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿದಿವಿಧಾನವನ್ನು ಅನುಸರಿಸದೇ ಅರ್ಜಿಗಳನ್ನು ತೀರಸ್ಕರಿಸುವುದಕ್ಕೆ ಆಕ್ಷೇಪಿಸಿ ಸದ್ರಿ ಅಭಿಯಾನವನ್ನು ಜರುಗಿಸಿದ್ದು ಇಂದಿನ ಕಾರ್ಯಕ್ರಮದ ವಿಶೇಷವಾಗಿತ್ತು.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ನಿರ್ದಿಷ್ಠ ಪಡಿಸಿದ ದಾಖಲತಿ ಸಾಕ್ಷ್ಯಗಳನ್ನು ಆಧರಿಸಲು ಒತ್ತಾಯಿಸತಕ್ಕದಲ್ಲ  ಅಲ್ಲದೇ ಕೇಂದ್ರ ಬುಡಕಟ್ಟು ಮಂತ್ರಾಲಯವು 25 ವರ್ಷದ ಸ್ವಾಧಿನಕ್ಕೆ ಅತಿಕ್ರಮಣದಾರರ ವೈಯಕ್ತಿಕ ದಾಖಲೆ ಪರಿಗಣಿಸದೇ ಅರಣ್ಯ ಅತಿಕ್ರಮಣದಾರರು ಸಾಗುವಳಿಯ ಪ್ರದೇಶ, ಜನವಸತಿ ಪ್ರದೇಶ ಇರುವ ಆಧಾರದ ಮೇಲೆ ಮಂಜೂರಿ ಪ್ರಕ್ರಿಯೇ ಜರುಗಿಸಬೇಕೆಂಬ ಆಕ್ಷೇಪಣೆ ಜಿಲ್ಲಾಧಿಕಾರಿಗಳಿಗೆ ಇಂದು ಸಲ್ಲಿಸಿದ ತಕರಾರು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ತಕರಾರು ಅರ್ಜಿಯಲ್ಲಿ ಗುಜರಾತ ಉಚ್ಛ ನ್ಯಾಯಾಲಯವು ಸಹಿತ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸುವುದು ಕಾನೂನು ಬಾಹಿರ ಎಂದು ಆದೇಶಿಸಿದ ಅಂಶವನ್ನು ತಕರಾರು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಕಾನೂನಿನಲ್ಲಿ ಉಲ್ಲೇಖಿಸಿರುವಂತೆ ಮೌಖಿಕ ಹಾಗೂ ಪ್ರತ್ಯಕ್ಷ ಸಾಗುವಳಿ ಸಾಕ್ಷಿಯ ಮೇಲೆ ಮಂಜೂರಿ ನೀಡಬೇಕಾಗಿ ಪ್ರತಿಯೊಬ್ಬ ಅತಿಕ್ರಮಣದಾರರ ತಕರಾರು ಅರ್ಜಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ತಕರಾರು ಅರ್ಜಿ ಸಲ್ಲಿಸುವ ಅಭಿಯಾನದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಸೈಯ್ಯದ್ ಅಲಿ, ಮಾದೇವ ನಾಯ್ಕ, ಅಬ್ದುಲ್ ಕರಿಮ್, ದತ್ತ ನಾಯ್ಕ, ನಾರಾಯಣ ಮರಾಠಿ, ಇರ್ಷಾದ್ ಮುಂತಾದವರು ನೇತ್ರತ್ವ ವಹಿಸಿದ್ದರು.

ಸ್ಥಳೀಯ ತಹಶಿಲ್ದಾರ ನೇತ್ರತ್ವದಲ್ಲಿ 10 ವಿಶೇಷ  ಕೌಂಟರಗಳನ್ನು ಮಾಡಿ ತಾಲೂಕಾ ದಂಡಾಧಿಕಾರಿ ಕಛೇರಿಯ ಸಿಬ್ಬಂಧಿಗಳು ಅರ್ಜಿ ಸ್ವಿಕರಿಸಲು ವ್ಯವಸ್ಥೆಯನ್ನು ಜರುಗಿಸಲಾಗಿತ್ತು. ಸಿ.ಪಿ.ಐ , ಪಿ.ಎಸ.ಐ ಗಳು ಕಾನೂನು ಪಾಲನೆ ಜರುಗಿಸಿದರು.

Read These Next

ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೋವಿಡ್ ಕರಿ ನೆರಳು; ಮನೆ ಹಾಗೂ ಮಂದಿರಗಳಲ್ಲಿ ಮಾತ್ರ ಗಣೇಶನ ಪ್ರತಿಷ್ಠಾಪನೆ

ಕಾರವಾರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...

ಮತದಾರರ ಪಟ್ಟಿ ಪ್ರಕಟ ; ಆಕ್ಷೇಪಣೆಗೆ ಅವಕಾಶ                                                                     

ಕಾರವಾರ:ಗ್ರಾಮ ಪಂಚಾಯತಗಳ 2020 ರ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯ 12 ತಾಲೂಕಿನ 231 ಗ್ರಾಮ ಪಂಚಾಯತಗಳ ಮತದಾರರ ಪಟ್ಟಿಯನ್ನು ...

ಸಾರ್ವಜನಿಕ ಗಣೇಶೋತ್ಸವದ ಮೇಲೆ ಕೋವಿಡ್ ಕರಿ ನೆರಳು; ಮನೆ ಹಾಗೂ ಮಂದಿರಗಳಲ್ಲಿ ಮಾತ್ರ ಗಣೇಶನ ಪ್ರತಿಷ್ಠಾಪನೆ

ಕಾರವಾರ: ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮನೆ ಮತ್ತು ದೇವಸ್ಥಾನದಲ್ಲಿ ಮಾತ್ರ ಗಣೇಶಮೂರ್ತಿ ...

ಹಳೆಯ ವೈಷಮ್ಯ; ವ್ಯಕ್ತಿಯ ಕೊಲೆ  

ಭಟ್ಕಳ : ಹಳೆಯ ವೈಷಮ್ಯ ಹಾಗೂ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೊಲೆಗೀಡಾಗಿರುವ ಘಟನೆ ತಾಲೂಕಿನ ಬೆಣಂದೂರು ...

ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ...

ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ

ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಮೀನುಗಾರ ಕಾರ್ಮಿಕರಿಗೆ ದೋಣಿಗಳಲ್ಲಿ ಕ್ವಾರಂಟೈನ್ : ಕೋಟಾ ಶ್ರೀನಿವಾಸ ಪೂಜಾರಿ