ಪ್ರಕೃತಿ ರಕ್ಷಣೆಗೆ  ಪ್ರತಿಯೊಬ್ಬರು ಎರಡು ಸಸಿಗಳನ್ನು ನೆಡಬೇಕು: ನೀಲಕಂಠಮಠದ ಮಹಾಸ್ವಾಮಿ

Source: sonews | By Staff Correspondent | Published on 26th June 2019, 11:35 PM | Coastal News |

ಮುಂಡಗೋಡ : ನಾವು ಇವತ್ತೂ ಅರಣ್ಯ ನಾಶ ಮಾಡುತ್ತಿರುವುದರಿಂದ ಪ್ರಕೃತಿಯ ಅಸಮತೋಲನವಾಗಿದೆ ಮಳೆ ಸಮಯದಲ್ಲಿ ಮಳೆಯಾಗದೆ ಕುಡಿಯುವ ನೀರಿಗೂ ಆಹಾಕಾರ ಎದ್ದಿದೆ. ಮಳೆ ಇಲ್ಲದೆ ಬೆಳೆ ಇಲ್ಲ. ಮಳೆಗಾಲದಲ್ಲಿ ಉರಿಬಿಸಿಲಿನ ಬೆಗೆಯಲ್ಲಿ ಬೆಂದುವಂತ ಪರಿಸ್ಥಿತಿ ನಿರ್ಮಾಣವಾಗ್ತ ಇದೆ ಆದ್ದರಿಂದ ನಾವು ಈಗಿನಿಂದಲೇ ಪ್ರತಿಯೊಬ್ಬರು ಎರಡು ಎರಡು ಸಸಿ ನೆಟ್ಟು ನಮ್ಮ ಪ್ರಕೃತಿ ಸಮತೋಲನಕ್ಕೆ ಕೈಜೋಡಿಸಬೇಕು ಎಂದು ಹಳೇಹುಬ್ಬಳ್ಳಿಯ ವೀರ ಭಿಕ್ಷಾವರ್ತಿ ನೀಲಕಂಠಮಠದ 1008 ಶಿವಶಂಕರ ಶಿವಾಚಾರ್ಯರು ಹೇಳಿದರು.

ಮುಂಡಗೋಡ ಪಟ್ಟಣದ ಹುಬ್ಬಳ್ಳಿ ರಸ್ತೆಯ ದೈವಜ್ಞ ಸಭಾಭವನದಲ್ಲಿ ಬುಧವಾರ ಜರುಗಿದ ಮೂಲಿಮನಿ(ಕುರುಹಿನಶೆಟ್ಟಿ) ಕುಟುಂಬಸ್ಥರ ಮದುವೆ ಸಮಾರಂಭದಲ್ಲಿ ಅಂಧತ್ವ ನಿವಾರಣೆ ಹಾಗೂ ಪರಿಸರ ಜಾಗೃತಿ ಮೂಡಿಸುವ ಸಾಮಾಜಿಕ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು. ಹೊಸ ಬಾಳಿನ ಹೊಸ್ತಿಲಲ್ಲಿ ಕಾಲಿಟ್ಟಿರುವ ನೂತನ ವಧು-ವರರು ಸ್ವಯಂ ಪ್ರೇರಣೆಯಿಂದ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ಕಾಡಿದ್ದರೆ ನಾಡು, ಗಿಡಗಳನ್ನು ನೆಟ್ಟು ಪೋಷಣೆ ಮಾಡುವಲ್ಲಿ ನಮ್ಮೆಲ್ಲರ ಪಾತ್ರ ಬಹು ಮುಖ್ಯ ಎಂದರು   

ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ.ರಾಘವೇಂದ್ರ ಮಾತನಾಡಿ ಜಗತ್ತಿನಲ್ಲಿ 4ಲಕ್ಷಕ್ಕೂ ಹೆಚ್ಚು ಅಂಧರಿದ್ದಾರೆ. ಭಾರತದಲ್ಲಿ 1.50ಲಕ್ಷ ಕಾರ್ನಿಯಾ ಅಂಧತ್ವ ಹೊಂದಿದವರಿದ್ದಾರೆ. ಎಲ್ಲಾ ವಯಸ್ಸಿನವರೂ ನೇತ್ರದಾನ ಮಾಡಬಹುದು. ಮರಣ ಹೊಂದಿದವರು ಮಾತ್ರ ನೇತ್ರದಾನ ಮಾಡಬಹುದಾಗಿದೆ. ಸತ್ತನಂತರ ಕಣ್ಣುಗಳನ್ನು ದಾನಮಾಡಿದರೆ ಅಂಧರಬಾಳಿನಲ್ಲಿ ಬೆಳಕಾಗಿ ದಾನಮಾಡಿದ ಪುಣ್ಯಾತ್ಮ ಕಣ್ಣುಜೋಡಿಸಿಕೊಂಡ ಅಂಧರ  ಪಾಲಿಗೆ ದೇವರಾಗುತ್ತಾರೆ ಅಂದರು. ಕಣ್ಣು ದೃಷ್ಠಿ ಬಂದನಂತರ ಅವರೂ ಸಹಿತ ನಮ್ಮಂತೆ ಬಾಳುತ್ತಾರೆ ಅಂದರು. ಇದೇ ರೀತಿ ಕಾರ್ಯಕ್ರಮಗಳಲ್ಲಿ ನೇತ್ರದಾನದ ಅರಿವು ಮೂಡಿಸಿದರೆ ಕಾರ್ನಿಯಾ ಅಂಧತ್ವ ನಿವಾರಣೆಗೆ ಎಲ್ಲರೂ ಕೈಜೋಡಿಸಬಹುದು ಎಂದರು.

ಈ ವೇಳೆ ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ, ಸಿಬ್ಬಂದಿ ಪ್ರಕಾಶ ಮೊಸಳಗಿ ಹಾಗೂ ಇತರರಿದ್ದರು.      

ನವ ದಂಪತಿಗಳಿಂದ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಲಾಯಿತು. ವಿವಾಹ ಸಮಾರಂಭಕ್ಕೆ ಆಗಮಿಸಿದ ಸರ್ವ ಬಂಧು-ಮಿತ್ರರಿಗೆ ಸಸಿ ವಿತರಣೆ ಮಾಡಲಾಯಿತು. ಮದುವೆ ಸಮಾರಂಭದಲ್ಲಿ ದಂಪತಿ ಸಮೇತ ಸುಮಾರು 300ಕ್ಕೂ ಹೆಚ್ಚಿನ ಬಂಧು-ಮಿತ್ರರು ನೇತ್ರದಾನ ವಾಗ್ದಾನ ಮಾಡಿದರು. ಸುಮಾರು 1500ಸಸಿಗಳನ್ನು ವಿತರಣೆ ಮಾಡಲಾಯಿತು.      

 

Read These Next

ಭಟ್ಕಳ: ಗುಡುಗು ಮಿಂಚಿನ ಮಳೆ ಕೈಕೊಡುತ್ತಿರುವ ವಿದ್ಯುತ್ ಎರಡು ದಿನಗಳಿಂದ ರಾತ್ರಿ ನಿದ್ರೆ ಮಾಡದ ಜನತೆ

ಭಟ್ಕಳ: ಕಳೆದ ಎರಡು ದಿನಗಳಿಂದ ಭಟ್ಕಳದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು ಹೆಸ್ಕಾಂ ಇಲಾಖೆ ಪದೇ ಪದೇ ವಿದ್ಯುತ್ ...

ಭಟ್ಕಳ ಅರ್ಬನ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಕ ಸುಭಾಷ್ ಶೆಟ್ಟಿಗೆ ಬೀಳ್ಕೊಡುಗೆ

ಭಟ್ಕಳ: ರಾಜ್ಯದಲ್ಲಿನ ಪ್ರತಿಷ್ಟಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್ ಬ್ಯಾಂಕಿನಲ್ಲಿ ಸುಧೀರ್ಘ ಸೇವೆ ...

ಬೈಕ್ ಅಪಘಾತ : ಬೈಕ್ ಸವಾರ ಸಾವು

ಮುಂಡಗೋಡ : ಸ್ವಯಂ ಕೃತ ಅಪಘಾತ ಪಡಿಸಿಕೊಂಡು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಕಲಘಟಗಿ ರಸ್ತೆಯ ಇಂದಿರಾನಗರ ಪ್ಲಾಟ್ ...