ಮಾದಕ ವಸ್ತು ವಿರೋಧಿ ಅಭಿಯಾನಕ್ಕಾಗಿ ಬಾಚೆ ತಂಡ ಭಟ್ಕಳಕ್ಕೆ

Source: so news | By MV Bhatkal | Published on 4th December 2022, 11:45 PM | Coastal News |

ಭಟ್ಕಳ: ಬಾಚೆ (ಡಾ, ಬಾಬಿ ಜೆಮ್ಮನ್ನೂರ್) ಆ್ಯಂಡ್  ಮರಡೋನಾ  ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಕಳೆದ ನವೆಂಬರ್ 21ರಂದು ಆರಂಭಿಸಲಾದ ಮಾದಕ ವಸ್ತು ವಿರೋಧಿ ಅಭಿಯಾನ ಜಾಥಾ ಭಟ್ಕಳವನ್ನು ತಲುಪಿತು.
ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಫಜ್ಜುರೆಹಮಾನ್ ಜಾಥಾ ಅನ್ನು ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡರು. ಜಗತ್ತಿನ ಪ್ರಸಿದ್ದ ಫುಟಬಾಲ್ ತಾರೆ ಮರಡೋನಾರ ಮಾದಕ ವಸ್ತು ವಿರುದ್ಧ ಫುಟಬಾಲ್ ವ್ಯಸನ ಎನ್ನುವ ಸಂದೇಶವನ್ನು ಬಿತ್ತರಿಸುತ್ತ ಈ ಜಾಥಾವು ಚಿನ್ನದ ವರ್ಣದ ತೆರೆದ ಕಾರಿನ ಮೂಲಕ ಗೋವಾ ಮಾರ್ಗವಾಗಿ ಮಹಾರಾಷ್ಟ್ರವನ್ನು ತಲುಪಿ ಅಲ್ಲಿಂದ ವಿಮಾನದಲ್ಲಿ ವಿಶ್ವ ಘುಟಬಾಲ್ ಪಂದ್ಯಾವಳಿ ನಡೆಯುತ್ತಿರುವ ಕತ್ತಾರ್ ಅನ್ನು ತಲುಪಲಿದೆ. ನಂತರ ಅಲ್ಲಿನ ಸ್ಟೇಡಿಯಮ್‌ನಲ್ಲಿ ಹ್ಯಾಂಡ್ ಆಫ್ ಗಾಡ್ ಮರಡೋನಾ ಹಾಗೂ ಬೋಚೆ ಚಿನ್ನದ ಪುತ್ಥಳಿಯನ್ನು ಅನಾವರಣಗೊಳಿಸಿ ಅಲ್ಲಿನ ಮ್ಯೂಸಿಯುವಗೆ ಹಸ್ತಾಂತರಿಸಲಾಗುತ್ತದೆ. ಮಾರ್ಗದುದ್ದಕ್ಕೂ ಪ್ರಮುಖ ಕಾಲೇಜು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಾದಕವಸ್ತುಗಳ ವಿರುದ್ಧ ಜನಜಾಗೃತಿ ಮಾಡಲಾಗುತ್ತಿದ್ದು, ಈ ಬಗ್ಗೆ ಇನ್ ಸ್ಟಾಗ್ರಾಮ್ ಮೂಲಕ ನಿತ್ಯದ ಘಟನೆಗಳನ್ನು ಬಾಚಿ ತಂಡ ಬಿತ್ತರಿಸುತ್ತ. ಮುಂದೆ ಸಾಗಲಿದೆ. ಆಸಕ್ತರು ಇದನ್ನು ಹಿಂಬಾಲಿಸಿ ಮರಡೋನಾ ಚಿನ್ನದ ಮತ್ಥಳಿಯೊಂದಿಗೆ ಸೆಲ್ಸಿ ತೆಗೆದು ಕಳುಹಿಸುವ ಮೂಲಕ ತ೦ಡವನ್ನು ಸೇರಿಕೊಳ್ಳ ಬಹುದಾಗಿದೆ. ಅದೃಷ್ಟವಂತ ಓರ್ವರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ವಿಜೇತರಿಗೆ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಕತ್ತಾರ್' ವಿಮಾನ ಯಾನದ ಟಿಕೆಟ್ ಹಾಗೂ ಫುಟ್‌ಬಾಲ್ ಪಂದ್ಯ ವೀಕ್ಷಣೆ ಪಾಸ್‌ಅನ್ನು ಉಚಿತವಾಗಿ ನೀಡಲಾಗುತ್ತದೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...