ಮುಂಡಗೋಡ: ಜಾನಪದ ರಾಜ್ಯ ಪ್ರಶಸ್ತಿ ವಿಜೇತ ಸಹದೇವಪ್ಪ ನಡಿಗೇರ ಗೆ ಗಂಗಾಮತ ಸಮಾಜದಿಂದ ಸನ್ಮಾನ

Source: Nazir Tadapatri | By I.G. Bhatkali | Published on 24th January 2021, 3:57 PM | Coastal News |

ಮುಂಡಗೋಡ:  ಮುಂಡಗೋಡ ನಗರ ಗಂಗಾಮತಸ್ಥ ಕುಲಬಾಂದವರು  ಭಾನುವಾರ ರಾಜ್ಯಮಟ್ಟದ ಜಾನಪದ ಅಕಾಡಮಿ ಪ್ರಶಸ್ತಿ ಗೆ ಭಾಜನರಾದ ಇಂದೂರ ಗ್ರಾಮದ  ಸಹದೇವಪ್ಪ ಈರಪ್ಪ ನಡಿಗೇರ ರವರಿಗೆ ಪಟ್ಟಣದ ನ್ಯಾಸರ್ಗಿ ರಸ್ತೆಯಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ  ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಗೌರವ ಕಾರ್ಯದರ್ಶಿ ವಸಂತ ಕೋಣಸಾಲಿ ಮಾತನಾಡಿ ತಾಲೂಕಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಹಾಗೂ ನಮ್ಮ ಗಂಗಾಮತ ಸಮಾಜದ ಲಾವಣಿ ಗಾಯಕನಿಗೆ ಪ್ರಶಸ್ತಿ ಬಂದಿರುವುದು ಮತ್ತಷ್ಟು ಖುಷಿಯಾಗಿದೆ. ನಮ್ಮ ಸಮಾಜದ ವ್ಯಕ್ತಿಗಳು ಹಲವು ಕ್ಷೇತ್ರಗಳಲ್ಲಿ ಒಳ್ಳೆ ಒಳ್ಳೆಯ ಸ್ಥಾನಗಳನ್ನು ಪಡೆಯುತ್ತಿದ್ದಾರೆ.20 ವರ್ಷದ ಹಿಂದೆ ಹಿಂದುಳಿದಿದ್ದ ನಮ್ಮ ಸಮಾಜ ಇಂದು ಒಳ್ಳೆಯ ಪ್ರಗತಿಯಲ್ಲಿ ಸಾಗುತ್ತಿದೆ ಎಂದರು.

ಸಮಾಜದ ಹಿರಿಯರಾದ ಓ.ಜಿ.ಪೂಜಾರ ಮಾತನಾಡಿ ಸಹದೇವ ನಢಿಗೇರ ರವರಿಗೆ ಮುಂದೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ರಾಷ್ಟ್ರಪಶಸ್ತಿಗೂ ಆಯ್ಕೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಸಹದೇವ ನಡಿಗೇರ ತಮ್ಮ ಕಂಚಿನ ಕಂಠದಿಂದ ಸುಶ್ರಾವ್ಯವಾಗಿ 2 ಜಾನಪದ ಹಾಡುಗಳನ್ನು ಹಾಡಿ ಕೇಳುಗರಿಗೆ ಮಂತ್ರಮುಗ್ದರನ್ನಾಗಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ವಸಂತ ಕೋಣಸಾಲಿ, ಓ.ಜಿ.ಪೂಜಾರ ಗಂಗಾಮತ ಸಮಾಜ ನಗರ ಅಧ್ಯಕ್ಷ ಫಕ್ಕಿರಪ್ಪ ಅಂಟಾಳ, ಉಪಾಧ್ಯಕ್ಷ  ಚಂದ್ರಶೇಖರ ಸುಣಗಾರ,ಕಾರ್ಯದರ್ಶಿ ಗಣೇಶ ಬಂಗಾರಿ, ಖಜಾಂಚಿ ನಾಗರಾಜ ಪೂಜಾರ, ಪ.ಪಂ ಮಾಜಿ ಉಪಾಧ್ಯಕ್ಷ ಫಕ್ಕಿರಪ್ಪ ಅಂಟಾಳ ಮಂಜುನಾಥ ನಡಿಗೇರ ಸೇರಿದಂತೆ ಮುಂತಾದವರು ಇದ್ದರು. ಕಾರ್ಯಕ್ರಮ ನಿರೂಪಣೆಯನ್ನು ರಾಜು ಬಸಾಪುರ ಮಾಡಿದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...