ಜೂನ್ 24ರಂದು ಮಸ್ಕತ್‍ನಿಂದ ಮಂಗಳೂರಿಗೆ ಬಾಡಿಗೆ ವಿಮಾನ ಹಾರಾಟ

Source: sonews | By Staff Correspondent | Published on 22nd June 2020, 6:24 PM | Coastal News |

ಭಟ್ಕಳ: ಇಂದು ರಾತ್ರಿ ಮಸ್ಕತ್‍ನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನವನ್ನು ಜೂನ್ 24 ಕ್ಕೆ ಮುಂದೂಡಲಾಗಿದೆ ಎಂದು ಮಸ್ಕತ್ ನ ಇಂಡಿಯನ್ ಸೋಷಿಯಲ್ ಕ್ಲಬ್ ಮಾಹಿತಿ ನೀಡಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಜೂನ್ 24 ರ ಬೆಳಿಗ್ಗೆ ವಿಮಾನ ಮಂಗಳೂರಿಗೆ ಹೊರಡಲಿದೆ.

ಜೂನ್ 24 ರ ಬೆಳಿಗ್ಗೆ ವಿಮಾನವು ಮಂಗಳೂರಿಗೆ ಹಾರಲಿದೆ ಎಂದು ಇಂಡಿಯನ್ ಸೋಷಿಯಲ್ ಕ್ಲಬ್ ಪ್ರಯಾಣಿಕರಿಗೆ ಸಂದೇಶ ಕಳುಹಿಸಿದೆ, ಇದಕ್ಕಾಗಿ ಎಲ್ಲಾ ಪ್ರಯಾಣಿಕರು ಇಂದು ಸಂಜೆ 6 ಗಂಟೆಗೆ ಇಂಡಿಯನ್ ಸೋಷಿಯಲ್ ಕ್ಲಬ್‍ಗೆ ಬಂದು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ . ಈ ವಿಮಾನದಲ್ಲಿ 180 ಪ್ರಯಾಣಿಕರು ಪ್ರಯಾಣಿಸಲಿದ್ದು, ಅದರಲ್ಲಿ 24 ಪ್ರಯಾಣಿಕರು ಭಟ್ಕಳ ಮೂಲದವರಾಗಿದ್ದಾರೆ.

ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಚಾರ್ಟರ್ಡ್ ವಿಮಾನಗಳು ಇಳಿಯುತ್ತಿರುವುದರಿಂದ, ಮಂಗಳೂರಿನಲ್ಲಿ ಕ್ಯಾರೆಂಟೈನ್ ಸೌಲಭ್ಯವನ್ನು ಒದಗಿಸುವಲ್ಲಿ ಸಮಸ್ಯೆ ಇದೆ, ಇದರಿಂದಾಗಿ ವಿಮಾನವನ್ನು ಮರು ನಿಗದಿಪಡಿಸಲಾಗಿದೆ ಎಂದು ಇಂಡಿಯನ್ ಸೋಶಿಯಲ್ ಕ್ಲಬ್ ತನ್ನ ವಾಟ್ಸಪ್  ಸಂದೇಶದಲ್ಲಿ ತಿಸಿದೆ.  ಹಾರಾಟದ ನಿಖರವಾದ ಸಮಯವನ್ನು ನಂತರ ಘೋಷಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...