ಹಲಸು, ಮಾವು, ಸೀಬೆ ಲಾಭದಾಯಕ ಔಷಧೀಯ ಗುಣ ಹೊಂದಿವೆ –ಡಾ.ಕೆ.ಎನ್ ಇಂದಿರೇಶ್

Source: sonews | By Staff Correspondent | Published on 13th September 2019, 11:28 PM | State News |

ಕೋಲಾರ : ಹಲಸು, ಮಾವು, ಸೀಬೆ, ನೇರಳೆ ಹಣ್ಣು ಮರಗಳು ಅತ್ಯಂತ ಲಾಭದಾಯಕ ಹಾಗೂ ಔಷಧೀಯ ಗುಣಗಳನ್ನು ಹೊಂದಿವೆ. ಈ ಗಿಡಗಳನ್ನು ಬೆಳೆಯಲು ರೈತರು ಮುಂದಾಗಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಎನ್ ಇಂದಿರೇಶ್ ಅವರು ತಿಳಿಸಿದರು.

ಇಂದು ತೋಟಗಾರಿಕಾ ಮಹಾ ವಿದ್ಯಾಲಯ ಸಭಾಂಗಣದಲ್ಲಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಐಸಿಎಆರ್ –ಕೃಷಿ ವಿಜ್ಞಾನ ಕೇಂದ್ರ, ಕೋಲಾರ ತೋಟಗಾರಿಕಾ ಮಹಾವಿದ್ಯಾಲಯ ಕೋಲಾರ, ತೋಟಗಾರಿಕೆ ಇಲಾಖೆ ಕೋಲಾರ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತು ನಿಗಮ ನಿಯಮಿತ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಅಪ್ರಧಾನ ಹಣ್ಣಿನ ಬೆಳೆಗಳ ಭವಿಷ್ಯ ಹಾಗೂ ಅವುಗಳ ಸಂಸ್ಕರಣೆ ಮೌಲ್ಯವಧರ್Àನೆ ಅನ್ವೇಷಣೆಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರೈತರು ಅಪ್ರಧಾನ ಹಣ್ಣಿನ ಬೆಳೆಗಳು ಬೆಳೆಯುವುದರಿಂದ ಅನೇಕ ಅನುಕೂಲಗಳಿವೆ ಈ ಹಣ್ಣುಗಳಲ್ಲಿ ಪೋಷಕಾಂಶಗಳ ಲಭ್ಯತೆ ಹೆಚ್ಚಾಗಿದೆ ಆದ್ದರಿಂದ ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೋಲಾರ ಭಾಗದಲ್ಲಿ ಹಲಸು, ಹುಣಸೆ, ಸೀತಾಫಲ, ಬಾಳೆ ಹಣ್ಣು, ನೇರಳೆ ಹಣ್ಣು ಇನ್ನೂ 25 ರಿಂದ 30 ವಿವಿಧ ರೀತಿಯ ಅಪ್ರಧಾನ ಹಣ್ಣುಗಳನ್ನು ಕಾಣಬಹುದಾಗಿದೆ. ಹಿಂದೆ ಪ್ರಕೃತಿಯಲ್ಲಿ ಈ ರೀತಿಯ ಹಣ್ಣಿನ ಗಿಡಗಳನ್ನು ಕಾಣಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಜಮೀನಲ್ಲಿ ಬೆಳೆಯುವುದನ್ನು ನೋಡಬಹುದಾಗಿದೆ ಎಂದರು

 ಅಪ್ರಧಾನ ಹಣ್ಣಿನ ಬೆಳೆಗಳನ್ನು ರೈತರಿಗೆ ಪರಿಚಯಿಸಲು ಸೇವೆಯನ್ನು ಒದಗಿಸಲಾಗಿದ್ದು ಈ ಹಣ್ಣಗಳಿಂದ ಜ್ಯೂಸ್, ಜಾಮ್, ಜೆಲ್ಲು, ಮಾಡಬಹುದಾಗಿದೆ.  ಹಲಸಿನ ಹಣ್ಣಿನ್ನು ಸಂಸ್ಕರಣೆ ಮಾಡಿ ಚಿಪ್ಸ್, ಹಪ್ಪಳ, ಸಂಡಿಗೆ ಇನ್ನಿತರ ಮೌಲ್ಯಾಧಾರಿತ ದಿನಸಿ ಪದಾರ್ಥಗಳಿಗೆ ಬಳಸಬಹುದು ಎಂದು ತಿಳಿಸಿದರು.

 ನೇರಳೆ ಹಣ್ಣು, ಸೀತಾಫಲ, ರಾಮಾಫಲ, ಹನುಮಾನ್ ಫಲ ಈ ಹಣ್ಣುಗಳಲ್ಲಿ ಕ್ಯಾನ್ಸರ್ ನಿವಾರಕ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ರೈತರು ಇವುಗಳನ್ನು ಬೆಳೆಯಲು ಮುಂದಾಗಬೇಕು ಎಂದು ತಿಳಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನೆ ನಿರ್ದೇಶರಾದ ಡಾ. ಎನ್ ಬಸವರಾಜು ಅವರು ಮಾತನಾಡಿ ಪ್ರಧಾನ ಹಣ್ಣುಗಳ ಬೆಳೆಗಳು ಭವಿಷ್ಯದ ಬೆಳೆಗಳಾಗಿವೆ. ಪ್ರಧಾನ ಬೆಳೆಗಳಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ. ರೈತರು ಶೇ 40 ರಷ್ಟು ಹಣ್ಣು ಮತ್ತು ತರಕಾರಿಗಳನ್ನು ಬೆಂಗಳೂರಿಗೆ ಸಾಗಾಣಿಕೆ ಮಾಡುತ್ತಾರೆ. ಆದರೆ ಇಲ್ಲಿನ ರೈತರು ಹೆಚ್ಚಾಗಿ ಉಪಯೋಗಿಸುತ್ತಿಲ್ಲ ಎಂದರು. 

ಕೋಲಾರ ಭಾಗದ ರೈತರು ಶೇ 42 ರಷ್ಟು ಔಷಧಿ ಸಿಂಪರಣೆ ಮಾಡುವ ಬೆಳೆಗಳನ್ನು ಬೆಳೆಯುತ್ತಿದ್ದು, ಪೌಷ್ಠಿಕ ಆಹಾರದ ಬೆಳೆಗಳನ್ನು ಬೆಳೆಯುವುದರ ಬಗ್ಗೆ ಗಮನಹರಿಸಬೇಕಾಗಿದೆ. ಈ ಭಾಗದಲ್ಲಿ ಕೆಂಪುಮಿಶ್ರಿತ ಮಣ್ಣು ಇರುವುದರಿಂದ ಹೇರಳವಾಗಿ ಬೆಳೆಗಳನ್ನು ಬೆಳೆಯುವ ಶಕ್ತಿಯಿದ್ದು, ಆಳವಾಗಿ ಬೇರು ಬಿಡುವ ಸಾಮಥ್ರ್ಯ ಹಾಗೂ ನೀರಿನಾಂಶವನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚಿದೆ ಎಂದು ತಿಳಿಸಿದರು. 

ನೆಲ ಸಂರಕ್ಷಣೆ ಮಾಡಿ ಸಾವಯುವ ಗೊಬ್ಬರಗಳನ್ನು ಹೆಚ್ಚಾಗಿ ಬಳಕೆ ಮಾಡಿ ಸಾಧ್ಯವಿರುವ ಸ್ಥಳಗಳಲ್ಲಿ ಹಲಸು, ಸೀಬೆ, ಸೀತಾಫಲ, ನೇರಳೆಹಣ್ಣು, ತಾಳೆಹಣ್ಣು ಬೆಳೆಯುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. 

ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ|| ಜಿ.ಎಸ್ ಚಿಕ್ಕಣ್ಣ ಅವರು ಮಾತನಾಡಿ, ಕೋಲಾರ ಜಿಲ್ಲೆಯು ಬರಪೀಡಿತ ಜಿಲ್ಲೆಯಾಗಿದ್ದು, ಆದರೂ ಸಹ ಇಲ್ಲಿ ಹೆಚ್ಚಿನ ಹಣ್ಣಿನ ಮರಗಳನ್ನು ಬೆಳೆಯುವ ಅವಕಾಶವಿದೆ. ಅಪ್ರಧಾನ ಹಣ್ಣುಗಳನ್ನು ಬೆಳೆಯುವುದರಿಂದ ಉತ್ತಮವಾದ ಆದಾಯವನ್ನು ಪಡೆಯಬಹುದಾಗಿದೆ. ಹಣ್ಣುಗಳನ್ನು ಉಪಯೋಗಿಸುವುದರಿಂದ ಖನಿಜಾಂಶಗಳು, ಪೌಷ್ಟಿಕಾಂಶಗಳು ಹೇರಳವಾಗಿ ದೊರೆತು ವ್ಯಕ್ತಿಯ ಬೆಳವಣಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು. 

ಜಿಲ್ಲಾಧಿಕಾರಿಯಾದ ಜೆ. ಮಂಜುನಾಥ್ ಅವರು ಕಾರ್ಯಾಗಾರದ ಪುಸ್ತಕ ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ|| ಎಸ್.ಬಿ  ದಂಡಿನ್, ಸಂಶೋಧಕನಾ ನಿರ್ದೇಶಕರಾದ ಡಾ|| ಎನ್. ಬಸವರಾಜು, ಕೋಲಾರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ|| ಬಿ.ಜಿ. ಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಕೆ. ತುಳಸೀರಾಮ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಎಂ.ಗಾಯಿತ್ರಿ, ಸಾಮಾಜಿಕ ಅರಣ್ಯ ಇಲಾಖೆಯು ಉಪನಿರ್ದೇಶಕರಾದ ದೇವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next