ಆಳಸಮುದ್ರದಲ್ಲಿ ಸಿಲುಕಿದ ಮೀನುಗಾರರು. ಕೋಸ್ಟ್ ಗಾರ್ಡ್ ನಿಂದ ಯಶಸ್ವಿ ಕಾರ್ಯಾಚರಣೆ.

Source: SO News | Published on 11th September 2020, 11:31 AM | Coastal News | Don't Miss |

ಭಟ್ಕಳ :  ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ದೋಣಿಯಲ್ಲಿ ಸಿಲುಕಿದ ಮೀನುಗಾರರನ್ನ 44 ಗಂಟೆಯೊಳಗೆ ರಕ್ಷಿಸಿದ ಘಟನೆ ನಡೆದಿದೆ.

ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಯಾಂತ್ರಿಕ ದೋಣಿ ಹೊನ್ನಾವರ ಬಂದರು ಮೂಲಕ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ಮಧ್ಯಾಹ್ನ 2 ಗಂಟೆಗೆ ದೋಣಿಯ ಮಶೀನ್ ಹಾಳಾಗಿದ್ದರಿಂದ ಸಮಸ್ಯೆಗೆ ಈಡಾಯಿತು.

ಬೋಟಲ್ಲಿ ಒಟ್ಟು 24 ಮೀನುಗಾರರಿದ್ದರು. ಅಪಾಯಕ್ಕೆ ಸಿಲುಕಿದ ಮೀನುಗಾರರು ರಕ್ಷಣೆಗಾಗಿ ಸಂಬಂಧಪಟ್ಟ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಪೊಲೀಸರ ಸಹಾಯ ಯಾಚಿಸಿದ್ದರು.

 ನಿನ್ನೆ ಸಂಜೆ ಮಂಗಳೂರಿನ ಕೋಸ್ಟ್ ಗಾರ್ಡ್  ಸಿಬ್ಬಂದಿಗಳು ನೌಕೆಯೊಂದಿಗೆ ಸ್ಥಳಕ್ಕೆ ತೆರಳಿದರಾದರೂ ಹವಮಾನ ವೈಪರೀತ್ಯದಿಂದಾಗಿ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ.

ಶುಕ್ರವಾರ ಬೆಳಗ್ಗೆ  ರೋಪ್ ಮೂಲಕ ಯಾಂತ್ರಿಕ ದೋಣಿಯ ಸಮೀಪ ಸಾಗಿ ಎಲ್ಲಾ ಮೀನುಗಾರರನ್ನ ರಕ್ಷಿಸಿದ್ದಾರೆ. ಇನ್ನೂ ಮಧ್ಯಾಹ್ನದ ಹೊತ್ತಿಗೆ ಅವರನ್ನ ಕಾರವಾರ ಇಲ್ಲವೇ ಮಂಗಳೂರು ತೀರಕ್ಕೆ ಕರೆತರಲಾಗುತ್ತದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...