ಕಾರವಾರಕ್ಕೆ ಮೀನುಗಾರಿಕಾ ಸಚಿವ ಅಂಗಾರ ಭೇಟಿ. ಮೀನುಗಾರರಿಂದ ಮನವಿ ಸಲ್ಲಿಕೆ.

Source: SO News | By Laxmi Tanaya | Published on 7th June 2021, 8:57 PM | Coastal News | Don't Miss |

ಕಾರವಾರ : ಮೀನುಗಾರಿಕೆ, ಒಳನಾಡು ಮತ್ತು ಬಂದರು ಸಚಿವ ಎಸ್ ಅಂಗಾರ ಕಾರವಾರಕ್ಕೆ ಸೋಮವಾರ ಭೇಟಿ ನೀಡಿದರು.

ಮಾಜಾಳಿಯಲ್ಲಿ ಉದ್ದೇಶಿಸಿರುವ ಮೀನುಗಾರಿಕೆ ಬಂದರು ಯೋಜಿತ ಪ್ರದೇಶ ಪರಿಶೀಲಿಸಿ ಸ್ಥಳೀಯರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು. ಬಳಿಕ ಬೈತಖೋಲ್ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರರು ವಿವಿಧ ಬೇಡಿಕೆಗಳ ಬಗ್ಗೆ ಮನವಿ ನೀಡಿದರು.

ಈ ವೇಳೆ ಮಾದ್ಯಮದವರೊಂದಿಗೆ ಅವರು ಮಾತನಾಡಿ, ತಾವು ಸಚಿವರಾಗಿ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ರಾಜ್ಯದಲ್ಲಿ ಮೀನುಗಾರರಿಗೆ ಕರೋನಾ ಪರಿಹಾರ ಘೋಷಣೆ ವಿಚಾರದಲ್ಲಿ ಇನ್ನೂ ಸರಿಯಾದ ರೂಪುರೇಷೆ ಸಿದ್ದವಾಗಿಲ್ಲ.  ಕಳೆದ ಬಾರೀ ಮೀನುಗಾರರಿಗೆ ಸೂಕ್ತ ಪರಿಹಾರ ಘೋಷಿಸಿರಲಿಲ್ಲ. ಈ ಬಾರೀ  ಮುಖ್ಯಮಂತ್ರಿಗಳು ಗಮನ‌ ನೀಡಿದ್ದಾರೆಂದರು.

 ಇದೇ ಶುಕ್ರವಾರ ಬೆಂಗಳೂರಿನಲ್ಲಿ ಮೀನುಗಾರಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗಡದುಕೊಳ್ಳುವುದಾಗಿ ಹೇಳಿದರು.

   ಡಿಸೇಲ್, ಸೀಮೆಎಣ್ಣೆ ಸಬ್ಸಿಡಿ ಬಾಕಿ ಇರುವ ಬಗ್ಗೆ  ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.  ಹೆಚ್ಚುವರಿ ಹಣ ಬಿಡುಗಡೆಗೆ ಒತ್ತಾಯಿಸಿದ್ದೇವೆ ಎಂದರು.  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರೀಯಿಸಿದ ಅವರು,  ನಾವೆಲ್ಲರೂ ಒಂದು ವಿಚಾರದಲ್ಲಿ ಬೆಳೆದು ಬಂದವರು. ನಮಗೆ ನಾಯಕತ್ವದ ಪ್ರಶ್ನೆ ಬರೋದಿಲ್ಲ. ನಾವು ಯಾವ ನಾಯಕತ್ವದಲ್ಲಿ ಇರಲು ಸಿದ್ದರಿದ್ದೇವೆ. ಹಾಗಂತ ಯಡಿಯೂರಪ್ಪ ಅವರನ್ನ ಬದಲಾಯಿಸಲು ಬಯಸುವುದಿಲ್ಲ  ಸಚಿವ ಎಸ್ ಅಂಗಾರ ಹೇಳಿದರು.

ಈ ಸಂದರ್ಭದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ , ಜಿಲ್ಲಾ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಇದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...