ತದಡಿ ಬಂದರು ವಿಸ್ತರಣೆ ಮಾಡುವಂತೆ ಮೀನುಗಾರರಿಂದ ಸಚಿವರಿಗೆ ಮನವಿ.

Source: SO News | By Laxmi Tanaya | Published on 7th June 2021, 9:29 PM | Coastal News | Don't Miss |

ಕುಮಟಾ  : ಮೀನುಗಾರಿಕೆ ಸಚಿವ ಎಸ್ ಆಂಗಾರ್ ತಾಲೂಕಿನ ತದಡಿ ಸಹಕಾರಿ ಸಂಘಕ್ಕೆ  ಭೇಟಿ ನೀಡಿದರು. ತದಡಿ ಬಂದರು ಕಿರಿದಾಗಿದ್ದು ಯಾಂತ್ರಿಕ ದೋಣಿಗಳು  ಲಂಗರು ಹಾಕಲು ಅನುಕೂಲವಾಗಲು ಬಂದರು ವಿಸ್ತರಣೆ ಮಾಡಿಕೊಡಬೇಕೆಂದು ಸಂಘದ ವತಿಯಿಂದ ಮನವಿ ನೀಡಲಾಯಿತು

ಬಂದರಿನ ಅಳಿವೆ ಹೂಳು ಎತ್ತುವುದು,  ಮೀನುಗಾರರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು. ಖಾಲಿ ಇರುವ ಪೋರ್ಟ್ ಧಕ್ಕೆ ಮೀನುಗಾರರಿಗೆ ಉಪಯೋಗವಾಗಬೇಕು. ಮೀನುಗಾರರು ಕರೋನ ಹಾಗು ಪ್ರಕೃತಿ ವಿಕೋಪದಿಂದಾಗಿ ಎರಡು ವರ್ಷದಿಂದ ನಷ್ಟ ಹೊಂದಿದ್ದಾರೆ. ಎಲ್ಲಾ ರೂಮ್ ಬಾಡಿಗೆ ಹಾಗು ಬೊಟ್ ಇಳಿದಾಣ ಶುಲ್ಕವನ್ನು ಬಿಡುವಂತೆ, ಮತ್ತು ಮತ್ಸ್ಯ ಸಂಪದ ಯೋಜನೆ ಬಡ ಮೀನು ಗಾರರಿಗೆ ಸಿಗುವಂತೆ ಮನವಿ ನೀಡಿದರು.

 ಈ ವೇಳೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡಸಿದ್ದಾರೆ.  ಮೀನುಗಾರರ ಸಹಕಾರಿ ಸಂಘ ಲಿ ತದಡಿ ಇದರ ಅಧ್ಯಕ್ಷರು ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರು ಹಾಗು ಸದಸ್ಯರು  ಬೋಟ್ ಯೂನಿಯನ್ ಅಧ್ಯಕ್ಷರು ಹಾಗು ಸದಸ್ಯರು ಎಲ್ಲಾ ಸಿಬ್ಬಂದಿಗಳು ಊರ ನಾಗರಿಕರು ಉಪಸ್ಥಿತರಿದ್ದರು.

ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...